ಬಹುಮತ ಸಾಬೀತು ಪಡಿಸ್ತೀವಿ : ಸತೀಶ್ ಜಾರಕಿಹೊಳಿ ವಿಶ್ವಾಸ..!

0
208

ಬೆಳಗಾವಿ: ಜುಲೈ 17 ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ನಡೆಸಲಿದ್ದಾರೆ. ಈ ನಿಟ್ಟಿನಲ್ಲಿ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರ ಮನವೊಲಿಕೆಗೆ ದೋಸ್ತಿ ನಾಯಕರು ಕಸರತ್ತು ನಡೆಸುತ್ತಿದ್ದಾರೆ. ಸರಕಾರಕ್ಕೆ ಏನೂ ಆಗಲ್ಲ. ಬುಧವಾರ ನಾವು ಬಹುಮತ ಸಾಬೀತು ಪಡಿಸ್ತೀವಿ ಅಂತ ಮೈತ್ರಿ ನಾಯಕರು ವಿಶ್ವಾಸ ವ್ಯಕ್ತಪಡಿಸ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಅತೃಪ್ತರಲ್ಲಿ ನಾಲ್ವರು ಶಾಸಕರು ವಾಪಾಸ್​ ಬರ್ತಿದ್ದಾರೆ ಅಂತ ಹೇಳಿದ್ದಾರೆ. 

ಬೆಳಗಾವಿಯಲ್ಲಿ ಮಾತಾಡಿದ ಅವ್ರು, ಸರ್ಕಾರ ಉಳಿಸಿಕೊಳ್ಳಲು ಎಲ್ಲಾ ರೀತಿ‌ ಪ್ರಯತ್ನ ಮಾಡ್ತಿದ್ದೇವೆ. ರಾಮಲಿಂಗಾರೆಡ್ಡಿ, ರೋಷನಬೇಗ್, ಎಂಟಿಬಿ ನಾಗರಾಜ್, ಡಾ.ಕೆ.ಸುಧಾಕರ್ ನಮ್ಮ​ ಕಾಂಗ್ರೆಸ್ ಪಕ್ಷದಲ್ಲೇ ಇದ್ದಾರೆ. ಮುಂಬೈಗೆ ಹೋಗಿರುವ ಕೆಲ ಶಾಸಕರೂ ನಮ್ಮ ಜೊತೆಗಿದ್ದಾರೆ ಯಾವುದೇ ಸಮಯದಲ್ಲಿ ನಮ್ಮನ್ನ ಸೇರಿಕೊಳ್ಳಬಹುದು. ನಮ್ಮ ಸರ್ಕಾರ ಅಳಿವಿನಂಚಿನಲ್ಲಿದೆ ಎಂಬ ಭಾವನೆ ಇತ್ತು ಆದ್ರೆ ಈಗ ರಾಜ್ಯ ರಾಜಕಾರಣದಲ್ಲಿ ವಾತಾವರಣ ತಿಳಿಯಾಗಿದೆ ಅಂತ ವಿಶ್ವಾಸದ ನುಡಿಗಳನ್ನಾಡಿದ್ದಾರೆ. 

LEAVE A REPLY

Please enter your comment!
Please enter your name here