ಬೆಂಗಳೂರು : ಜೂನ್ 25 ರಿಂದ ಪ್ರಾರಂಭವಾಗಲಿರುವ SSLC ಪರೀಕ್ಷೆಗಳು ಸೂಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಬೆಂಗಳೂರು ನಗರದಾದ್ಯಂತ ಸೆಕ್ಷನ್ 144 ನಿಷೇದಾಜ್ಞೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಜೂನ್ 25ರಿಂದ ಜುಲೈ 3ರ ವರೆಗೆ ರಾಜ್ಯದಾದ್ಯಂತ SSLC ಪರೀಕ್ಷೆಗಳು ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಪರೀಕ್ಷೆಗಳು ಸಾಂಗವಾಗಿ ನಡೆಯುವಂತೆ ಈ ಆದೇಶ ಹೊರಡಿಸಲಾಗಿದೆ. ಪರೀಕ್ಷೆ ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತಳತೆಯಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯುವಂತಿಲ್ಲ ಮತ್ತು ಯಾರೂ ಗುಂಪುಗಟ್ಟಿ ಓಡಾಡುವಂತಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