Home ಸಿನಿ ಪವರ್ ಬಾಲಿವುಡ್ ಶಾರುಖ್ ಗೆ ಹೆದರಿದ್ರಾ ಅನುಷ್ಕಾ...!

ಶಾರುಖ್ ಗೆ ಹೆದರಿದ್ರಾ ಅನುಷ್ಕಾ…!

ಕಿಂಗ್ ಖಾನ್ ಶಾರುಖ್ ಖಾನ್ ಕಂಡ್ರೆ ಅನುಷ್ಕಾ ಶರ್ಮಾಗೆ ಸಿಕ್ಕಾಪಟ್ಟೆ ಭಯ ಇತ್ತಂತೆ. ಹೌದ, ನಿಜವಾಗ್ಲೂ ಶಾರುಖ್ ಗೆ ಹೆದರಿದ್ರಾ ಅನುಷ್ಕಾ?

ಹ್ಞೂಂ, ನಿಜವಾಗಿಯೂ ಅನುಷ್ಕಾಗೆ ಒಂದ್ ಕಾಲದಲ್ಲಿ ಶಾರೂಖ್ ಅಂದ್ರೆ ಭಯ ಇತ್ತಂತೆ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ನಿಮ್ಗೆ ಗೊತ್ತಿರುವ ಹಾಗೆ ಅನುಷ್ಕಾ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದು 2008 ರಲ್ಲಿ. ‘ರಬ್ ನೆ ಬನಾ ದಿ ಜೋಡಿ’  ಇವರ ಫಸ್ಟ್ ಮೂವಿ. ಈ ಮೂವಿ ಹೀರೋ ಶಾರುಖ್ ಖಾನ್. ಫಸ್ಟ್ ಮೂವಿಯಲ್ಲೇ ಸ್ಟಾರ್ ಆ್ಯಕ್ಟರ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ರು ಅನುಷ್ಕಾ.

ಆಗಿನ್ನೂ ಸಿನಿಮಾ ಇಂಡಸ್ಟ್ರಿಗೆ ಅನುಷ್ಕಾ ಹೊಸಬಳಾಗಿದ್ರಿಂದ ಶಾರುಖ್ ಜೊತೆ ಮಾತಾಡಕ್ಕೆ ಭಯಪಡ್ತಿದ್ರಂತೆ. ಶಾರುಖ್ ಖಾನ್ ಅವರಿಗೆ ತುಂಬಾ ರೆಸ್ಪೆಕ್ಟ್ ಕೊಡೋ ಇವರು, ‌ಮೊದ‌ ಮೊದಲು ಶಾರುಖ್ ಖಾನ್ ಕಂಡ್ರೆ ಭಯ ಪಡ್ತಿದ್ರಂತೆ. ಏನಾದ್ರು ಹೇಳ್ಬೇಕು ಅಂತ ಅನಿಸಿದ್ರೂ ಹೇಳ್ಕೊತ್ತಿರ್ಲಿಲ್ಲ. ಅವ್ರು ಏನ್ ಅನ್ಕೋತ್ತಾರೋ ಅಂತ ಸುಮ್ನೆ ಇರ್ತಿದ್ರಂತೆ. ತುಂಬಾ ಹೆದರಿಕೊಂಡು ಮಾತಾಡ್ತಿದ್ರಂತೆ.  ಈಗ ಅಂಥಾ ಯಾವ್ದೇ  ಭಯ ಅನುಷ್ಕಾಗೆ  ಇಲ್ಲ, ಶಾರುಖ್ ಜೊತೆ ಬಾಂಡಿಂಗ್ ಚೆನ್ನಾಗಿದೆಯಂತೆ. ಯಾವ್ದೇ ರೀತಿ ಸಂಕೋಚವಿಲ್ದೆ ಮಾತಾಡ್ತಾರಂತೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments