Home ದೇಶ-ವಿದೇಶ ವಿಮಾನಗಳು ಮುಖಾಮುಖಿ ಡಿಕ್ಕಿ ; ಜನಪ್ರತಿನಿಧಿ ಸೇರಿ 7 ಮಂದಿ ದುರ್ಮರಣ

ವಿಮಾನಗಳು ಮುಖಾಮುಖಿ ಡಿಕ್ಕಿ ; ಜನಪ್ರತಿನಿಧಿ ಸೇರಿ 7 ಮಂದಿ ದುರ್ಮರಣ

ಅಲಸ್ಕಾದಲ್ಲಿ ಎರಡು ವಿಮಾನಗಳು ಮುಖಾಮುಖಿ ಡಿಕ್ಕಿಯಾಗಿ  ಜನಪ್ರತಿನಿಧಿ ಸೇರಿದಂತೆ 7 ಮಂದಿ ದುರ್ಮರಣವನ್ನಪ್ಪಿದ್ದಾರೆ.

ಇಂದು ಮುಂಜಾನೆ ಅಲಸ್ಕಾದ ಸೊಲ್ಡೋಟ್ನಾ ವಿಮಾನ ನಿಲ್ದಾಣದ ಸಮೀಪ ಈ ವಿಮಾನ ಅಪಘಾತ ಸಂಭವಿಸಿದೆ. ಅಲಸ್ಕಾದ ಜನಪ್ರತಿನಿಧಿ ಗೆರಿಕ್ನಪ್​​ ಸೇರಿ 7 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಒಂದು ವಿಮಾನವನ್ನು ಗೆರಿಕ್ನಪ್​​ ಅವರೇ ಚಲಾಯಿಸುತ್ತಿದ್ದರು. ಆ ವಿಮಾನದಲ್ಲಿ ಬೇರೆ ಯಾರೂ ಇರಲಿಲ್ಲ ಎನ್ನಲಾಗಿದೆ. ಇನ್ನೊಂದು ವಿಮಾನದಲ್ಲಿ ನಾಲ್ಕು ಮಂದಿ ಪ್ರವಾಸಿಗರು, ಒಬ್ಬ ಗೈಡ್  ಮತ್ತು ಪೈಲಟ್ ಇದ್ದು, ಅವರೆಲ್ಲರೂ ಕೂಡ ಸಾವನ್ನಪ್ಪಿದ್ದಾರೆ.

7 ಮಂದಿಯಲ್ಲಿ ಆರು ಜನ ಸ್ಥಳದಲ್ಲೇ  ಮೃತಪಟ್ಟರೆ, ಒಬ್ಬರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ  ಮಧ್ಯೆ ಕೊನೆಯುಸಿರೆಳೆದಿದ್ದಾರೆ.  ಅಪಘಾತದಿಂದ ವಿಮಾನಗಳ ಭಾಗಗಳು ಪುಡಿ ಪುಡಿಯಾಗಿ ಹೆದ್ದಾರಿ ಮೇಲೆ ಬಿದ್ದಿದ್ದವು. ಆದ್ದರಿಂದ ಕೆಲ ಕಾಲ ರಸ್ತೆ ಸಂಚಾರ ಕೂಡ ನಿಂತಿತ್ತು ಎಂದು ವರದಿಯಾಗಿದೆ.  ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

LEAVE A REPLY

Please enter your comment!
Please enter your name here

- Advertisment -

Most Popular

ಮಂಗಳೂರು ನಗರ ವ್ಯಾಪ್ತಿಯಲ್ಲಿ ‘ನಿಷೇಧಾಜ್ಞೆ’ ಜಾರಿಗೆ ಪೊಲೀಸ್ ಕಮೀಷನರ್ ಆದೇಶ..!

ಮಂಗಳೂರು : ಅಗಸ್ಟ್ 5 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿಯ ಭೂಮಿ ಪೂಜೆ ಹಿನ್ನೆಲೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಗೆ ಆದೇಶಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಆದೇಶವನ್ನ ಹೊರಡಿಸಿದ್ದು,...

ಎಂಟಿಬಿ v/s ಶರತ್ ಮುಸುಕಿನ ಗುದ್ದಾಟ ಶುರು

ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಿಧಾನ ಸಭಾ ಕ್ಷೇತ್ರದ ರಾಜಕೀಯ ಜಿದ್ದಾಜಿದ್ದಿನ ರಾಜಕೀಯ. ಕಳೆದ ಬೈ ಎಲೆಕ್ಷನ್ ನಲ್ಲಿ ಎಂಟಿಬಿ ನಾಗರಾಜ್ ಸೋತ ನಂತರ ಹೊಸಕೋಟೆ ಕ್ಷೇತ್ರದಲ್ಲಿ ರಾಜಕೀಯ ಬೆಳವಣಿಗೆಗಳು...

ಕೋವಿಡ್ ಸೋಂಕಿತ ಮೃತಪಟ್ಟು ಮೂರು ದಿನ ಕಳೆದರೂ ಮನೆಯವರಿಗೆ ಮಾಹಿತಿ ಇಲ್ಲ – ಮೃತನ ಸಂಬಂಧಿಕರಿಂದ ಆಕ್ರೋಶ

ದೇವನಹಳ್ಳಿ : ಕೋವಿಡ್ ಸೋಂಕಿತ ಮೃತಪಟ್ಟು ಮೂರು ದಿನ ಕಳೆದರೂ ಮನೆಯವರಿಗೆ ಮಾಹಿತಿ ನೀಡಿಲ್ಲ ಅಂತ ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಆಕಾಶ್ ಆಸ್ಪತ್ರೆಯಲ್ಲಿ...

ಶಾಸಕರಿಗೆ ರಾಖಿ ಕಟ್ಟಿದ ಮಹಿಳೆಯರು..

ಕೊಪ್ಪಳ : ಇಂದು ರಾಖಿ ಹಬ್ಬ.. ನಾಡಿನೆಲ್ಲೆಡೆ ತಂಗಿಯರು ಅಣ್ಣಂದಿರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಅದೇ ರೀತಿ ಕೊಪ್ಪಳದ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೆಸೂಗೂರು ಅವರಿಗೂ...

Recent Comments