Home ಸಿನಿ ಪವರ್ ಫೋಟೋಶೂಟ್ ಗೆ ಬಂದಾಗ ಸಂಜನಾ ಗಂಡಸಿನಂತೆ ನಿಂತಿದ್ರಂತೆ..!

ಫೋಟೋಶೂಟ್ ಗೆ ಬಂದಾಗ ಸಂಜನಾ ಗಂಡಸಿನಂತೆ ನಿಂತಿದ್ರಂತೆ..!

ಸ್ಯಾಂಡಲ್ ವುಡ್ ನಲ್ಲಿ ಶ್ರುತಿ ಹರಿಹರನ್ ಹಚ್ಚಿದ  ಮೀ ಟೂ ಬೆಂಕಿ ಸದ್ಯಕ್ಕೆ ಆರುವ ಲಕ್ಷಣ ಇಲ್ಲ..! ಅರ್ಜುನ್ ಸರ್ಜಾ ಮೇಲೆ ಶ್ರುತಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ಮೇಲೆ ಸ್ಯಾಂಡಲ್ ವುಡ್ ನಲ್ಲಿ ‘ಬೆತ್ತಲೆ’ ಕಥೆ ಸಖತ್ ಸುದ್ದಿ ಆಗ್ತಿದೆ. ದಿನಕ್ಕೊಂದು, ಕ್ಷಣಕ್ಕೊಂದು ಹೊಸ ಹೊಸ ವಿಷ್ಯಗಳು ಬರ್ತಿವೆ. ಇವತ್ತಿನ ಬಿಸಿ ಬಿಸಿ ಸುದ್ದಿ ಏನಪ್ಪಾ ಅಂದ್ರೆ ಸಂಜನಾ-ಶ್ರೀವತ್ಸ ಟಾಕ್ ವಾರ್.

2006ರಲ್ಲಿ ರಿಲೀಸ್ ಆದ ‘ಗಂಡ-ಹೆಂಡತಿ’ ಮೂವಿಯಿಂದ ಸಂಜನಾ ಸ್ಯಾಂಡಲ್ ವುಡ್ ಗೆ ಪರಿಚಯ ಆದ್ರು. ಆ ಮೂವಿಗೆ ಆ್ಯಕ್ಷನ್ ಕಟ್ ಹೇಳಿದ್ದು ರವಿ ಶ್ರೀವತ್ಸ. ಗಂಡ-ಹೆಂಡತಿ ಸಿನಿಮಾ ನೋಡಿದವರಿಗೆ ಗೊತ್ತೇ ಇದೆ. ಈ ಸಿನಿಮಾದಲ್ಲಿ ಸಂಜನಾ ಎಷ್ಟು ಹಾಟ್ ಆಗಿ, ಬೋಲ್ಡ್ ಕಾಣಿಸಿಕೊಂಡಿದ್ದಾರೆ ಅಂತ. ಈಗ ಮೀ ಟೂ ಚಳವಳಿ ಶುರುವಾದ್ಮೇಲೆ ಈ ಹಾಟ್ ಕಥೆಯ ಹಿಂದಿನ ಕೆಟ್ಟ ಎಕ್ಸಿಪೀರಿಯನ್ಸ್ ಅನ್ನು ಸಂಜನಾ ಗಲ್ರಾನಿ ಬಿಚ್ಚಿಟ್ಟಿದ್ದಾರೆ.

 

