ಸಂಜಯ್ ದತ್ ಬರ್ತ್​​ಡೇಗೆ ಕೆಜಿಎಫ್-2​ ಟೀಮ್​ ಕೊಟ್ಟ ಸ್ಪೆಷಲ್ ಗಿಫ್ಟೇನು?

0
188

ಇವತ್ತು ಬಾಲಿವುಡ್​ ನಟ ಸಂಜಯ್​ ದತ್ ಬರ್ತ್​ಡೇ. 61ನೇ ವಸಂತಕ್ಕೆ ಕಾಲಿಟ್ಟಿರುವ ಸಂಜಯ್​ ದತ್​ಗೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್​-2 ಟೀಮ್​ ಗಿಫ್ಟ್ ನೀಡಿದೆ.
ಹೌದು, ಯಶ್ ಅಭಿನಯದ, ಪ್ರಶಾಂತ್ ನೀಲ್​ ಆ್ಯಕ್ಷನ್​ ಕಟ್ ಹೇಳ್ತಿರೋ ಕೆಜಿಎಫ್ ಚಾಪ್ಟರ್-2ನಲ್ಲಿ ಸಂಜಯ್ ದತ್​ ನಟಿಸ್ತಿರೋ ಬಗ್ಗೆ ಎಲ್ರಿಗೂ ಗೊತ್ತೇ ಇದೆ. ಸಂಜಯ್ ಈ ಸಿನಿಮಾದಲ್ಲಿ ಅಧೀರ ಪಾತ್ರ ಮಾಡ್ತಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಅಧೀರ ಪಾತ್ರದ ಫಸ್ಟ್​​ ಲುಕ್ಕನ್ನು ಚಿತ್ರತಂಡ ರಿಲೀಸ್ ಮಾಡಿದೆ. ಖಡರ್​​ ಲುಕ್​ನಲ್ಲಿ ಸಂಜಯ್ ದತ್​ ಕಾಣಿಸಿಕೊಂಡಿದ್ದಾರೆ.
ಇನ್ನು ತಮ್ಮ ಪಾತ್ರದ ಫಸ್ಟ್​ಲುಕ್​ ಗೆ ಸ್ವತಃ ಸಂಜಯ್​ ದತ್ತೇ ಫಿದಾ ಆಗಿದ್ದು, ‘ನಂಗೊಂದು ಒಳ್ಳೆಯ ಪಾತ್ರ ಕೊಟ್ಟು ಕೆಜಿಎಫ್​-2ನ ಭಾಗವಾಗೋಕೆ ಅವಕಾಶ ನೀಡಿದ್ದಕ್ಕೆ ಚಿತ್ರತಂಡಕ್ಕೆ ಧನ್ಯವಾದಗಳು. ಅಧೀರನ ಪಾತ್ರದಲ್ಲಿ ನಟಿಸಲು ಎಕ್ಸೈಟ್​ ಆಗಿದ್ದೀನಿ’ ಅಂತ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here