Monday, January 17, 2022
Powertv Logo
Homeದೇಶಯುಪಿಯಲ್ಲಿ ಒಂದು ತಿಂಗಳ ಕಾಲ ಸೆಕ್ಷನ್ 144!

ಯುಪಿಯಲ್ಲಿ ಒಂದು ತಿಂಗಳ ಕಾಲ ಸೆಕ್ಷನ್ 144!

ಉತ್ತರಪ್ರದೇಶ: ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರು ಸೆಕ್ಷನ್ 144 ವಿಧಿಸುವುದು ಸಾಮಾನ್ಯ. ಆದರೆ ಅದು ಒಂದೆರಡು ದಿನ, ಹೆಚ್ಚೆಂದರೆ ಒಂದು ವಾರವಾದರೆ ಅದೇ ಹೆಚ್ಚು. ಆದರೆ ಇದೀಗ ಮುಖ್ಯಮಂತ್ರಿ ಯೋಗಿಯ ರಾಜ್ಯವಾದ ಉತ್ತರಪ್ರದೇಶದಲ್ಲಿ ಇಡೀ ಡಿಸೆಂಬರ್ ತಿಂಗಳು  144 ಸೆಕ್ಷನ್ ಜಾರಿಗೊಳಿಸಲಾಗುತ್ತಿದೆ! ಉತ್ತರಪ್ರದೇಶದ ಗೌತಮ ಬುದ್ಧ ನಗರದ ಪೊಲೀಸ್ ಕಮೀಷನರ್ ಡಿಸೆಂಬರ್ 1ನೆಯ ತಾರೀಕಿನಿಂದ ಡಿಸೆಂಬರ್ 31ರವರೆಗೆ ಭರ್ತಿ ಒಂದು ತಿಂಗಳು ಸೆಕ್ಷನ್ 144 ನ್ನು ಜಾರಿಗೊಳಿಸಿದ್ದಾರೆ!

ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿರುವಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಗಮನದಲ್ಲಿರಿಸಿಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಡಿಸೆಂಬರ್ 23ರಂದು ಮಾಜಿ ಪ್ರಧಾನಿ ಚೌಧರಿ ಚರಣ್​ಸಿಂಗ್ ಅವರ ಜನ್ಮದಿನದಂದು, ಹಾಗೂ 25ನೆ ತಾರೀಕು ಕ್ರಿಸ್​ಮಸ್ ದಿನದಂದು ಮತ್ತು ಹೊಸ ವರ್ಷಾಚರಣೆಯಂದು ಸಮಾಜದ್ರೋಹಿಗಳು ಅರಾಜಕತೆಯನ್ನು ಸೃಷ್ಟಿಸುವ ಆತಂಕವಿದೆ. ಜೊತೆಗೆ ಕೊವಿಡ್ ಹರಡುವಿಕೆಯನ್ನು ನಿರ್ಭಂದಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಜನರ ಸ್ವಾತಂತ್ರ್ಯವನ್ನು ಒಂದು ತಿಂಗಳ ಕಾಲ ಇಂಥ ಸಬೂಬುಗಳ ಮೂಲಕ ಕಡಿತಗೊಳಿಸಲು ಯುಪಿ ಸರಕಾರ ಹೊರಟಿರುವುದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ಯುಪಿ ಸರಕಾರದ ಈ ಕ್ರಮ ಪ್ರಜಾಪ್ರಭುತ್ವ ನಿಧಾನವಾಗಿ ಪೊಲೀಸ್ ರಾಜ್ಯವಾಗಿ ಪರಿವರ್ತನೆಗೊಳ್ಳುತ್ತಿದೆಯೆ ಎಂಬ ಸಂಶಯ ಮೂಡಲು ಕಾರಣವಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments