Sunday, May 29, 2022
Powertv Logo
Homeಸಿನಿಮಾವರ್ಲ್ಡ್​ ಬಾಕ್ಸ್ ಆಫೀಸ್​ ಹಿಸ್ಟರಿಯಲ್ಲಿ ಯಶ್​ ಚಿತ್ರ ಹೊಸ ಅಧ್ಯಾಯ

ವರ್ಲ್ಡ್​ ಬಾಕ್ಸ್ ಆಫೀಸ್​ ಹಿಸ್ಟರಿಯಲ್ಲಿ ಯಶ್​ ಚಿತ್ರ ಹೊಸ ಅಧ್ಯಾಯ

ಕೆಜಿಎಫ್​ -2 ಸಿನಿಮಾ ಬಿಡುಗಡೆಯಾದ ದಿನದಿಂದ್ಲೂ ಸಿಕ್ಕಾಪಟ್ಟೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಮೊದಲ ದಿನವೇ ಭರ್ಜರಿ ಓಪನ್ ಪಡೆದುಕೊಂಡಿದ್ದ ರಾಕಿಂಗ್ ಸ್ಟಾರ್​ ನಟನೆಯ ಸಿನಿಮಾ ಕಲೆಕ್ಷನ್​ನಲ್ಲಿ 800 ಕೋಟಿ ಲೂಟಿ ಮಾಡಿದ್ದು ಸದ್ಯ 1000 ಕೋಟಿ ಸೇರಲು ರೆಡಿಯಾಗಿದೆ. ಕಲೆಕ್ಷನ್​ನಲ್ಲಿ ಮಾತ್ರವಲ್ಲದೆ ನೀಲ್​ ಸಾರಥ್ಯದ ಕೆಜಿಎಫ್​-2 ಇನ್ನೂ ಹಲವು ವಿಚಾರಗಳಲ್ಲಿ ರಾಕಿಂಗ್​ ರೆಕಾರ್ಡ್ಸ್​ ಮಾಡಿ ಎಲ್ಲರ ಹುಬ್ಬೇರಿಸಿದೆ.

ಕೆಜಿಎಫ್​-2 ಸದ್ಯ ಎಲ್ಲಿ ನೋಡಿದ್ರೂ ಈ ಸಿನಿಮಾದೇ ಸದ್ದು ಸುದ್ದಿ. ಏಪ್ರಿಲ್​​ 14 ರಂದು ವರ್ಲ್ಡ್​ವೈಡ್​ ಶುರುವಾದ ರಾಕಿ ಭಾಯ್ ಕೆಜಿಎಫ್​- 2 ಮೇನಿಯಾ ಇನ್ನೂ ಕಮ್ಮಿಯಾಗಿಲ್ಲ. ಸದ್ಯಕ್ಕೆ ಅದು ಕಡಿಮೆಯಾಗೋದೂ ಇಲ್ಲ. ಯಾಕಂದ್ರೆ ಅದು ಈ ಚಿತ್ರದ ಗತ್ತು, ಗಮ್ಮತ್ತು. ಬರೋಬ್ಬರಿ ಮೂರು ವರ್ಷಗಳ ಚಿತ್ರತಂಡದ ಪರಿಶ್ರಮ, ನಿರ್ದೇಶಕ ಪ್ರಶಾಂತ್​ ನೀಲ್​ರ ಕನಸು ಇದೀಗ ನನಸಾಗಿ ಇಡೀ ಜಗತ್ತನ್ನೇ ಕಣ್ಣರಳಿಸಿ ಕೆಜಿಎಫ್​ 2 ಸಿನಿಮಾದತ್ತ ನೋಡುವಂತೆ ಮಾಡಿದೆ.

