Homeದೇಶ-ವಿದೇಶಆಗಸದಲ್ಲಿ ಹತ್ತಿಉಂಡೆಗಳ ಸೃಷ್ಠಿ:  ನೋಡುಗರು ಬೆರಗುಗಾದ್ರು

ಆಗಸದಲ್ಲಿ ಹತ್ತಿಉಂಡೆಗಳ ಸೃಷ್ಠಿ:  ನೋಡುಗರು ಬೆರಗುಗಾದ್ರು

ಅರ್ಜೆಂಟಿನಾ : ಪ್ರಕೃತಿ ಅಂದ್ರೆ ಹಾಗೆ ಎಷ್ಟೋ ವಿಸ್ಮಯ , ಅಧ್ಭುತ, ಊಹೆಗೂ ನಿಲುಕದ ಸಂಗತಿಗಳಿಗೆ ಸಾಕ್ಷಿಯಾಗ್ತಾನೆ ಇರುತ್ತೆ. ಪ್ರಕೃತಿ ಮುಂದೆ ಮಾನವ ತಲೆಬಾಗಲೇ ಬೇಕು ಹೀಗೆ ನಮ್ಮ ಸುತ್ತಮುತ್ತ ಆಗೋ ವಾತಾವರಣದ ಬದಲಾವಣೆ ಕೆಲವೊಮ್ಮೆ ನಮ್ಮನ್ನ ಮೂಕವಿಸ್ಮಿತರನ್ನಾಗಿಸುತ್ತೆ..ಅದಕ್ಕೆ ಮತ್ತೊಂದು ಉತ್ತಮ ಉದಾಹರಣೆ ಅಂದ್ರೆ ಅರ್ಜೆಂಟಿನಾದಲ್ಲಿ ಕಾಣಿಸಿಕೊಂಡಿರೋ ಕಪ್ಪು ಮಿಶ್ರಿತ ಬಿಳಿಯ ಚೆಂಡಿನಂತ ಮೋಡಗಳು.

ಆಕಾಶದಲ್ಲಿ ಹತ್ತಿಯ ಉಂಡೆಗಳನ್ನ ಸಾಲಾಗಿ ಜೋಡಿಸಿದಂತೆ ಕಾಣ್ತಿರೋ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.. ಈ ದೃಶ್ಯವನ್ನ ನೋಡಿ ಇಂತ ಮೋಡಗಳನ್ನ ನಾವು ನೋಡಿರ್ಲಿಲ್ಲ ಸುಂದರ, ಅದ್ಭುತ, ವಿಸ್ಮಯದ ಕ್ಷಣ ಅನ್ನೋದು ನೆಟ್ಟಿಗರ ಮಾತಾಗಿದೆ.

ಅರ್ಜೆಂಟಿನಾದ  ಕಾರ್ಡೋಬಾದ ಕ್ರಾಸಾ ಗ್ರಾಂಡೆಯ ಆಕಾಶದಲ್ಲಿ ತುಂಬಿಕೊಂಡಿದ್ದ ಮಮ್ಮಾಟಸ್ ಕ್ಲೌಡ್ ಎಂದು ಕರೆಯೋ ಈ ಮೋಡಗಳು ಗುಡುಗು ಸಿಡಿಲು ಸಹಿತ ಮಳೆಯನ್ನೂ ಉಂಟುಮಾಡುತ್ತೆ. ಈ ಮೋಡಗಳನ್ನ ನೋಡ್ತಾಯಿದ್ದಂತೆ ಅಲ್ಲಿನ ಸ್ಥಳಿಯರು ಬೆರಗಾಗಿದ್ದರು ಎಂದೂ ನೋಡಿರದ ಮೋಡಗಳನ್ನ ಕಂಡು ಖುಷಿಪಟ್ಟರು, ಇನ್ನೂ ಕೆಲವರು ಹತ್ತಿಯ ಉಂಡೆಗಳಂತಿದ್ದ ಮೋಡಗಳನ್ನ ಕ್ಯಾಮರಾದಲ್ಲಿ ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಶೆರ್ ಮಾಡಿಕೊಂಡಿದ್ದು ಸದ್ಯ ಈ ವೀಡಿಯೋ ವೈರಲ್ ಆಗ್ತಾಯಿದೆ.  ಈ ರೀತಿ ಮೋಡಗಳು ಕಾಣಿಸಿಕೊಂಡ ಸ್ವಲ್ಪ ಸಮಯದಲ್ಲೆ ಈ ಭಾಗದಲ್ಲಿ ಆಲಿಕಲ್ಲು ಸಮೇತ ಭಾರಿ ಮಳೆಯಾಗಿದೆ .

 

LEAVE A REPLY

Please enter your comment!
Please enter your name here

- Advertisment -

Most Popular

Recent Comments