”ಆಗಿನ್ನೂ ನಂಗೆ 16 ವರ್ಷ. ಸಿನಿಮಾ ಮಾಡ್ಬೇಕು ಅಂತ ಆಸೆ ಇತ್ತು. ಮರ್ಡರ್ ಸಿನಿಮಾದ ರೀಮೇಕ್ ಮೂವಿಯಾದ ಗಂಡ-ಹೆಂಡತಿಯಲ್ಲಿ ನಟಿಸೋ ಅವಕಾಶ ಸಿಕ್ತು. ನಾನು ಹೀಗೆಲ್ಲ ಮಾಡಕ್ಕೆ ಸಾಧ್ಯನೇ ಇಲ್ಲ ಅಂತ ಹೇಳಿದ್ದೆ. ಇಷ್ಟೆಲ್ಲಾ ಕಿಸ್ ಸೀನ್ಸ್ ಇರಲ್ಲಮ್ಮ, ಕನ್ನಡದ ನೇಟಿವಿಟಿಗೆ ತಕ್ಕಂತೆ  ಚಿತ್ರ ಮಾಡ್ತೀವಿ, ಅಮ್ಮಮ್ಮ ಅಂದ್ರೆ ಒಂದೇ ಒಂದು ಕಿಸ್ ಸೀನ್ ಇರುತ್ತೆ ಅಂತ ಡೈರೆಕ್ಟರ್ ರವಿ ಶ್ರೀವತ್ಸ ಹೇಳಿದ್ರು. ಆದ್ರೆ, ಬ್ಯಾಂಕಾಕ್ ನಲ್ಲಿ ಶೂಟಿಂಗ್ ಟೈಮ್ನಲ್ಲಿ ಆಗಿದ್ದೇ ಬೇರೆ. ಒಂದು ಮುತ್ತು ಅಂತ ಹೇಳಿ ಲೆಕ್ಕವಿಲ್ಲದಷ್ಟು ಕಿಸ್ ಮಾಡಿಸಿದ್ರು. ಆಗ ನಂಗೆ ಇದಕ್ಕೆ ವಿರೋಧ ಮಾಡೋ ಧೈರ್ಯ ಇರ್ಲಿಲ್ಲ” ಅಂತ ಸಂಜನಾ ಆರೋಪ ಮಾಡಿದ್ರು.

ಈ ಆರೋಪ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗ್ತಿರೋದು ನಿಮ್ಗೆ ಗೊತ್ತಿಲ್ದೆ ಇರೋ ವಿಷ್ಯ ಅಲ್ಲ. ಇವತ್ತು ಸಂಜನಾ ಬಗ್ಗೆ ಡೈರೆಕ್ಟರ್ ರವಿ ಶ್ರೀವತ್ಸ ಮಾತಾಡಿದ್ದಾರೆ. ಸಂಜನಾ ಪ್ರಚಾರಕ್ಕಾಗಿ ಈ ರೀತಿ ಏನೇನೋ ಮಾತಾಡ್ತಿದ್ದಾರೆ. ಇದು ಸರಿಯಲ್ಲ. ಸಂಜನಾಗೆ ಮರ್ಡರ್ ಸಿನಿಮಾ ರೀತಿಯೇ ಇರುತ್ತೆ. ದೃಶ್ಯಗಳು ಹೀಗಿಗೇ ಇರುತ್ತವೆ ಅಂತ ಹೇಳಿದ್ವಿ. ಅವ್ರು ಅದಕ್ಕೆ ಒಪ್ಪಿದ್ಮೇಲೆಯೇ ಸಿನಿಮಾ ಮಾಡಿದ್ದು. ಸುಳ್ಳು ಹೇಳಿ ಏನನ್ನೂ ಮಾಡಿಲ್ಲ ಅಂದಿದ್ದಾರೆ. ಅಷ್ಟೇ ಅಲ್ಲದೆ ಶೂಟಿಂಗ್ ಗೆ ಆಗಲಿ, ಮೂವಿ ರಿಲೀಸ್ ಗೇ ಆಗಲಿ ಒಂದೇ ಒಂದು ದಿನ ಕೂಡ ಸಂಜನಾ ಅವ್ರ ಅಪ್ಪನನ್ನು ಕರ್ಕೊಂಡು ಬಂದಿರ್ಲಿಲ್ಲ. ಈಗ ಏನೇನೋ ಮಾತಾಡ್ತಿದ್ದಾರೆ ಅನ್ನೋದು ಶ್ರೀವತ್ಸ ಮಾತು.

ಅಷ್ಟೇಅಲ್ಲ ಶ್ರೀವತ್ಸ ಸಂಜನಾ ಬಗ್ಗೆ ವಿವಾದಿತ ಹೇಳಿಕೆಯೊಂದನ್ನೂ ಕೊಟ್ಟಿದ್ದಾರೆ. ಅದೇನಪ್ಪಾ ಅಂದ್ರೆ, ಸಂಜನಾ ಫಸ್ಟ್ ಫೋಟೋಶೂಟ್ ಗೆ ಬಂದಾಗ ಗಂಡಸಿನಂತೆ ನಿಂತಿದ್ರು. ಸಂಜನಾಳ ವರ್ತನೆ ಕಂಡು ಕ್ಯಾಮರಾಮನ್ ಶಾಕ್ ಆಗಿದ್ರು ಅಂತ ಶ್ರೀವತ್ಸ ಹೇಳಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments