ಆಕೆ ಇನ್ನೂ 16 ವರ್ಷದ ಪೋರಿ…ವಿಶ್ವ ಕ್ರಿಕೆಟಲ್ಲಿ ಆಡಿದ್ದು ಕೇವಲ 18 ಪಂದ್ಯ ಮಾತ್ರ… ಆದರೆ ಇದೀಗ ನಂಬರ್ 1 ಪಟ್ಟ ಅಲಂಕರಿಸಿದ್ದಾರೆ..! ಹೀಗೆ ಅತೀ ಚಿಕ್ಕ ವಯಸ್ಸಲ್ಲಿ, ಅತೀ ಕಡಿಮೆ ಪಂದ್ಯದಲ್ಲಿ ವಿಶ್ವಶ್ರೇಷ್ಠ ಬ್ಯಾಟಿಂಗ್ ತಾರೆಯಾಗಿ ಸದ್ದು ಮಾಡುತ್ತಿರೋ ಪೋರಿ ಹೆಸ್ರು ಶೆಫಾಲಿ ವರ್ಮಾ. ಟಿ20 ವಿಶ್ವಕಪ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಶೆಫಾಲಿ ಇಡೀ ವಿಶ್ವಕ್ರಿಕೆಟ್ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.
ಐಸಿಸಿ ಮಹಿಳಾ ಟಿ20 ಕ್ರಿಕೆಟ್ ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದ್ದು ಶೆಫಾಲಿ ಬ್ಯಾಟಿಂಗ್ ವಿಭಾಗದಲ್ಲಿ 19 ಸ್ಥಾನ ಮೇಲಕ್ಕೇರಿ ನಂಬರ್ 1 ಪಟ್ಟ ಅಲಂಕರಿಸಿದ್ದಾರೆ. 16 ವರ್ಷದ ಶೆಫಾಲಿ ವರ್ಮಾ ಆಡಿರುವ ಹದಿನೆಂಟೇ ಹದಿನೆಂಟು ಟಿ20ಐನಲ್ಲಿ ಈ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಸುಯಿ ಬ್ಯಾಟಸ್ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಟೀಮ್ ಇಂಡಿಯಾದ ಮತ್ತೊಬ್ಬ ಆಟಗಾರ್ತಿ ಸ್ಮೃತಿ ಮಂದಾನ ಎರಡು ಸ್ಥಾನ ಕೆಳಕ್ಕಿಳಿದಿದ್ದಾರೆ. ಅವರಲ್ಲದೆ ಜಮಿಮಾ ರೋಡಿಗ್ರಾಸ್ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಕೂಡ ಎರಡು ಸ್ಥಾನ ಕೆಳಕ್ಕಿಳಿದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಇಂಗ್ಲೆಂಡ್ನ ಸೋಫಿ ಎಕ್ಲಿಸ್ಟನ್ ಎರಡು ಸ್ಥಾನಗಳನ್ನು ಮೇಲಕ್ಕೇರಿ ಮೊದಲ ಸ್ಥಾನ ಅಲಂರಿಸಿದ್ದಾರೆ. ಭಾರತದ ದೀಪ್ತಿ ಶರ್ಮಾ, ರಾಧಾ ಯಾದವ್, ಪೂನಮ್ ಯಾದವ್ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ.