Home ರಾಜ್ಯ ‘ಇವರ ಈ ಕಾರ್ಯಕ್ಕೆ ಪ್ರಧಾನಿ ಮೋದಿಯವರಿಂದ ಶಹಬ್ಬಾಶ್ ಗಿರಿ’

‘ಇವರ ಈ ಕಾರ್ಯಕ್ಕೆ ಪ್ರಧಾನಿ ಮೋದಿಯವರಿಂದ ಶಹಬ್ಬಾಶ್ ಗಿರಿ’

ಚಿತ್ರದುರ್ಗ: ಬದುಕಿನಲ್ಲಿ ಒಂದೊಳ್ಳೆ ಮನೆ ಕಟ್ಟಬೇಕು ಅಂದುಕೊಳ್ಳುವ ಜನರಿಗೆ ಅದು ಸಾಧ್ಯ ಆಗೋದೇ ಇಲ್ಲ. ಆದರೆ ಚಿತ್ರದುರ್ಗ ಜಿಲ್ಲೆಯ ಈ ಕುಟುಂಬಕ್ಕೆ ಅವರ ಕನಸು ನನಸಾಗಿದೆ. ಅಷ್ಟೆ ಅಲ್ಲ ಪ್ರಧಾನಿ ಮೋದಿ ಅವರೇ ಇವರ ಕಾರ್ಯಕ್ಕೆ ಶಹಬ್ಬಾಶ್ ಹೇಳಿದ್ದಾರೆ. ಆ ಕುಟುಂಬದ ಕಾರ್ಯ ಇಡೀ ದೇಶಕ್ಕೆ ಪರಿಚಿತವಾಗಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ವೆಂಕಟೇಶ್ವರ ಬಡಾವಣೆಯಲ್ಲಿ ಇರೋ ಈ ಮನೆ ಪಂಕಜಮ್ಮ ಹಾಗೂ ಕರಿಬಸಪ್ಪ ಅವರಿಗೆ ಸೇರಿದ್ದು. ಮೂಲತಃ ಇವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಸಿದ್ದಾಪುರ ಗ್ರಾಮದವರು. ಕರಿಬಸಪ್ಪ ವಿವಾಹದ ಬಳಿಕ ಪತ್ನಿ ಪಂಕಜಮ್ಮ ಅವರ ಜೊತೆ ಚಳ್ಳಕೆರೆಯಲ್ಲಿಯೇ ವಾಸವಿದ್ದಾರೆ. ಈ ಪುಟ್ಟ ಸಂಸಾರಕ್ಕೆ ಚೊಕ್ಕದಾದ ಮನೆ ಕಟ್ಟಬೇಕು ಅನ್ನೋ ಮಹದಾಸೆ ಇತ್ತು. ಇವರ ಮಹದಾಸೆಗೆ ನೆರವಾಗಿದ್ದು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ.

ಕಳೆದ ಹತ್ತು ವರ್ಷಗಳಿಂದ ಚಳ್ಳಕೆರೆ ನಗರದಲ್ಲಿ ವಾಸವಿರುವ ಇವರು ಬದುಕಿಗಾಗಿ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ಈ ಯೋಜನೆಯಲ್ಲಿ ಮನೆ ನಿರ್ಮಿಸಿಕೊಳ್ಳಲು ಅವಕಾಶ ಸಿಕ್ಕಿದ್ದು ಮನೆ ಬಾಗಿಲಿಗೆ ಭಾಗ್ಯವೇ ಬಂದಂತಾಗಿದೆ. ಯೋಜನೆಗೆ ಕೇಂದ್ರ ಸರ್ಕಾರದಿಂದ ನೀಡುವ ಯೋಜನೆಯಲ್ಲಿ 1.5 ಲಕ್ಷ, ರಾಜ್ಯ ಸರ್ಕಾರದಿಂದ 1.20 ಲಕ್ಷ ರೂ ಸಹಾಯಧನ ನೀಡಲಾಗಿದೆ. ಇದರಲ್ಲಿ ಪಂಕಜಮ್ಮ ಅಂದುಕೊಂಡಂತೆ ಇದ್ದ 20X30 ಅಳತೆಯ ಜಾಗದಲ್ಲಿ ಸುಂದರವಾದ ಮನೆ ನಿರ್ಮಿಸಿಕೊಂಡಿದ್ದಾರೆ. ಇವರ ಇನ್ನೊಂದು ಸೌಭಾಗ್ಯ ಅಂದರೆ ಅತ್ಯುತ್ತಮ ಕುಟುಂಬ ವರ್ಗ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೊದಿಯವರು ಆನ್​ಲೈನ್ ಮೂಲಕ ಪ್ರಶಸ್ತಿ ನೀಡಿ ಇವರ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಮನೆ ನಿರ್ಮಿಸುವುದರಲ್ಲಿ ಈ ಕುಟುಂಬ ರಾಜ್ಯದಲ್ಲಿ ಎರಡನೇ ಪ್ರಶಸ್ತಿಗೆ ಆಯ್ಕೆ ಆಗಿದೆ. ಪಂಕಜಮ್ಮ ಕುಟುಂಬಕ್ಕೆ ಚಿತ್ರದುರ್ಗ ಡಿ ಸಿ ಕಚೇರಿಯಲ್ಲಿ ಪ್ರಧಾನಿ ಮೋದಿಯವರು ಆನ್​ಲೈನ್ ಮೂಲಕ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಸರ್ಕಾರಿ ಸೌಲಭ್ಯಗಳನ್ನ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳದೇ ದುರುಪಯೋಗ ಪಡಿಸಿಕೊಳ್ಳುವವರ ನಡುವೆ ಯೋಜನೆಯನ್ನ ಸದ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೇ ಸರ್ಕಾರ ಹಾಗೂ ಸಾರ್ವಜನಿಕರಿಂದ ಸೈ ಎನಿಸಿಕೊಂಡಿದ್ದಾರೆ. ಈ ಯೋಜನೆಯಲ್ಲಿ ವ್ಯವಸ್ಥಿತವಾದ ವಿನ್ಯಾಸ ಸುಭದ್ರವಾದ ಮನೆ ಕಟ್ಟಿಕೊಂಡಿದ್ದಾರೆ. ಸರ್ಕಾರದ ಮಾರ್ಗಸೂಚಿಯಂತೆ ಕಟ್ಟಿರುವ ಈ ಸುಂದರ ಮತ್ತು ಚೊಕ್ಕವಾದ ಮನೆ ಜಿಲ್ಲೆಯ ಜನರು ಅಚ್ಚರಿ ಪಡುವಂತಿದೆ.

ಒಟ್ಟಾರೆ ಸರ್ಕಾರದ ಯೋಜನೆಗಳು ಸಿಗುವುದನ್ನೇ ಕಾದು ದುರ್ಬಳಕೆ ಮಾಡಿಕೊಳ್ಳುವವರಿಗೆ ಇವರ ಮಹತ್ವಪೂರ್ಣ ಯೋಜನೆಯ ಸದ್ಬಳಕೆ ನಿಜಕ್ಕೂ ಶ್ಲಾಘನೀಯ. ಪ್ರಧಾನಿ ಈ ಕುಟುಂಬವನ್ನು ಗೌರವವಿಸ್ತಿರೋದು ಜಿಲ್ಲೆಯ ಜನರಿಗೂ ಹೆಮ್ಮೆ ಎನಿಸಿದೆ.

LEAVE A REPLY

Please enter your comment!
Please enter your name here

- Advertisment -

Most Popular

‘ಉಗ್ರ ಸ್ವರೂಪ ಪಡೆಯುತ್ತಿರುವ ಅನ್ನದಾತರ ಹೋರಾಟ’

ದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ಇಂದು ದೆಹಲಿಯಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ರೈತರ ಪ್ರತಿಭಟನೆ ಕ್ಷಣ-ಕ್ಷಣಕ್ಕೂ ಉಗ್ರ ಸ್ವರೂಪ ಪಡೆಯುತ್ತಿದೆ. ರೈತರು ಸಿಂಘು ಬಾರ್ಡ್ ನಿಂದ ದೆಹಲಿ ರಿಂಗ್ ರೋಡ್ ಗೆ...

ಬೆಂಗಳೂರಿನಲ್ಲಿ ಸಿಡಿದೆದ್ದ ಅನ್ನದಾತರು..!

ಬೆಂಗಳೂರು: ಬೆಂಗಳೂರಿನಲ್ಲಿ ಸಿಡಿದೆದ್ದ ಅನ್ನದಾತರು. ಬೆಂಗಳೂರಿನ ಹೆಬ್ಬಾಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ರೈತರು ಪ್ರತಿಭಟನೆ ಆಗಮಿಸುವ ಹಿನ್ನಲೆಯಲ್ಲಿ ಪೊಲೀಸರು ಹೆಬ್ಬಾಳದ ಮುಖ್ಯ ರಸ್ತೆಗೆ ಬ್ಯಾರಿಕೆಡ್ ಗಳನ್ನು ಹಾಕಿ ತಡೆಹಿಡೆಯಲಾಗಿದೆ. 50ಕ್ಕೂ ಹೆಚ್ಚು ಕಾರು...

‘ರಾಷ್ಟ್ರಗೀತೆ ಹಾಡುವ ಮೂಲಕ ಪ್ರತಿಭಟನೆಗೆ ಚಾಲನೆ’

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೈತರ ಬೃಹತ್ ಪ್ರತಿಭಟನಾ ರ್ಯಾಲಿ ಆರಂಭವಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ರೈತರು ಆಗಮಿಸಿದ್ದಾರೆ. ನಗರದ ಆರು ದಿಕ್ಕೂಗಳಿಂದ ರೈತರು ಬರುತ್ತಿದ್ದಾರೆ. ರಾಷ್ಟ್ರಗೀತೆ ಹಾಡುವ ಮೂಲಕ ರ್ಯಾಲಿಗೆ ಚಾಲನೆ...

‘ದೆಹಲಿಯಲ್ಲಿ ರೈತರ ಮೇಲೆ ಲಾಠಿ ಚಾರ್ಜ್’

ದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ರೈತರು ದೆಹಲಿಯ ಸಿಂಘು, ಟಿಕ್ರಿ ಗಡಿಯಲ್ಲಿ ಬ್ಯಾರಿಕೇಡ್ ಮುರಿದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ದೆಹಲಿಯಲ್ಲಿ ಪೊಲೀಸರು ರೈತರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ.   ರೈತರು...

Recent Comments