Homeದೇಶ-ವಿದೇಶಪಾಕ್​ ಮಾಜಿ ಪಿಎಂ ಶರೀಫ್ ಮತ್ತೆ ಜೈಲಿಗೆ..!

ಪಾಕ್​ ಮಾಜಿ ಪಿಎಂ ಶರೀಫ್ ಮತ್ತೆ ಜೈಲಿಗೆ..!

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಳು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್​ ಶರೀಫ್​ ಅವರ ಜಾಮೀನು ಅವಧಿ ಮುಕ್ತಾಯಗೊಂಡಿದ್ದು,ಮತ್ತೆ ಪುನಃ ಜೈಲು ಸೇರಲಿದ್ದಾರೆ.
ಮೂರು ಭಾರಿ ಪಾಕ್​ ಪ್ರಧಾನಿಯಾಗಿದ್ದ ನವಾಜ್​ ಶರೀಫ್​ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ಏಳು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಆರು ತಿಂಗಳ ಜಾಮೀನು ಸಿಕ್ಕಿತ್ತು. ಆ ಅವಧಿ ಇಂದು ಪೂರ್ಣಗೊಂಡಿದ್ದು, ಮತ್ತೆ ಕೊಟ್​ ಲಾಕ್​​ ಪತ್​​ ಜೈಲು ಸೇರಲಿದ್ದಾರೆ. ಅವರೇ ಸ್ವಯಂ ಪ್ರೇರಿತರಾಗಿ ಇಂದು ಜೈಲು ಸೇರುವ ಸಾಧ್ಯತೆ ಇದೆ.
ಮಾನಸಿಕ ಒತ್ತಡ, ತೀವ್ರ ಆತಂಕದಲ್ಲಿರುವುದರಿಂದ ಶಾಶ್ವತ ಜಾಮೀನು ನೀಡಬೇಕು ಅಂತ ಏಪ್ರಿಲ್ 27ರಂದು ಶರೀಫ್​ ಮೇಲ್ಮನವಿ ಸಲ್ಲಿಸಿದ್ದರು. ಆದ್ರೆ, ವೈದ್ಯಕೀಯ ಚಿಕಿತ್ಸೆ ಆಧಾರದ ಮೇಲೆ ಜಾಮೀನು ವಿಸ್ತರಣೆ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು.

LEAVE A REPLY

Please enter your comment!
Please enter your name here

- Advertisment -

Most Popular

Recent Comments