Home ಕ್ರೀಡೆ ಟೆನಿಸ್ ಅಂಗಳದ ದಾಯಾದಿ ಕಲಹ..!

ಟೆನಿಸ್ ಅಂಗಳದ ದಾಯಾದಿ ಕಲಹ..!

ಇದು ದಾಯಾದಿ ಕಲಹದ ಸ್ಟೋರಿ. ಹಾಗಂತ ಇದ್ಯಾವುದೋ ಅಣ್ಣ-ತಮ್ಮಂದಿರ ಆಸ್ತಿ ಕಲಹವೂ ಅಲ್ಲ, ಅಕ್ಕ-ತಂಗಿಯರ ಕೋಳಿ ಜಗಳವೂ ಅಲ್ಲ. ಇದು ಕ್ರೀಡಾಂಗಣದಲ್ಲಿನ ಕಲಹ.

ಎಸ್, ಇದು ಟೆನಿಸ್ ಲೋಕದ ಸೆನ್ಸೇಶನಲ್ ಸಿಸ್ಟರ್ಸ್ ಸೆರೆನಾ ಮತ್ತು ವೀನಸ್ ವಿಲಿಮ್ಸ್ ಸ್ಟೋರಿ. ಟೆನಿಸ್ ಕೋರ್ಟ್ ನಲ್ಲಿ ತಂಗಿ ಅಕ್ಕನನ್ನು ಸೋಲಿಸಿದ ರೋಚಕದ ಸ್ಟೋರಿ. 22 ವರ್ಷಗಳ ಬಳಿಕ ಟೆನಿಸ್ ಅಂಗಳದಲ್ಲಿ ಪರಸ್ಪರ ಎದುರಾದ ಸೆರೆನಾ ಮತ್ತು ವೀನಸ್ ನಡುವೆ ರೋಚಕ ಪೈಪೋಟಿ ಏರ್ಪಟ್ಟಿತ್ತು. ಮೊದಲ ರೌಂಡ್ ನಲ್ಲಿ ಹಿನ್ನಡೆ ಅನುಭವಿಸಿದ್ದ ಸೆರೆನಾ ನಂತರದ ಎರಡೂ ಸೆಟ್ ನಲ್ಲಿ ತನ್ನ ಅಕ್ಕ ವೀನಸ್ ರನ್ನು ಮಣಿಸಿ ಗೆಲುವಿನ ನಗೆ ಬೀರಿದ್ರು.

ಕೊರೋನಾ ಬಂದ ಬಳಿಕ ನಡೆದ ಅಮೆರಿಕಾದ ಮೊದಲ ಟೆನಿಸ್ ಟೂರ್ನಮೆಂಟ್ ನಲ್ಲಿ ಗುರುವಾರ ಈ ಇಬ್ಬರು ಸಹೋದರಿಯರ ನಡುವೆ ಸವಾಲ್ ಏರ್ಪಟ್ಟಿತ್ತು. ಆರಂಭದಿದಂಲೂ ಇಬ್ಬರೂ ಬದ್ಧ ವೈರಿಗಳಂತೆಯೇ ಸೆಣಸಾಡಿದ್ರು. ಕೊನೆಗೆ 3-6, 6-3, 6-4 ಸೆಟ್ ಗಳಿಂದ ವೀನಸ್ ರನ್ನು ಸೆರೆನಾ ಮಣಿಸಿದ್ರು. ಪಂದ್ಯದ ಬಳಿಕ ಇಬ್ಬರೂ ಸಹೋದರಿಯರು ಸಾಮಾಜಿಕ ಅಂತರ ಕಾಯ್ದುಕೊಂಡೇ ಶುಭಾಷಯ ವಿನಿಮಯ ಮಾಡಿಕೊಂಡ್ರು.

 

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments