Home ದೇಶ-ವಿದೇಶ ಮಹಾರಾಷ್ಟ್ರದಲ್ಲಿ ಜೂನ್​ ನಿಂದ ಶಾಲೆಗಳು ಆರಂಭ..!

ಮಹಾರಾಷ್ಟ್ರದಲ್ಲಿ ಜೂನ್​ ನಿಂದ ಶಾಲೆಗಳು ಆರಂಭ..!

ಮುಂಬೈ : ಮಹಾರಾಷ್ಟ್ರದಲ್ಲಿ ಕೊರೋನಾ ಹಟ್ಟಹಾಸ ಮೆರೆಯುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ಮಹಾರಾಷ್ಟ್ರದಲ್ಲಿ ಸೋಕಿತರ ಸಂಖ್ಯೆ ಹೆಚ್ಚಿದೆ. ಇದರ ನಡುವೆ ಬೇರೆ ಮಹಾರಾಷ್ಟ್ರದಲ್ಲೂ ಬೇರೆ ರಾಜ್ಯಗಳಂತೆ ನಿರ್ಧಾರ ತೆಗೆದುಕೊಳ್ಳಲು ಸಿಎಂ ಉದ್ಧವ್ ಠಾಕ್ರೆ ಮುಂದಾಗಿದ್ದಾರೆ.

ಜೂನ್ 15ರಿಂದ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲು ಸರ್ಕಾರ ನಿರ್ಧರಿಸಿದೆ, ಆದ್ರೆ ಮಕ್ಕಳು ಶಾಲೆಗೆ ಬರುವ ದಿನಾಂಕವನ್ನು ಇನ್ನು ನಿಗದಿಪಡಿಸಿಲ್ಲ. ಮಕ್ಕಳ ಆರೋಗ್ಯದೃಷ್ಠಿಯನ್ನ ಮುಂದಿಟ್ಟುಕೊಂಡು ಸದ್ಯಕ್ಕೆ ಆನ್ ಲೈನ್ ತರಗತಿಗಳಿಗೆ ಒಪ್ಪಿಗೆ ಸೂಚಿಸಿದೆ, ಗೂಗಲ್ ಕ್ಲಾಸ್ ರೂಂ ಸೇರಿದಂತೆ ರೇಡಿಯೋ, ಟಿವಿ ಆನ್​ಲೈನ್ ಹಾಗೂ ಆಫ್​ಲೈನ್ ತರಗತಿಗಳನ್ನು ಆರಂಭಿಸಲು ಉದ್ಧವ್ ಠಾಕ್ರೆ ಸೂಚನೆ ನೀಡಿದ್ದಾರೆ.

ಜೂನ್ ತಿಂಗಳಲ್ಲೆ ಶಾಲೆಗಳನ್ನು ಆರಂಭಮಾಡುವ ಆಲೋಚನೆ ಇದ್ದು, ಈಗಾಗಲೇ ಎಲ್ಲಾ ಶಾಲಾ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದಾರೆ. ಆನ್‌ಲೈನ್ ಶಿಕ್ಷಣಕ್ಕೆ ಒತ್ತು ನೀಡದೆ ಬೇರೆ ದಾರಿ ಇಲ್ಲ. ಗೂಗಲ್ ಕ್ಲಾಸ್‌ರೂಮ್ ಹೆಚ್ಚು ಬಳಕೆ ಮಾಡಿ. ಕಂಪ್ಯೂಟರ್ ಆಧಾರಿತ ಶಿಕ್ಷಣವನ್ನು ಶೀಘ್ರವೇ ಅಭಿವೃದ್ಧಿಪಡಿಸಲಾಗುವುದು. ಯಾವ ಯಾವ ರೀತಿಯಿಂದ ಶಿಕ್ಷಣವನ್ನು ನೀಡಲು ಸಾಧ್ಯವೋ ಆ ಎಲ್ಲಾ ವಿಧಗಳನ್ನು ಪರಿಶೀಲಿಸಲಾಗುತ್ತದೆ. ಕೊರೊನಾವೈರಸ್ ಪ್ರಕರಣಗಳು ಕಡಿಮೆ ಇರುವ ಪ್ರದೇಶಗಳಲ್ಲಿ ಮೊದಲು ಶಾಲೆಗಳನ್ನು ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

