ಮುಂಬೈ : ಕೋರೋನಾ ವೈರಸ್ನ ಹೊಡೆತದಿಂದ ಚೇತರಿಸಿಕೊಳ್ಳುವ ಮುನ್ನವೇ ಭಾರತದ ಷೇರುಪೇಟೆಗೆ ಮತ್ತೊಂದು ಹೊಡೆತ ಬಿದ್ದಿದೆ. Yes Bankನ ಹಣಕಾಸಿನ ಬಿಕ್ಕಟ್ಟು ಬಹಿರಂಗವಾಗುತ್ತಿದ್ದಂತೆ ಭಾರತದ ಷೇರುಪೇಟೆ ಸೂಚ್ಯಂಕ ಪಾತಾಳಕ್ಕೆ ಕುಸಿದಿದೆ. ಹೂಡಿಕೆದಾರರು ಒಂದೇ ಒಂದು ನಿಮಿಷದಲ್ಲಿ 4 ಲಕ್ಷ ಕೋಟಿ ರೂಗಳಷ್ಟು ನಷ್ಟ ಅನುಭವಿಸಿದ್ದಾರೆ.
ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ ಸೂಚ್ಯಂಕ ಪಾತಾಳಕ್ಕೆ ಹೋಗಿದೆ. ಇಂದಿನ ಬೆಳಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 1,400 ಪಾಯಿಂಟ್ ಕಳೆದುಕೊಂಡಿದ್ದರೆ, ನಿಫ್ಟಿ 11 ಸಾವಿರ ಅಂಕಗಳವರೆಗೆ ಇಳಿದಿದೆ. Yes Bank ಷೇರು ಮೌಲ್ಯವೂ ಕುಡಾ ಪಾತಾಳಕ್ಕೆ ಇಳಿದಿದ್ದು, ಶೇ.57 ರಷ್ಟು ಕುಸಿತ ಕಂಡಿದೆ.
ಸೆನ್ಸೆಕ್ಸ್ ಸೂಚ್ಯಂಕ ಸದ್ಯ 37,509.07 ಅಂಕಗಳ ಮಟ್ಟಕ್ಕೆ ಬಂದು ನಿಂತಿದ್ದು, ನಿಫ್ಟಿ 10,971.75ಕ್ಕೆ ಇಳಿದಿದೆ. Yes Bank ಮತ್ತು ಇನ್ನು ಕೆಲವು ಹಣಕಾಸು ಸಂಸ್ಥೆಗಳ ಷೇರುಗಳು ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ. ಇನ್ನುಳಿದಂತೆ ಎಸ್ಬಿಐ, ಬಜಾಜ್ ಫಿನಾನ್ಸ್, ಆ್ಯಕ್ಸಿಸ್ ಬ್ಯಾಂಕ್ , ನಷ್ಟ ಅನುಭವಿಸುತ್ತಿದೆ. ಟಾಟಾ ಸ್ಟೀಲ್ ಮತ್ತು ಇನ್ನು ಹಲವಾರು ಸಂಸ್ಥೆಗಳ ಷೇರುಗಳ ಬೆಲೆಯೂ ಕುಸಿದಿದೆ.