Home P.Special ಪಿಪಿಇ ಕಿಟ್ ಗೆ ಮತ್ತೆ ಬರ..! | ಹರಿದ ಗೌನ್ ಧರಿಸಿಯೇ ಕರ್ತವ್ಯ ನಿರ್ವಹಿಸುತ್ತಿರುವ ಆಂಬುಲೆನ್ಸ್...

ಪಿಪಿಇ ಕಿಟ್ ಗೆ ಮತ್ತೆ ಬರ..! | ಹರಿದ ಗೌನ್ ಧರಿಸಿಯೇ ಕರ್ತವ್ಯ ನಿರ್ವಹಿಸುತ್ತಿರುವ ಆಂಬುಲೆನ್ಸ್ ಚಾಲಕರು.

ಮಂಡ್ಯ : ಕೊವಿಡ್ ವಿಚಾರದಲ್ಲಿ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿ ಇದು.
ಹೌದು, ಒಂದೆಡೆ ಸರ್ಕಾರದ ವಿರುದ್ಧ ವಿಪಕ್ಷಗಳು ಆರೋಪಗಳ ಮೇಲೆ ಆರೋಪ ಹೊರಿಸುತ್ತಲೇ ಇವೆ.
ಮತ್ತೊಂದೆಡೆ ಸರ್ಕಾರ ತಮ್ಮ ಕಾರ್ಯವೈಖರಿಯನ್ನ ಹೊಗಳುತ್ತಲೇ ವಿಪಕ್ಷಗಳಿಗೆ ತಿರುಗೇಟು ನೀಡ್ತಿದೆ.

ಸರ್ಕಾರದ ಬೇಜವಾಬ್ದಾರಿ ಬಯಲು:
ಈ ನಡುವೆಯೇ ಕೊರೋನಾ ವಾರಿಯರ್ಸ್ ವಿಚಾರದಲ್ಲಿ ಸರ್ಕಾರದ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಬಹಿರಂಗವಾಗಿದೆ. ಮಂಡ್ಯದಲ್ಲಿರುವ 108 ಆಂಬುಲೆನ್ಸ್ ಚಾಲಕರು ಸರ್ಕಾರ ಮತ್ತು ಅಧಿಕಾರಿಗಳ ಬೇಜವಾಬ್ದಾರಿ ನಡೆಗೆ ಬೇಸತ್ತಿದ್ದಾರೆ. ಪ್ರತಿನಿತ್ಯ ಕೊರೋನಾ ಸೋಂಕಿತರನ್ನ ಮನೆಯಿಂದ ಆಸ್ಪತ್ರೆಗೆ, ಕ್ವಾರಂಟೀನ್ ಕೇಂದ್ರದಿಂದ ಕೊವಿಡ್ ಟೆಸ್ಟ್ ಗೆ ರವಾನೆ ಮಾಡ್ತಿರ್ತಾರೆ. ಆದರೆ, ಸೋಂಕಿತರ ಜೊತೆ ಸವಾರಿ ಮಾಡೋ ಆಂಬುಲೆನ್ಸ್ ಚಾಲಕರಿಗೆ ಸೂಕ್ತ ರಕ್ಷಣೆಯೇ ಇಲ್ಲ. ಪಿಪಿಇ ಕಿಟ್ ಇಲ್ಲದೆ ಆಂಬುಲೆನ್ಸ್ ಚಾಲಕರು ಪರದಾಡುವಂತಾಗಿದೆ. ಸೋಂಕಿತರ ಕರೆತರಲು ಮತ್ತು ಕರೆದೊಯ್ಯಲು ಹರಿದ ಗೌನ್ ಧರಿಸಿಯೇ ಚಾಲಕರು ಕರ್ತವ್ಯ ನಿರ್ವಹಿಸಬೇಕಿದೆ. ಪಿಪಿಇ ಕಿಟ್, ಮಾಸ್ಕ್, ಕನ್ನಡಕ ಇಲ್ಲದೆ ಭಯದಲ್ಲೇ ಚಾಲಕರು ಕರ್ತವ್ಯ ನಿರ್ವಹಣೆ ಮಾಡುತ್ತಿರೋದು ಸರ್ಕಾರದ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯವನ್ನ ಬಯಲು ಮಾಡಿದೆ.

