Home ಸಿನಿ ಪವರ್ ಕೊನೆಗಳಿಗೆಯಲ್ಲೂ ಅಪ್ಪು, ಶಿವಣ್ಣ, ರಾಘಣ್ಣ ಅಂತ ಕನವರಿಸ್ತಿದ್ರಂತೆ ಶಾಂತಮ್ಮ..!

ಕೊನೆಗಳಿಗೆಯಲ್ಲೂ ಅಪ್ಪು, ಶಿವಣ್ಣ, ರಾಘಣ್ಣ ಅಂತ ಕನವರಿಸ್ತಿದ್ರಂತೆ ಶಾಂತಮ್ಮ..!

ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಶಾಂತಮ್ಮ ಅವ್ರು ಇನ್ನು ಬರೀ ನೆನಪು ಮಾತ್ರ. ಹಿರಿಯ ಕಲಾವಿದೆ ಭಾನುವಾರ ಸಂಜೆ ನಮ್ಮನ್ನೆಲ್ಲಾ ಅಗಲಿದರು. ಅವರು ಚಂದನವನಕ್ಕೆ ನೀಡಿದ ಕೊಡುಗೆ ಅಪಾರ.  ವರನಟ ಡಾ. ರಾಜ್​ಕುಮಾರ್, ಸಾಹಸಸಿಂಹ ಡಾ. ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್ ಸೇರಿದಂತೆ ಅನೇಕ ಸಿನಿದಿಗ್ಗಜರ ಜೊತೆ ನಟಿಸಿದ್ದ ಶಾಂತಮ್ಮನವರ ನಿಧನಕ್ಕೆ ಇಡೀ ನಾಡು ಕಂಬನಿ ಮಿಡಿದಿದೆ.

ಇನ್ನು ಅವರು ಸಾಯುವ ಮುನ್ನ ಅಪ್ಪು, ಶಿವಣ್ಣ, ರಾಘಣ್ಣ ಅಂತ ವರನಟ ಡಾ. ರಾಜ್​ಕುಮಾರ್ ಫ್ಯಾಮಿಲಿಯನ್ನು ಸ್ಮರಿಸಿಕೊಳ್ತಿದ್ರಂತೆ. ಈ ಬಗ್ಗೆ ಸ್ವತಃ ಶಾಂತಮ್ಮರ ಮಗಳು ಸುಮಾ ಮಾತಾಡಿದ್ದಾರೆ.

‘ಅಮ್ಮನಿಗೆ 95 ವರ್ಷ ವಯಸ್ಸಾಗಿತ್ತು… ಹೃದಯ ಸಂಬಂಧಿ ಮತ್ತು ನೆನಪಿನ ಶಕ್ತಿ ಸಮಸ್ಯೆ ಹೊಂದಿದ್ರು. ಆದ್ರಿಂದ ಬೆಂಗಳೂರಿಗೆ ಕರೆಸಿಕೊಂಡಿದ್ವಿ. ಶನಿವಾರ ರಾತ್ರಿ ಬಹಳ ಕಫ ಕಟ್ಟಿಕೊಂಡಿತ್ತು. ಆಸ್ಪತ್ರೆಗಳಿಗೆ ಕರ್ಕೊಂಡ್ ಹೋದ್ರೂ ಬೆಡ್ ಸಿಗ್ಲಿಲ್ಲ. ಚಿಕಿತ್ಸೆ ಸಿಗ್ದೆ ಸಮಸ್ಯೆಯಾಯ್ತು. ಸರಿಯಾದ ಟೈಮ್​ಗೆ ಆಸ್ಪತ್ರೆ ಸಿಕ್ಕಿದ್ದಿದ್ರೆ ಅಮ್ಮ ಬದುಕಿರ್ತಿದ್ರೇನೋ’ ಅಂತ ಬೇಸರ ತೋಡಿಕೊಂಡಿದ್ದಾರೆ ಪುತ್ರಿ ಸುಮಾ.

