Friday, October 7, 2022
Powertv Logo
Homeಸಿನಿಮಾಟಾಲಿವುಡ್​ಗೆ ಶಶಿಕುಮಾರ್ ಪುತ್ರ ಆದಿತ್ಯ..!

ಟಾಲಿವುಡ್​ಗೆ ಶಶಿಕುಮಾರ್ ಪುತ್ರ ಆದಿತ್ಯ..!

ಸ್ಯಾಂಡಲ್​ವುಡ್​ ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಆದಿತ್ಯ ಟಾಲಿವುಡ್​ ಮೂಲಕ ಸಿನಿ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆರಿಪ್ಕಾ ಆ್ಯಕ್ಷನ್ ಕಟ್ ಹೇಳಿರುವ ‘ಸೀತಾಯಣಂ’ ಸಿನಿಮಾದಲ್ಲಿ ಹೀರೋ ಆಗಿ ಆದಿತ್ಯ ನಟಿಸಿದ್ದು, ಜೂನಿಯರ್ ಸುಪ್ರೀಂ ಹೀರೋಗೆ ಮುಂಬೈ ಸುಂದರಿ ಅನಹಿತ ಭೂಷಣ್​ ನಾಯಕಿ.
ಈಗಾಗಲೇ ಸಿನಿಮಾದ ಶೂಟಿಂಗ್ ಮುಗಿದಿದ್ದು, ಕನ್ನಡದಲ್ಲೂ ‘ಸೀತಾಯಣಂ’ ಹೆಸ್ರಲ್ಲೇ ರಿಲೀಸ್ ಆಗಲಿದೆ. ಇದೊಂದು ಪಕ್ಕಾ ರೊಮ್ಯಾಂಟಿಕ್​ ಲವ್​ಸ್ಟೋರಿ ಕಥಾಹಂದರ ಹೊಂದಿದ್ದು, ಡಬ್ಬಿಂಗ್ ಕೆಲಸಗಳು ನಡೀತಾ ಇವೆ.
2018ರಲ್ಲಿ ‘ಮೊಡವೆ’ ಚಿತ್ರದ ಮೂಲಕ ಆದಿತ್ಯ ಸ್ಯಾಂಡಲ್​​ವುಡ್​ಗೆ ಎಂಟ್ರಿ ಕೊಡೋಕೆ ತಯಾರಿ ನಡೆದಿತ್ತು. ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಹೂರ್ತಕ್ಕೆ ಬಂದು ಕ್ಲಾಪ್ ಕೂಡ ಮಾಡಿದ್ರು. ಆದ್ರೆ ಆ ಸಿನಿಮಾ ಬಗ್ಗೆ ಸದ್ಯ ಯಾವ್ದೇ ಸುದ್ದಿಯಿಲ್ಲ.

- Advertisment -

Most Popular

Recent Comments