Home ಪವರ್ ಪಾಲಿಟಿಕ್ಸ್ ``ನಾನು ದುರ್ಯೋಧನ ,ಆದ್ರೆ ದುಶ್ಯಾಸನ ಅಲ್ಲ''..!

“ನಾನು ದುರ್ಯೋಧನ ,ಆದ್ರೆ ದುಶ್ಯಾಸನ ಅಲ್ಲ”..!

ಮೈಸೂರು: “ನಾನು ದುರ್ಯೋಧನ ಅನ್ನೋದನ್ನು ಒಪ್ಕೋತ್ತೀನಿ. ಆದ್ರೆ, ದುಶ್ಯಾಸನ ಅಲ್ವಲ್ಲಾ”? – ಇದು ಮಾಜಿ ಸಚಿವ ಸಾ.ರಾ ಮಹೇಶ್ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್​ ವಿಶ್ವನಾಥ್​​ಗೆ ತಿರುಗೇಟು ನೀಡಿದ ಪರಿ! 

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ವಿಶ್ವನಾಥ್​ ನನ್ನನ್ನು ದುರ್ಯೋಧನ ಅಂತ ಕರೆದಿದ್ದಾರೆ. ನಾನು ದುರ್ಯೋಧನನೇ.. ಅವನಿಗೂ ಒಂದಷ್ಟು ಒಳ್ಳೆಯ ಗುಣಗಳಿವೆ. ಪುಣ್ಯಕ್ಕೆ ದುಶ್ಯಾಸನ ಅಂತ ಕರೆದಿಲ್ಲ..! ಯಾರು ಭೀಮ ,ಯಾರು ದುರ್ಯೋಧನ ಅಂತ ಜನ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.

ನಾವಿಬ್ಬರೂ ಅಣೆ ಪ್ರಮಾಣಕ್ಕಾಗಿ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದೆ ತಪ್ಪು. ನಾನು ದೇವಸ್ಥಾನದ ಒಳಗೆ ಕುಳಿತಿದ್ದೆ ನಿಜ. ಒಂದು ವೇಳೆ ಹೊರಗಡೆ ಬಂದಿದ್ದರೆ ನನ್ನ ಜೊತೆ ನೂರಾರು ಕಾರ್ಯಕರ್ತರಿದ್ದರು. ಪರಿಸ್ಥಿತಿ ಒಂಚೂರು ಹೆಚ್ಚು-ಕಮ್ಮಿಯಾಗಿದ್ರೆ, ಏನ್ಮಾಡ್ಬೇಕಿತ್ತು? ಹೀಗಾಗಿ ಯಾರು ಪ್ರಾಮಾಣಿಕರು ಅಂತ ಜನ ಅರ್ಥ ಮಾಡಿಕೊಂಡಿದ್ದಾರೆ ಅಂದ್ರು. 

 

LEAVE A REPLY

Please enter your comment!
Please enter your name here

- Advertisment -

Most Popular

ಸಕ್ಕರೆ ಕಾರ್ಖಾನೆಯನ್ನ ಖಾಸಗಿಯವರಿಗೆ ಲೀಸ್ ಕೊಡಲು ನಿರ್ಧಾರ : ರೈತ ಮುಖಂಡರ ಆಕ್ರೋಶ

ಬಾಗಲಕೋಟೆ: ಜಿಲ್ಲೆಯ ಮುಧೋಳ ತಿಮ್ಮಾಪುರದ ರನ್ನ ಶುಗರ್ ಕಾರ್ಖಾನೆ ರೈತರಿಂದಲೇ  ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸಿಕೊಂಡು ರೈತರ ಹಿತಕಾಪಾಡಿಕೊಂಡು ಬಂದಿತ್ತು. ಪ್ರತಿವರ್ಷ  ರೈತರ ಹಿತ ಕಾಪಾಡಿಕೊಂಡು ಬರ್ತಿತ್ತು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಆಡಳಿತ...

ಸಿದ್ಧರಾಮಯ್ಯ ಟ್ವೀಟ್​ಗೆ ಕಿಡಿ ಕಾರಿದ ಈಶ್ವರಪ್ಪ..!

ಶಿವಮೊಗ್ಗ: ಬೆಂಗಳೂರು ಗಲಭೆ ಸಂಬಂಧ ವಿಪಕ್ಷ ನಾಯಕ ಸಿದ್ಧರಾಮಯ್ಯ ಟ್ವೀಟ್​ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿ ಕಾರಿದ್ದಾರೆ. ಹಿಂದೂ ಗುರುಗಳು, ಮುಸ್ಲಿಂ ಹಿರಿಯರು ಶಾಂತಿ ಸ್ಥಾಪನೆಗೆ ಪ್ರಯತ್ನ ಮಾಡಿ ಎಂದು ಸಿದ್ಧರಾಮಯ್ಯ...

ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಪತ್ರ ಚಳುವಳಿ..!

ಕೊಪ್ಪಳ : ಪತ್ರಕರ್ತರ ಮೇಲೆ ನಡೆಯುವ ಹಲ್ಲೆಗಳು ತಡೆಗೆ ಕಾಯ್ದೆ ರೂಪಿಸಬೇಕು ಎಂದು ಕೊಪ್ಪಳ ಮೀಡಿಯಾ ಕ್ಲಬ್ ಪತ್ರಕರ್ತರು ಪತ್ರ ಚಳುವಳಿ ಆರಂಭಿಸಿದ್ದಾರೆ. ಪದೇ ಪದೇ ಪತ್ರಕರ್ತರ ಮೇಲೆ ಒಂದಲ್ಲ ಒಂದು ರೀತಿಯ ಹಲ್ಲೆಗಳು...

ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ರಾಜಕೀಯ ಕೈವಾಡ : ನಳೀನ್​ ಕಮಾರ್ ಕಟೀಲು

ಹುಬ್ಬಳ್ಳಿ : ಕೆ.ಜಿ ಹಳ್ಳಿ ಘಟನೆಯಲ್ಲಿ ಸರ್ಕಾರಿ ಆಸ್ತಿ ಪಾಸ್ತಿಗಳನ್ನು ಹಾನಿ ಮಾಡಲಾಗಿದೆ, ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ಮೇಲೆ ಕಠಿಣ ಕ್ರಮಗೈಗೊಳ್ಳಬೇಕು. ಇದು ರಾಜಕೀಯ ಹುನ್ನಾರ, ರಾಜ್ಯದಲ್ಲಿ ಗಲಭೆ ಎಬ್ಬಿಸುವ...

Recent Comments