Home ರಾಜ್ಯ ‘ ಮಳೆಗೆ ಶಾಲಾ ಕೊಠಡಿ ಕುಸಿತ ತಪ್ಪಿದ  ಅನಾಹುತ’

‘ ಮಳೆಗೆ ಶಾಲಾ ಕೊಠಡಿ ಕುಸಿತ ತಪ್ಪಿದ  ಅನಾಹುತ’

ದಾವಣಗೆರೆ: ತಡರಾತ್ರಿ ಸುರಿದ ಮಳೆಗೆ ಶಾಲೆಯ ಕಂಪ್ಯೂಟರ್ ಕೊಠಡಿ ಕುಸಿತಗೊಂಡಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.

ದಾವಣಗೆರೆ ತಾಲ್ಲೂಕಿನ ಹೂವಿನಮಡು ಗ್ರಾಮದ ಸರ್ಕಾರಿ ಪ್ರಾಥಾಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು, ನಿನ್ನೆ ತರಗತಿ ಬೇಗ ಮುಗಿದಿದ್ದರಿಂದ ಮಧ್ಯಾಹ್ನವೇ ವಿದ್ಯಾರ್ಥಿಗಳು ಮನೆಗೆ ತೆರಳಿದ್ದರಿಂದ ಭಾರೀ ಅವಘಡ ತಪ್ಪಿದಂತಾಗಿದೆ. ಮೂರಕ್ಕೂ ಹೆಚ್ಚು ಕಂಪ್ಯೂಟರ್ ಗಳಿಗೆ  ಹಾನಿಯಾಗಿದೆ. ಕೊಠಡಿ ಕುಸಿತ ಬಳಿಕ ಶಾಲೆಯ  UPSನ್ನು ಖದೀಮರು ಹೊತ್ತೊಯ್ದಿದ್ದಾರೆ. ಜೊತೆಗೆ ನಾಲ್ಕೈದು ರೂಂಗಳ ಹಂಚು ಹಾರಿ ಹೋಗಿ ನೀರು ಒಳ ನುಗ್ಗಿದೆ. ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭಾರದೇ ಇದ್ದ ಹಿನ್ನಲೆ ಅಧಿಕಾರಗಳ ವರ್ತನೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ನಿನ್ನೆ ಸುರಿದ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿದೆ, ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಹಲಸಬಾಳ ಗ್ರಾಮಕ್ಕೆ ಮಳೆ ನೀರು ನುಗ್ಗಿದ್ದು, ಗ್ರಾಮ ಮತ್ತು ಪಕ್ಕದ ಜಮೀನುಗಳಿಗೂ ನೀರು ನುಗ್ಗಿ, ವಾಹನಗಳ ಓಡಾಟಕ್ಕೆ ಗ್ರಾಮಸ್ಥರು ಪರದಾಡಿದ್ರು, ಹರಿಹರ ತಾಲೂಕಿನಲ್ಲೂ ಮಳೆ ಆರ್ಭಟಿಸಿದ್ದು, ಮಿಟ್ಲಕಟ್ಟೆ, ಕಾಡಜ್ಜಿ, ಗುತ್ತೂರು ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದೆ, 45 ಎಕರೆಯಲ್ಲಿ ಬೆಳೆದ ಜೋಳ ಹಾಗೂ ಕಡ್ಲೆ ಬೆಳೆ ಹಾನಿಯಾಗಿ ಲಕ್ಷಾಂತರ ರೂ. ಬೆಳೆ ನಷ್ಟ ಸಂಭವಿಸಿದೆ. ಜೊತೆಗೆ ಬೆಳ್ಳೂಡಿ ಗ್ರಾಮದಲ್ಲಿ ಸಿಡಿಲು ಬಡಿದು  ಹತ್ತು ಕುರಿಗಳು ಸಾವನ್ನಪ್ಪಿವೆ.

LEAVE A REPLY

Please enter your comment!
Please enter your name here

- Advertisment -

Most Popular

ಕೃಷಿ ಕಾಯ್ದೆಯನ್ನು ರದ್ದು ಮಾಡುವುದಿಲ್ಲ: ನರೇಂದ್ರ ಸಿಂಗ್ ತೋಮರ್

ದೆಹಲಿ: ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಒಂದೂವರೆ ತಿಂಗಳಿನಿಂದ ರಾಷ್ಟ್ರ ರಾಜಧಾನಿಯಲ್ಲಿ ಪ್ರೊಟೆಸ್ಟ್ ನಡೆಸುತ್ತಿವೆ. ಇದರ ನಡುವೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ದೇಶದ ಹೆಚ್ಚಿನ ರೈತರು...

‘ನಾಳೆ ಸಿಎಂ ಯಡಿಯೂರಪ್ಪ ಉಡುಪಿ ಪ್ರವಾಸ’

ಬೆಂಗಳೂರು: ನಾಳೆ ನಾಡಿದ್ದು ಸಿಎಂ ಬಿಎಸ್ ಯಡಿಯೂರಪ್ಪ ಉಡುಪಿ ಪ್ರವಾಸ ಮಾಡಲಿದ್ದಾರೆ. ನಾಳೆ ಸಂಜೆ ಮಧ್ಯಾಹ್ನ 3 ಗಂಟೆಗೆ ಹೆಚ್ ಎ ಎಲ್ ನಿಂದ ಪ್ರಯಾಣ ಬೆಳೆಸಿ, ಸಂಜೆ 5 ಗಂಟೆಗೆ ಪರ್ಯಾಯ...

‘ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ’

ಬೆಂಗಳೂರು: ವಿರೋಧ ಪಕ್ಷಗಳ ವಿರೋಧದ ನಡುವೆಯೂ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದ್ದು,  ನಾಳೆಯಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಈ  ಸಂಬಂಧ ರಾಜ್ಯ ಸರ್ಕಾರ ರಾಜ್ಯಪತ್ರದಲ್ಲಿ ಈ ವಿಷಯ ಪ್ರಕಟಿಸಿದೆ. ಇನ್ನೂ...

‘ರೈತರ ಹೋರಾಟ ಬೆಂಬಲಿಸಿ ರಾಜಭವನ ಮುತ್ತಿಗೆ ಹಾಕಲು ಕೈ ರಣತಂತ್ರ’​

ಬೆಂಗಳೂರು: ರೈತರ ಹೋರಾಟಕ್ಕೆ ಬೆಂಬಲ ನೀಡಿ ರಾಜ್ಯ ಕಾಂಗ್ರೆಸ್ ಸರ್ಕಾರ ಜನವರಿ 20 ರಂದು ಬೆಂಗಳೂರು ಸ್ತಬ್ಧ ಮಾಡುಲು ಪ್ಲಾನ್ ಮಾಡಿಕೊಂಡಿದೆ. ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಜನವರಿ 20 ರಂದು...

Recent Comments