 

LEAVE A REPLY

Please enter your comment!
Please enter your name here

- Advertisment -

Most Popular

ಕೊರೋನಾಗೆ ಕ್ಯಾರೆ ಅನ್ನದೆ ನೃತ್ಯ ಮಾಡಿ ಧೈರ್ಯ ತುಂಬಿದ ಹೋಟೆಲ್ ಮಾಲಕ

ಉಡುಪಿ : ಕೋರೊನಾ ಬಂದ್ರೆ ನಮ್ಮ ಕಥೆ ಮುಗಿತು ಅನ್ನೋ ಈ ಸಂದರ್ಭದಲ್ಲಿ, ಕೋಟದ ಕೊರೋನಾ ಪಾಸಿಟಿವ್ ವ್ಯಕ್ತಿಯೋರ್ವರು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಕೋಟದ ಹೋಟೆಲ್ ಮಾಲಕರೋರ್ವರಿಗೆ ಕೊರೋನಾ ಪಾಸಿಟಿವ್ ಬಂದ...

ಸಂಬಳ ಕೇಳಿದರೆ ಕೆಲಸದಿಂದ ತೆಗೆಯುತ್ತೇವೆ ! ವಿಮ್ಸ್​​ನಲ್ಲಿ ಇದೆಂಥಾ ಅಮಾನವೀಯತೆ ?

ಬಳ್ಳಾರಿ : ಕಳೆದ ಆರು ತಿಂಗಳಿನಿಂದ ಸಂಬಳವೇ ಸಿಕ್ಕಿಲ್ಲ ಅಂತ ಬಳ್ಳಾರಿಯ ವಿಮ್ಸ್ ನಲ್ಲಿ ಗುತ್ತಿಗೆ ಆಧಾರಿತ ಸಿಬ್ಬಂದಿ ಧರಣಿ ಕೂತಿದ್ದಾರೆ. ಕೊರೊನಾ ವಾರಿಯರ್ ಅಂತ ಸರ್ಕಾರ ನಮ್ಮನ್ನ ಕರೆಯುತ್ತೆ. ಆದ್ರೆ ನಮಗೆ...

ಕೊರೋನಾ ಗೆದ್ದ 96 ವೃದ್ಧೆ ಈಗ ಕೊರೋನಾ ರೋಗಿಗಳಿಗೆ ಸ್ಫೂರ್ತಿ

ಚಿತ್ರದುರ್ಗ : ಕೊರೋನಾ ಸೋಂಕಿನ ಭೀತಿ ಎಲ್ಲೆಡೆ ಹಬ್ಬಿದ್ದರೂ, ಆತ್ಮಿವಿಶ್ವಾಸವೊಂದಿದ್ದರೆ ಕೊರೋನಾ ಸೋಂಕಿನಿಂದ ಗುಣವಾಗಬಹುದು ಎನ್ನುವುದಕ್ಕೆ ಈ ವೃದ್ಧೆಯೇ ಸಾಕ್ಷಿ. ಚಿತ್ರದುರ್ಗ  ‌ಜಿಲ್ಲೆಯ ಹಿರಿಯೂರು ಮೂಲದ 96 ವರ್ಷದ ವೃದ್ದೆ ಕರೋನಾ ಸೋಂಕಿನಿಂದ...

ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆ, ಪ್ರಕರಣ ದಾಖಲು

ಉಡುಪಿ : ಹೋಮ್ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೋರ್ವರು ನಿಯಮ ಉಲ್ಲಂಘಿಸಿ ಉಡುಪಿಯಿಂದ ಕಾರ್ಕಳ ಪ್ರಯಾಣಿಸಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ. ನಿಯಮ ಉಲ್ಲಂಘಿಸಿದ ಕೊಡಂಕೂರು ನಿವಾಸಿ ವಿನಯ್ ಕುಮಾರ್ ಮೇಲೆ ಉಡುಪಿಯ ನಗರ ಠಾಣೆಯಲ್ಲಿ...