Home ದೇಶ-ವಿದೇಶ 'ಮಹಾ' ತೀರ್ಪು : ನಾಳೆ ಸಂಜೆ 5ರೊಳಗೆ ಬಹುಮತ ಸಾಬೀತಿಗೆ 'ಸುಪ್ರೀಂ' ಆದೇಶ

‘ಮಹಾ’ ತೀರ್ಪು : ನಾಳೆ ಸಂಜೆ 5ರೊಳಗೆ ಬಹುಮತ ಸಾಬೀತಿಗೆ ‘ಸುಪ್ರೀಂ’ ಆದೇಶ

ನವದೆಹಲಿ : ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟು ಕೈಮ್ಯಾಕ್ಸ್ ತಲುಪಿದ್ದು, ಸರ್ಕಾರ ರಚನೆ ವಿರೋಧಿಸಿ ಎನ್​ಸಿಪಿ – ಶಿವಸೇನೆ – ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಕೋರ್ಟ್ ಮಹತ್ತರ ತೀರ್ಪು ನೀಡಿದೆ. ಬುಧವಾರ ಸಂಜೆ 5ಗಂಟೆಯೊಳಗೆ ‘ನೇರ ಪ್ರಸಾರದೊಂದಿಗೆ’ ಬಹುಮತ ಸಾಬೀತು ಪಡಿಸುವಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​ಗೆ ‘ಸುಪ್ರೀಂ’ ಆದೇಶಿಸಿದೆ.
ಶಾಸಕರೆಲ್ಲಾ ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ಹಂಗಾಮಿ ಸ್ಪೀಕರ್ ನೇತೃತ್ವದಲ್ಲಿ ವಿಶ್ವಾಸ ಮತ ಪ್ರಕ್ರಿಯೆ ನಡೆಯಬೇಕು. ಗೌಪ್ಯ ಮತದಾನ ನಡೆಸದೆ ನೇರ ಪ್ರಸಾರದ ಮೂಲಕ ಮತದಾನ ಪ್ರಕ್ರಿಯೆ ನಡೆಸುವಂತೆ ಸುಪ್ರೀಂ ಸೂಚಿಸಿದ್ದು, ದೇವೇಂದ್ರ ಫಡ್ನವಿಸ್​ಗೆ ಅಗ್ನಿಪರೀಕ್ಷೆ ಎದುರಾಗಿದೆ.
ಕಳೆದ 23ರಂದು ಬಿಜೆಪಿಯ ದೇವೇಂದ್ರ ಫಡ್ನವಿಸ್ ಮತ್ತು ಎನ್​ಸಿಪಿಯ ಅಜಿತ್ ಪವಾರ್ ಕ್ರಮವಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ರು. ಈ ಮಿಂಚಿನ ಮೈತ್ರಿಗೆ ಅವಕಾಶ ಮಾಡಿಕೊಟ್ಟ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಕ್ರಮ ಪ್ರಶ್ನಿಸಿ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದವು.
24 ಮತ್ತು 25ರಂದು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ ನ್ಯಾ. ಎನ್ ವಿ ರಮಣ, ನ್ಯಾ. ಅಶೋಕ್ ಭೂಷಣ್ ಮತ್ತು ನ್ಯಾ. ಸಂಜೀವ್ ಖನ್ನಾ ನೇತೃತ್ವದ ತ್ರಿಸದಸ್ಯ ಪೀಠ ಇಂದು ತೀರ್ಪನ್ನು ಪ್ರಕಟಿಸಿದೆ.

LEAVE A REPLY

Please enter your comment!
Please enter your name here

- Advertisment -

Most Popular

ಕೊರೋನಾಗೆ ಕ್ಯಾರೆ ಅನ್ನದೆ ನೃತ್ಯ ಮಾಡಿ ಧೈರ್ಯ ತುಂಬಿದ ಹೋಟೆಲ್ ಮಾಲಕ

ಉಡುಪಿ : ಕೋರೊನಾ ಬಂದ್ರೆ ನಮ್ಮ ಕಥೆ ಮುಗಿತು ಅನ್ನೋ ಈ ಸಂದರ್ಭದಲ್ಲಿ, ಕೋಟದ ಕೊರೋನಾ ಪಾಸಿಟಿವ್ ವ್ಯಕ್ತಿಯೋರ್ವರು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಕೋಟದ ಹೋಟೆಲ್ ಮಾಲಕರೋರ್ವರಿಗೆ ಕೊರೋನಾ ಪಾಸಿಟಿವ್ ಬಂದ...

ಸಂಬಳ ಕೇಳಿದರೆ ಕೆಲಸದಿಂದ ತೆಗೆಯುತ್ತೇವೆ ! ವಿಮ್ಸ್​​ನಲ್ಲಿ ಇದೆಂಥಾ ಅಮಾನವೀಯತೆ ?

ಬಳ್ಳಾರಿ : ಕಳೆದ ಆರು ತಿಂಗಳಿನಿಂದ ಸಂಬಳವೇ ಸಿಕ್ಕಿಲ್ಲ ಅಂತ ಬಳ್ಳಾರಿಯ ವಿಮ್ಸ್ ನಲ್ಲಿ ಗುತ್ತಿಗೆ ಆಧಾರಿತ ಸಿಬ್ಬಂದಿ ಧರಣಿ ಕೂತಿದ್ದಾರೆ. ಕೊರೊನಾ ವಾರಿಯರ್ ಅಂತ ಸರ್ಕಾರ ನಮ್ಮನ್ನ ಕರೆಯುತ್ತೆ. ಆದ್ರೆ ನಮಗೆ...

ಕೊರೋನಾ ಗೆದ್ದ 96 ವೃದ್ಧೆ ಈಗ ಕೊರೋನಾ ರೋಗಿಗಳಿಗೆ ಸ್ಫೂರ್ತಿ

ಚಿತ್ರದುರ್ಗ : ಕೊರೋನಾ ಸೋಂಕಿನ ಭೀತಿ ಎಲ್ಲೆಡೆ ಹಬ್ಬಿದ್ದರೂ, ಆತ್ಮಿವಿಶ್ವಾಸವೊಂದಿದ್ದರೆ ಕೊರೋನಾ ಸೋಂಕಿನಿಂದ ಗುಣವಾಗಬಹುದು ಎನ್ನುವುದಕ್ಕೆ ಈ ವೃದ್ಧೆಯೇ ಸಾಕ್ಷಿ. ಚಿತ್ರದುರ್ಗ  ‌ಜಿಲ್ಲೆಯ ಹಿರಿಯೂರು ಮೂಲದ 96 ವರ್ಷದ ವೃದ್ದೆ ಕರೋನಾ ಸೋಂಕಿನಿಂದ...

ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆ, ಪ್ರಕರಣ ದಾಖಲು

ಉಡುಪಿ : ಹೋಮ್ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೋರ್ವರು ನಿಯಮ ಉಲ್ಲಂಘಿಸಿ ಉಡುಪಿಯಿಂದ ಕಾರ್ಕಳ ಪ್ರಯಾಣಿಸಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ. ನಿಯಮ ಉಲ್ಲಂಘಿಸಿದ ಕೊಡಂಕೂರು ನಿವಾಸಿ ವಿನಯ್ ಕುಮಾರ್ ಮೇಲೆ ಉಡುಪಿಯ ನಗರ ಠಾಣೆಯಲ್ಲಿ...