‘ಅಪ್ಪು, ಶಿವಣ್ಣ, ರಾಘಣ್ಣ, ಅಂತ ಕನವರಿಸ್ತಿದ್ರು. ಅವ್ರನ್ನು ನೋಡ್ಬೇಕು ಅಂತಿದ್ರು. ಮಗಳಾದ ನನ್ನ ನೆನಪೇ ಅವ್ರಿಗಿರ್ಲಿಲ್ಲ. ಅಣ್ಣವ್ರಾ ಕುಟುಂಬವನ್ನು ಅಷ್ಟಿಷ್ಟ ಪಡ್ತಿದ್ರು’ ಅಂತ ಹೇಳಿದ್ದಾರೆ. ಲಿಂಗ ಸಿನಿಮಾ ಶೂಟಿಂಗ್​ ಸಂದರ್ಭದಲ್ಲಿ ರಜನಿಕಾಂತ್​ ಎಲ್ಲರ ಮುಂದೆ ಅಮ್ಮನ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ರು ಅಂತಲೂ ಸುಮಾ ಸ್ಮರಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಡ್ರಗ್ ಜಾಲದ ಹಿಂದೆ ದೊಡ್ಡ ದೊಡ್ಡ ಕುಳಗಳಿವೆ: ಇಂದ್ರಜಿತ್ ಲಂಕೇಶ್

ಬೆಂಗಳೂರು: ಡ್ರಗ್ಸ್ ಜಾಲದ ಹಿಂದೆ ದೊಡ್ಡ ಕುಳಗಳಿವೆ ಎಂದು ಇಂದ್ರಜಿತ್ ಲಂಕೇಶ್ ಕಮೀಷನರ್ ಕಚೇರಿ ಬಳಿ ಹೇಳಿದ್ದಾರೆ. ಡ್ರಗ್ಸ್ ಜಾಲದಲ್ಲಿ ಸಣ್ಣ ಸಣ್ಣ ಮೀನು ಹಿಡಿದಿದ್ದಾರೆ. ಡೊಡ್ಡವರನ್ನು ಹಿಡಿಯಬೇಕು ಎಂದಿದ್ದಾರೆ. ಡಿಸಿಪಿ ಬಸವರಾಜ್ ಅಂಗಡಿ...

‘ಶಾಲಾ ಶುಲ್ಕದ ವಿಚಾರವಾಗಿ ಸರ್ಕಾರಕ್ಕೆ ಡೆಡ್‌ ಲೈನ್ ಕೊಟ್ಟ ಪೋಷಕರು’

ಬೆಂಗಳೂರು: ಖಾಸಗಿ ಶಾಲಾ ಶುಲ್ಕದ ಟಾರ್ಚರ್ ಹಿನ್ನಲೆಯಲ್ಲಿ ಶುಲ್ಕದ ವಿಚಾರವಾಗಿ ಪೋಷಕರು ಸರ್ಕಾರಕ್ಕೆ ಡೆಡ್ ಲೈನ್ ಕೊಟ್ಟಿದ್ದಾರೆ. ಶಾಲಾ ಶುಲ್ಕದ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಪೋಷಕರು ಆಗ್ರಹಿಸಿದ್ದಾರೆ. ಈ ಹಿಂದೆ ಮೂರು ಭಾರಿ...

‘ಒಂದೇ ಕುಟುಂಬದ ನಾಲ್ವರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ’

ರಾಯಬಾಗ: ರೈಲಿಗೆ ತಲೆ ಕೊಟ್ಟು ಒಂದೇ ಕುಟುಂಬದ 4 ಜನ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆಯೊಂದು ನಡೆದಿದೆ.  ಬೆಳಗಾವಿ ಜಿಲ್ಲೆ ರಾಯಬಾಗ ರೈಲು ನಿಲ್ದಾಣ ಬಳಿ ಈ ಘಟನೆ ನಡೆದಿದ್ದು,  ವೃದ್ಧ ತಂದೆ, ತಾಯಿ,...

ಕುಡಿದ ಮತ್ತಿನಲ್ಲಿ ಜಗಳ ಯುವಕರಿಬ್ಬರ ಮೇಲೆ ಮಾರಾಣಾಂತಿಕ ಹಲ್ಲೆ : ಓರ್ವ ಸಾವು

ಶಿವಮೊಗ್ಗ: ಕುಡಿದ ಮತ್ತಿನಲ್ಲಿ ಬೆಳೆದ ಮಾತಿಗೆ ಮಾತು, ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.  ನಗರದ ಎನ್.ಟಿ. ರಸ್ತೆಯ ಸುಂದರ ಆಶ್ರಯ ಪಕ್ಕದ ವಿಠಲ ದೇವಾಲಯದ ಬಳಿಯೇ ಈ ಘಟನೆ ನಡೆದಿದ್ದು, ಐದಾರು ಯುವಕರ ತಂಡ...

Recent Comments