ಬೆಂಗಳೂರು: ಕಳೆದ ಹತ್ತು ವರ್ಷಗಳಿಂದ ರಾಜ್ಯದಲ್ಲಿ ಕೊರೋನಾ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ಆದರೆ ಇದರ ಮಧ್ಯ ಕೊರೋನ ಅಂತ್ಯ ಮಾಡಲು ಕೊನೆಗೂ ಲಸಿಕೆ ರೆಡಿಯಾಗಿದೆ. ಲಸಿಕೆಯನ್ನು ಬಳಕೆ ಮಾಡಲು ಡಿಸಿಜಿಐ ಗ್ರೀನ್ ಸಿಗ್ನಲ್ ನೀಡಿದೆ.
ಭಾರತ ಪ್ರಧಾನ ಔಷಧ ನಿಯಂತ್ರಣ ಅಧ್ಯಕ್ಷ ವಿ.ಜಿ ಸೋಮಾನಿ ದೇಶವಾಸಿಗಳಿಗೆ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ. ತುರ್ತು ಸಂಧರ್ಭದಲ್ಲಿ ಎರಡು ಲಸಿಕೆಯನ್ನು ಬಳಸಬಹುದು ಎಂದು ಹೇಳಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ ಕೊವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆಯನ್ನು ಬಳಸಬಹುದು. ಕೊವಿಶೀಲ್ಡ್, ಕೊವ್ಯಾಕ್ಸಿನ್ ಎರಡು ಲಸಿಕೆ ಸುರಕ್ಷಿತವಾಗಿವೆ ಎಂದರು.
ಈಗಾಗಲೇ 2 ಲಸಿಕೆಗಳನ್ನ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಕೊವಿಶೀಲ್ಡ್ 23 ಸಾವಿರಕ್ಕೂ ಹೆಚ್ಚು ಮಂದಿ ಮೇಲೆ ಪ್ರಯೋಗ ಮಾಡಲಾಗಿದೆ. ಲಸಿಕೆ ನೀಡಿದವರ ಮೇಲೆ ವೈದ್ಯರು ತೀವ್ರ ನಿಗಾದಲ್ಲಿ ಇಡಲಾಗಿದೆ.
ಕೊವಿಶೀಲ್ಡ್, ಕೊವ್ಯಾಕ್ಸಿನ್ ಬಳಕೆಗೆ ಡಿಸಿಜಿಐ ಅನುಮತಿಯನ್ನು ನೀಡಲಾಗಿದೆ. ಕೊವಿಶೀಲ್ಡ್ ಶೇಕಡ 70ರಷ್ಟು ದಕ್ಷತೆ ಹೊಂದಿದೆ. ಆಸ್ಟ್ರಾಜೆನಿಕಾ, ಆಕ್ಸ್ಫರ್ಡ್ ವಿವಿಯ ಕೊವಿಶೀಲ್ಡ್ ಲಸಿಕೆ. ಕೊವ್ಯಾಕ್ಸಿನ್ ಲಸಿಕೆ ಶೇ.50-60ರಷ್ಟು ದಕ್ಷತೆ ಹೊಂದಿದೆ. ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿರುವ ಕೊವ್ಯಾಕ್ಸಿನ್ ಸುದ್ದಿಗೋಷ್ಠಿಯಲ್ಲಿ ಡಿಸಿಜಿಐ ಅಧ್ಯಕ್ಷ ಡಾ.ವಿ.ಜಿ ಸೋಮಾನಿ ಹೇಳಿಕೆ ನೀಡಿದ್ದಾರೆ.
ಲಸಿಕೆಯನ್ನು ಪುಣೆಯಲ್ಲಿರುವ ಸೆರಂ ಇನ್ಸ್ಟಿಟ್ಯೂನ್ ಆಫ್ ಇಂಡಿಯಾ ಸೆರಂ ಇನ್ಸ್ಟಿಟ್ಯೂಟ್ ಉತ್ಪಾದಿಸುತ್ತಿದೆ. 2 ರಿಂದ 8 ಡಿಗ್ರಿ ಸೆಲ್ಸಿಯಸ್ನಲ್ಲಿ ಲಸಿಕೆ ಸಂಗ್ರಹಿಸಿಡಬಹುದು. ಕೊವಿಶೀಲ್ಡ್ ಲಸಿಕೆಯ 1 ಡೋಸ್ಗೆ 500 ರೂಪಾಯಿ ಈಗಾಗಲೇ 4-5 ಕೋಟಿ ಲಸಿಕೆ ಉತ್ಪಾದಿಸಿರುವ ಸರಂ ಉತ್ಪಾದನೆಯ ಶೇಕಡಾ 50ರಷ್ಟು ಲಸಿಕೆ ಭಾರತೀಯರಿಗೆ ನೀಡಲಾಗುತ್ತೆ ಎಂದರು.
ಕೊರೋನಾ ಸ್ವದೇಶಿ ವ್ಯಾಕ್ಸಿನ್ ಶೇ.110ರಷ್ಟು ಸುರಕ್ಷಿತವಾಗಿದೆ. ವ್ಯಾಕ್ಸಿನ್ ನೀಡಿದ ಬಳಿಕ ಕೊಂಚ ಸೈಡ್ ಎಫೆಕ್ಟ್ ಆಗೋದು ಸಾಮಾನ್ಯ. ವ್ಯಾಕ್ಸಿನ್ ಪಡೆದಾಗ ಸೈಡ್ ಎಫೆಕ್ಟ್ ಜ್ವರ, ನೋವು, ಅಲರ್ಜಿಯಾಗುವ ಸಾಧ್ಯತೆ ಇರುತ್ತದೆ. ದೆಹಲಿಯಲ್ಲಿ ಡಿಸಿಜಿಐ ಅಧ್ಯಕ್ಷ ಡಾ.ವಿ.ಜಿ ಸೋಮಾನಿ ಎಂದು ಹೇಳಿದ್ದಾರೆ.