ನಿರೀಕ್ಷೆಗೂ ಮೀರಿದ ಸೂಪರ್​ ಸಕ್ಸಸ್​​ ಕಂಡಿರೋ ಕೆಜಿಎಫ್-​ 2 ಸಿನಿಮಾ ವಿಶ್ವಮಟ್ಟದ ಬಾಕ್ಸ್​​ ಆಫೀಸ್​​ ಹಿಸ್ಟ್ರಿಯಲ್ಲೇ ತನ್ನದೇ ಒಂದು ಹೊಸ ಅಧ್ಯಾಯವನ್ನು ಸೃಷ್ಟಿಸಿದೆ. ಮೊದಲ ದಿನವೇ ವರ್ಲ್ಡ್​​ವೈಡ್​​165 ಕೋಟಿಗೂ ಹೆಚ್ಚು ಹಣ ಗಳಿಸಿದ ಕೆಜಿಎಫ್​ -2 ಕ್ರಮವಾಗಿ ನಾಲ್ಕು ದಿನಗಳೂ 100 ಕೋಟಿಯನ್ನು ದಾಟಿ ಕಲೆಕ್ಷನ್​ ಮಾಡಿತ್ತು. ಸದ್ಯ ಮೊದಲ ವಾರದ ಅಂತ್ಯದೊತ್ತಿಗೆ ಪ್ರಶಾಂತ್​ ನೀಲ್ ನಿರ್ದೇಶನದ ಈ ಸಿನಿಮಾ ಸುಮಾರು 800 ಕೋಟಿಯನ್ನು ದಾಟಿ 1000 ಕೋಟಿ ಕ್ಲಬ್ ಸೇರಲು ಸಜ್ಜಾಗಿದೆ.

ಕಲೆಕ್ಷನ್​ ವೈಸ್​ ಮಾತ್ರವಲ್ಲದೆ ಕೆಜಿಎಫ್​ -2 ಇನ್ನೂ ಹಲವು ವಿಚಾರಗಳಲ್ಲಿ ದಾಖಲೆಗಳನ್ನು ಬರೆದಿದೆ. ಸಿನಿಮಾ ಬಿಡುಗಡೆಯಾದ ಫಸ್ಟ್​ ವೀಕ್​ನಲ್ಲಿ ಸೌತ್​ ಇಂಡಿಯಾದಲ್ಲಿ 1.5 ಕೋಟಿ ಮಂದಿ ಚಿತ್ರ ವೀಕ್ಷಣೆ ಮಾಡಿದ್ದಾರೆ. ರಾಜ್ಯಗಳ ಪ್ರಕಾರವಾಗಿ ನೋಡೋದಾದ್ರೆ, ಕತರ್ನಾಟಕದಲ್ಲಿ 40 ಲಕ್ಷ, ತಮಿಳುನಾಡಿನಲ್ಲಿ 30 ಲಕ್ಷ, ಕೇರಳದಲ್ಲಿ  25, ಆಂಧ್ರ ಹಾಗೂ ತೆಲಂಗಾಣದಲ್ಲಿ 50 ಲಕ್ಷ ಜನರು ಕೆಜಿಎಫ್​ -2 ಸಿನಿಮಾ ನೋಡಿದ್ದಾರೆ. ಇನ್ನು ಉತ್ತರ ಭಾರತದಲ್ಲಿ 1.7 ಕೋಟಿ ಮಂದಿ ಸಿನಿಮಾ ವೀಕ್ಷಿಸಿದ್ದಾರೆ.

ಅಂದಹಾಗೆ ಓವರ್​ಸೀಸ್​ ಬಾಕ್ಸ್​​ಆಫೀಸ್​ನಲ್ಲಿ ಕೆಜಿಎಫ್​ -2 ಸುಮಾರು 135 ಕೋಟಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇನ್ನು ರಂಜಾನ್ ಹಬ್ಬದ ವೇಳೆಗೆ ಸಿನಿಮಾದ ಕಲೆಕ್ಷನ್ ಮತ್ತಷ್ಟು ಹೆಚ್ಚಾಗೋ ಸಾಧ್ಯತೆ ಇದೆ. ಹಿಂದಿ ಬಾಕ್ಸ್​ ಆಫೀಸ್​ನಲ್ಲೂ ಕೆಜಿಎಫ್​ -2 ತನ್ನದೇ ಹವಾ ಸೃಷ್ಟಿಸಿದೆ. ಒಂದು ವಾರದಲ್ಲಿ  ಈ ಸಿನಿಮಾ ಹಿಂದಿಯಲ್ಲಿ ಮಾತ್ರವೇ 270 ಕೋಟಿಗೂ ಹೆಚ್ಚು ಹಣ ಗಳಿಸಿದೆ.

ಯುಎಇನಲ್ಲೂ ಸಿನಿಮಾ ಗಳಿಕೆ ಜೋರಾಗಿದೆ. ಅಮೆರಿಕಾ ಸೇರಿದಂತೆ ಇನ್ನೂ ಹಲವೆಡೆ ಈ ಚಿತ್ರದ ಗಳಿಕೆ ಚೆನ್ನಾಗಿದೆ. ಇನ್ನು ಮೊದಲ ವಾರದಲ್ಲಿ ವಿಶ್ವದಲ್ಲೇ ಕೆಜಿಎಫ್​- 2 ಸಿನಿಮಾ ಟಾಪ್​ -2 ಸ್ಥಾನದಲ್ಲಿದೆ. ಜೊತೆಗೆ ಮಲೇಷಿಯಾದ ಟಾಪ್​ ಸಿನಿಮಾ ಆಗಿದೆ. ತಮಿಳುನಾಡಿನಲ್ಲಿ ನೀಲ್​ ಚಿತ್ರಕ್ಕಾಗಿ 150 ಚಿತ್ರಮಂದಿರಗಳನ್ನು ಹೆಚ್ಚಿಸಲಾಗಿದೆ. ಅಂದಹಾಗೆ ಕೆಜಿಎಫ್​- 2 ಸಿನಿಮಾ ಬಿಡುಗಡೆ ಬಳಿಕ ಇತ್ತೀಚೆಗೆ ಮೊದಲ ಬಾರಿ ರಾಕಿಂಗ್ ಸ್ಟಾರ್​ ಯಶ್​ ಸೋಷಿಯಲ್​ ಮೀಡಿಯಾದಲ್ಲಿ ವೀಡಿಯೋವೊಂದನ್ನು ಶೇರ್ ಮಾಡಿ, ತಮ್ಮ ಸಿನಿ ಜರ್ನಿಯ ಬಗ್ಗೆ ಮಾತನಾಡಿ, ಚಿತ್ರದ ಯಶಸ್ಸಿಗೆ ಎಲ್ರಿಗೂ ಧನ್ಯವಾದ ತಿಳಿಸಿದ್ರು. ಅಭಿಮಾನಿಗಳ ಹೃದಯವೇ ನನ್ನ ಟೆರಿಟರಿ ಅಂದಿದ್ರು ರಾಕಿ ಭಾಯ್​.

ಕೆಜಿಎಫ್-​ 2 ಸಿನಿಮಾ ಈ ಮಟ್ಟಕ್ಕೆ ಸೂಪರ್​ ಯಶಸ್ಸು ಗಳಿಸಿರೋ ಹಿನ್ನಲೆ ಹೊಂಬಾಳೆ ಸಂಸ್ಥೆ ಐದೂ ಭಾಷೆಗಳಲ್ಲೂ ಸಿನಿಮಾ ಪ್ರೇಮಿಗಳಿಗೇ ಆಯಾ ಭಾಷೆಗಳಲ್ಲೇ ಥ್ಯಾಂಕ್ಸ್​ ಹೇಳಿದೆ. ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು ಎಂದು ತಿಳಿಸಿದೆ. ಇನ್ನು ಟಾಲಿವುಡ್​​ ಸ್ಟಾರ್​ ನಟ ಅಲ್ಲು ಅರ್ಜುನ್ ಸೇರಿದಂತೆ, ಹಲವು ಖ್ಯಾತ ಕಲಾವಿದರು ಕೆಜಿಎಫ್-​ 2 ಯಶಸ್ಸಿಗೆ ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯಗಳನ್ನು ತಿಳಿಸಿದ್ದಾರೆ.

ಒಟ್ಟಾರೆ ಕೆಜಿಎಫ್​- 2 ಸಿನಿಮಾ ಹೀಗೆ ಮೊದಲ ಒಂದು ವಾರದಲ್ಲೇ ಈ ಪಾಟಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದು ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಇಡೀ ಪ್ರಪಂಚವೇ ಸದ್ಯ ಸಲಾಂ ರಾಕಿ ಭಾಯ್, ಸಲಾಂ ಕೆಜಿಎಫ್​- 2 ಅಂತ ಜೈ ಕಾರ ಹಾಕ್ತಿದೆ.

ಚಂದನ.ಎಸ್​, ಎಂಟರ್​​ಟೈನ್​ಮೆಂಟ್​ ಬ್ಯೂರೋ, ಪವರ್​ ಟಿವಿ

- Advertisment -

Most Popular

Recent Comments