ಚಾಲಕರ ಗೋಳು ಕೇಳೋರು ಯಾರು?:
ಇನ್ನು ಚಾಲಕರು ತಮ್ಮ ಸಮಸ್ಯೆ ಹೇಳಿಕೊಂಡರೂ ಕೇಳೋರು ಯಾರೂ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡಿ ಕೈ ತೊಳೆದುಕೊಳ್ತಿದ್ದಾರೆ. ಇದರಿಂದಾಗಿ ಚಾಲಕರು ಪ್ರತಿನಿತ್ಯ ಕೊರೋನಾ ಸೋಂಕಿತರ ಜೊತೆ ಭಯದಲ್ಲೇ ಕರ್ತವ್ಯ ನಿರ್ವಹಿಸಬೇಕಿದೆ. ಇನ್ನಾದರೂ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಚಿತ್ತ ಹರಿಸಿ, ಆಂಬುಲೆನ್ಸ್ ಚಾಲಕರ ಸಮಸ್ಯೆಗೆ ಪರಿಹಾರ ಕೊಡಿಸಬೇಕಿದೆ..

ಡಿ.ಶಶಿಕುಮಾರ್, ಪವರ್ ಟಿವಿ, ಮಂಡ್ಯ.

LEAVE A REPLY

Please enter your comment!
Please enter your name here

- Advertisment -

Most Popular

ಮುಳುಗಿದ ಶೆಟ್ಟಿಹಳ್ಳಿ ಚರ್ಚ್..!

ಹಾಸನ : ಜಿಲ್ಲೆಯ ಜೀವನದಿ ಹಾಗೂ ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹೇಮಾವತಿ ಜಲಾಶಯ, ವಾರದ ಅಂತರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಈ ಬಾರಿಯೂ ಭರ್ತಿ ಭಾಗ್ಯ ಕಂಡಿದೆ. ಇದರಿಂದ ಹೇಮೆಯನ್ನು...

ಚಿಕ್ಕಣ್ಣನಿಗೆ ರಾಖಿ ಕಟ್ಟಿದ ಮಲೆನಾಡಿನ ಹುಡುಗಿ

ಶಿವಮೊಗ್ಗ : ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಹಾಸ್ಯನಟ ಚಿಕ್ಕಣ್ಣ ಅವರಿಗೆ ಯುವತಿಯೊಬ್ಬಳು ರಾಖಿ ಕಟ್ಟಿದ ಪ್ರಸಂಗ ನಡೆಯಿತು. ಎಸ್, ಶಿವಮೊಗ್ಗದ ಭದ್ರಾ ಜಲಾಶಯಕ್ಕೆ ನಟ ದರ್ಶನ್ ಜೊತೆ ಭೇಟಿ ನೀಡಿದ್ದ ಹಾಸ್ಯ ನಟ...

ತರಕಾರಿಗಳ ರೇಟು ಹೆಚ್ಚಳ:ಅನ್ನದಾತನ ಮುಖದಲ್ಲಿ ಮೂಡಿದೆ ಮಂದಹಾಸ

ಕೋಲಾರ: ಜಿಲ್ಲೆಯಲ್ಲಿ ತರಕಾರಿ ರೇಟು ಸುಧಾರಣೆಯಾಗಿದೆ. ಲಾಕ್ ಡೌನ್ ವೇಳೆಯಲ್ಲಿ ತರಕಾರಿಗಳನ್ನು ಚರಂಡಿಗೆ ಎಸೆಯಲಾಗಿತ್ತು. ಆದ್ರೆ, ಜಿಲ್ಲೆಯಲ್ಲಿ ಬೇಸಿಗೆ, ಮಳೆ ಹಾಗೂ ಟಮೊಟೋ ಬೆಳೆ ಜಾಸ್ತಿಯಾದ್ದರಿಂದ ತರಕಾರಿ ಬೆಳೆಗಳು ಕಡಿಮೆಯಾಗಿದೆ. ಇದ್ರಿಂದ ಏರಿಕೆ...

ನನಸಾಗಿದೆ ಶಂಕರ್​ನಾಗ್ ಕನಸು -ಸ್ಟೇಷನ್​ ಆಗಿದೆ ‘ಮಾಲ್ಗುಡಿ ಡೇಸ್’ ಮ್ಯೂಸಿಯಂ..!

ಶಿವಮೊಗ್ಗ: ದಿ. ಶಂಕರ್​ನಾಗ್ ಅವರ ಕಾಲ್ಪನಿಕ ಲೋಕದ ಕನಸು ಈಡೇರಿದೆ. ಹೊಲ-ಗದ್ದೆ, ಶಾಲೆ, ಹಳ್ಳಿ ಸೊಗಡಿನ ಮುಗ್ಧ ಜನರು ಹಳ್ಳಿಯಲ್ಲಿ ಹರಿಯುವ ಹೊಳೆ, ತೊರೆ ಇವೆಲ್ಲವೂ ಶಂಕರ್ ನಾಗ್ ಕಲ್ಪನೆ. ಈ ಕಲ್ಪನೆಯನ್ನಿಟ್ಟುಕೊಂಡು,...

Recent Comments