2022 ಏಪ್ರಿಲ್ 26ರ ಮಂಗಳವಾರ ಶನಿ ಸಂಚಾರದಿಂದ ರಾಶಿಗಳ ಮೇಲಾಗುವ ಪರಿಣಾಮವೇನು? ಹಾಗಾದರೆ ನಿಮ್ಮ ರಾಶಿ ಚಿಹ್ನೆ ಯಾವುದು..? ನಿಮಗೂ ಕೂಡ ಇಂದು ಶುಭವಾಗಲಿದೆಯೇ..? ನಿಮ್ಮ ರಾಶಿ ಫಲಾಫಲ ಈ ದಿನ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.
1) ಮೇಷ ರಾಶಿ : ವೃತ್ತಿಯಲ್ಲಿ ಉತ್ತಮ, ವಿದ್ಯೆಯಲ್ಲಿ ಯಶಸ್ಸು, ಆರೋಗ್ಯದಲ್ಲಿ ಸಮಾಧಾನ ಫಲ, ಆರ್ಥಿಕ ಸುಧಾರಣೆ. ಸುಬ್ರಹ್ಮಣ್ಯ ಆರಾಧನೆ
2) ವೃಷಭ : ವ್ಯವಹಾರ ಕ್ಷೇತ್ರ ಮತ್ತು ಆರೋಗ್ಯದಲ್ಲಿ ತೃಪ್ತಿಯ ಫಲ, ಕಲಾರಂಗ ಮತ್ತು ಕ್ರೀಡೆಯ ಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿ, ಆರೋಗ್ಯದಲ್ಲಿ ಜಾಗರೂಕತೆ, ವಾಹನದಲ್ಲಿ ಎಚ್ಚರಿಕೆ, ಕೌಟುಂಬಿಕ ಅಶಾಂತಿ. ದುರ್ಗೆಯ ಪ್ರಾರ್ಥನೆ.
3) ಮಿಥುನ : ಬಹುತೇಕ ಸಮಾಧಾನದ ವಾತಾವರಣ ನಿರ್ಮಾಣ, ಆರ್ಥಿಕತೆಯ ಸುಧಾರಣೆ, ಬಹುಕಾಲದ ತೊಂದರೆಗೆ ಸೂಕ್ತ ಪರಿಹಾರ ಸಿಗುವುದು, ಆರೋಗ್ಯದ ಸಮಸ್ಯೆಗೂ ಪರಿಹಾರ ಸಿಗುವುದು. ಲಕ್ಸ್ಮೀನಾರಾಯಣ ಆರಾಧನೆ
4) ಕರ್ಕಾಟಕ : ಅತ್ಯಂತ ಎಚ್ಚರಿಕೆಯ ಹೆಜ್ಜೆ ಅಗತ್ಯ, ದಾಂಪತ್ಯ ಸಾಮರಸ್ಯದ ಕೊರತೆಯ ಫಲಗಳು, ಆರ್ಥಿಕ ಮುಗ್ಗಟ್ಟಿನ ಫಲ ಕಂಡುಬರುವುದು, ಸಾಮಾಜಿಕವಾಗಿ ಎಚ್ಚರಿಕೆ ತುಂಬಾ ಅನಿವಾರ್ಯ, ಮಾನಸಿಕ ಅಶಾಂತಿ, ಆರೋಗ್ಯದ ವ್ಯತ್ಯಾಸ ಫಲಗಳು. ಶಿವಾರಾಧನೆ.
5) ಸಿಂಹ – ಕೌಟುಂಬಿಕ ಸಾಂಸಾರಿಕ ಶಾಂತಿಯ ಸ್ಥಿತಿಯ ಫಲ, ವೃತ್ತಿಯಲ್ಲಿ ತೃಪ್ತಿ, ಆರ್ಥಿಕ ಸುಧಾರಣೆ, ಆರೋಗ್ಯದಲ್ಲಿಯೂ ಉತ್ತಮ ಫಲ, ಆದರೂ ಗುರುವಿನ ಅನಾನುಕೂಲ ಇರುವುದರಿಂದ ಸರ್ವ ರಂಗದಲ್ಲೂ ಎಚ್ಚರಿಕೆ ಅಗತ್ಯ. ಶಿವಾರಾಧನೆ.
6) ಕನ್ಯಾ : ಕೌಟುಂಬಿಕ ಮತ್ತೆ ವೃತ್ತಿ ಜೀವನದಲ್ಲಿ ಯಶಸ್ಸು , ಸಾರ್ವಜನಿಕ ಬದುಕಿನಲ್ಲಿ ಒಂದಷ್ಟು ಸ್ಥಾನಮಾನ ಪ್ರಾಪ್ತಿಯ ಸಂಭವನೀಯ ಫಲಗಳು, ಆರೋಗ್ಯದಲ್ಲಿ ತೃಪ್ತಿ, ಆರ್ಥಿಕ ಸುಧಾರಣೆ, ನ್ಯಾಯಾಂಗ ಸಮಸ್ಯೆಗೆ ತಾರ್ಕಿಕ ಅಂತ್ಯ ಫಲ. ವಿಷ್ಣು ಪ್ರಾರ್ಥನೆ
7) ತುಲಾ : ಒಂದಷ್ಟು ಮಾನಸಿಕ ತೊಳಲಾಟ ಗೊಂದಲ,ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಆರೋಗ್ಯ ವ್ಯತ್ಯಾಸ ಫಲ, ಆರ್ಥಿಕಮುಗ್ಗಟ್ಟಿನ ಫಲಗಳು, ಕಲೆಯ ರಂಗದಲ್ಲಿ ಕೃಷಿ ನಡೆಸುವವರಿಗೆ ಸಮಾಧಾನಕ್ಕೆ ಸೀಮಿತ ಸ್ಥಿತಿ ಫಲ. ದುರ್ಗೆಯ ಪ್ರಾರ್ಥನೆ.
