Sunday, May 29, 2022
Powertv Logo
Homeಸಿನಿಮಾಕೊರೋನಾ ಸೋಂಕಿತರ ಕ್ವಾರಂಟೈನ್​ಗಾಗಿ 4 ಅಂತಸ್ತಿನ ಕಟ್ಟಡವನ್ನು ಬಿಟ್ಟುಕೊಟ್ಟ ಶಾರುಖ್ ಖಾನ್

ಕೊರೋನಾ ಸೋಂಕಿತರ ಕ್ವಾರಂಟೈನ್​ಗಾಗಿ 4 ಅಂತಸ್ತಿನ ಕಟ್ಟಡವನ್ನು ಬಿಟ್ಟುಕೊಟ್ಟ ಶಾರುಖ್ ಖಾನ್

ಮುಂಬೈ: ಮಹಾಮಾರಿ ಕೊರೋನಾ ವೈರಸ್​ನಿಂದ ದೇಶಕ್ಕೆ ದೇಶವೇ ತತ್ತರಿಸಿ ಹೋಗಿದ್ದು, ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಇದಕ್ಕೆ ಈಗಾಗಲೇ ವಿವಿಧ ಕ್ಷೇತ್ರಗಳು ಹಾಗೂ ಅನೇಕ ಸೆಲೆಬ್ರೆಟಿಗಳು ಸಹಾಯಾಸ್ತ ಚಾಚಿದ್ದಾರೆ. ಇದೀಗ ಬಾಲಿವುಡ್​ನ ಬಾದ್​ಶಾ ಶಾರುಖ್ ಖಾನ್ ತಮ್ಮ ಒಡೆತನದ ಕಂಪೆನಿಯನ್ನು ಕ್ವಾರಂಟೈನ್​ಗಾಗಿ ಬಿಟ್ಟುಕೊಟ್ಟಿದ್ದಾರೆ.

ಶಾರುಖ್ ಖಾನ್ ಕೋವಿಡ್-19 ವಿರುದ್ಧದ ಸಮರಕ್ಕೆ ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ಕೊರೋನಾ ಸೋಂಕಿತರು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಅವರನ್ನು ಕ್ವಾರಂಟೈನ್  ಮಾಡೋದಕ್ಕಾಗಿ ಶಾರುಖ್ ದಂಪತಿ ತಮ್ಮ ನಾಲ್ಕು ಅಂತಸ್ತಿನ  ತಮ್ಮ ಕಚೇರಿಯನ್ನು ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬೃಹತ್ ಮುಂಬೈ ಮುನ್ಸಿಪಾಲ್ ಕಾರ್ಪೋರೇಷನ್ ಶಾರುಖ್ ದಂಪತಿಗೆ ಧನ್ಯವಾದಗಳನ್ನು ಹೇಳಿದ್ದು, ನಿಮ್ಮ ಸಹಾಯದಿಂದ ಸೋಂಕಿಗೆ ಒಳಗಾಗುವ ವೃದ್ಧರು, ಮಹಿಳೆಯರು ಹಾಗೂ ಮಕ್ಕಳಿಗೆ ತುಂಬಾ ನೆರವಾಗಲಿದೆ ಎಂದು ತಿಳಿಸಿದೆ. 

LEAVE A REPLY

Please enter your comment!
Please enter your name here

- Advertisment -

Most Popular

Recent Comments