8) ವೃಶ್ಚಿಕ : ಮಕ್ಕಳಿಂದ ಸಂತೋಷದ ವಾತಾವರಣದ ಫಲ, ಆರೋಗ್ಯದಲ್ಲಿ ಸುಧಾರಣೆ, ದೇಹಾಯಾಸದ ಫಲ, ಆರ್ಥಿಕ ಸುಧಾರಣೆ, ಕೃಷಿ ಚಟುವಟಿಕೆಯಲ್ಲಿ ತೃಪ್ತಿ ಫಲ, ಆತುರದ ಕೆಲವು ನಿರ್ಧಾರ ನಿಮ್ಮನ್ನು ಪೇಚಿಗೆ ಸಿಲುಕಿಸುವುದು, ಗೊಂದಲಕ್ಕೆ ಎಡೆಮಾಡುವುದು, ಎಚ್ಚರದ ಹೆಜ್ಜೆ ಅಗತ್ಯ. ಸುಬ್ರಹ್ಮಣ್ಯ ಪ್ರಾರ್ಥನೆ
9) ಧನು – ವೃತ್ತಿಯಲ್ಲಿ ತೃಪ್ತಿ ಆರೋಗ್ಯದಲ್ಲಿ ಸಮಾದಾನ, ಆರ್ಥಿಕ ವಿಷಯದಲ್ಲಿಯೂ ಸಮಾದಾನ, ದಾಂಪತ್ಯ ಸೌಖ್ಯ ಫಲ ಮಕ್ಕಳಿಂದ ಮನಸ್ಸಿಗೆ ಬೇಸರ ಸಾಧ್ಯತೆ, ದೂರ ತಿರುಗಾಟ ಯೋಗ ತೀರ್ಥಕ್ಷೇತ್ರ ಪರ್ಯಟನೆಯ ಫಲ. ಗುರುಗಳ ಪ್ರಾರ್ಥನೆ.
10) ಮಕರ : ವೃತ್ತಿಯಲ್ಲಿ ಸಮಾಧಾನ, ಆರೋಗ್ಯದಲ್ಲಿ ತೃಪ್ತಿ, ಸುಧಾರಣೆ, ಬಹುತೇಕ ಮಾನಸಿಕ ಸಮಾಧಾನ, ಸಾಮಾಜಿಕ ವ್ಯವಸ್ಥೆಯಲ್ಲಿ ಸ್ವಲ್ಪ ಸುಧಾರಣೆ, ವಿದ್ಯಾರ್ಥಿಗಳಿಗೂ ಸಮಾಧಾನ ಫಲ ಸಾಧ್ಯತೆ, ಆರ್ಥಿಕ ಎಚ್ಚರಿಕೆ ಅಗತ್ಯ. ಆಂಜನೇಯ ಪ್ರಾರ್ಥನೆ
11) ಕುಂಭ : ಮಾನಸಿಕ ಆರ್ಥಿಕ ದೈಹಿಕ ಈ ಮೂರು ವಿಷಯದಲ್ಲೂ ಜಾಗರೂಕತೆ ಅಗತ್ಯ, ವಾಹನಾಡಿಗಳಿಂದ ಎಚ್ಚರಿಕೆ ಅಗತ್ಯ ಸಾಲ ಬಾಧೆ, ಆರೋಗ್ಯದ ಬಾಧೆ. ಆಂಜನೇಯ ಪ್ರಾರ್ಥನೆ
12) ಮೀನಾ : ನಷ್ಟ ಫಲಗಳು ಅಧಿಕವಾಗಿ ಇರುವುದು, ಆರ್ಥಿಕ ಆರೋಗ್ಯ ಮಾನಸಿಕ ನೆಮ್ಮದಿ ಈ ಮೂರು ನಷ್ಟ ಕಂಡು ಬರುವುದು, ವಾಹನಾಡಿಗಳಿಂದ ಜಾಗರೂಕತೆ, ಸ್ಥಾನಮಾನದಲ್ಲಿ ವ್ಯತ್ಯಾಸ ಸಾಧ್ಯತೆ, ಆರೋಗ್ಯದಲ್ಲಿ ವ್ಯತ್ಯಾಸ ಸಾಧ್ಯತೆ. ಗುರುಗಳ ಪ್ರಾರ್ಥನೆ