Monday, May 23, 2022
Powertv Logo
Homeಸಿನಿಮಾಮಾಕಾಳಮ್ಮನ ಮಡಿಲಲ್ಲಿ ಕಲ್ಟ್ ಮೂವಿ ‘ಭೀಮ’ ಶುರು..!

ಮಾಕಾಳಮ್ಮನ ಮಡಿಲಲ್ಲಿ ಕಲ್ಟ್ ಮೂವಿ ‘ಭೀಮ’ ಶುರು..!

ಸಲಗದಿಂದ ಕ್ಯಾಪ್ಟನ್ ಆಗಿ ಹೊಸ ಸಾಮ್ರಾಜ್ಯ ಕಟ್ಟಿದ ದುನಿಯಾ ವಿಜಯ್, ದೊಡ್ಡ ದೊಡ್ಡ ಆಫರ್​ಗಳನ್ನ ರಿಜೆಕ್ಟ್ ಮಾಡಿ, ಮತ್ತೆ ಡೈರೆಕ್ಷನ್​ಗೆ ಇಳಿದಿದ್ದಾರೆ. ಮಾಕಾಳಮ್ಮನ ಮಡಿಲಿಂದ ಮತ್ತೊಂದು ಕಲ್ಟ್ ಮೂವಿಗೆ ಫ್ರೇಮ್ ಇಟ್ಟಿದ್ದಾರೆ.

ಆನೆಯಷ್ಟೇ ಭಾರವಾದ ಹೃದಯದಿಂದ ತನ್ನ ಮನದಲ್ಲಿದ್ದ ನೋವನ್ನ ತೆರೆಮೇಲೆ ತೋರಿಸೋ ಪ್ರಯತ್ನ ಮಾಡಿದ್ರು ದುನಿಯಾ ವಿಜಯ್. ಅದೇ ಸಲಗ. ಇದೀಗ ಮತ್ತೊಮ್ಮೆ ಅಂಥದ್ದೇ ಕಲ್ಟ್ ಕ್ಲಾಸಿಕ್ ಮೂವಿಯನ್ನು ತೆರೆಗೆ ತರಲು ಮತ್ತೊಮ್ಮೆ ಅಂತಹದ್ದೇ ಗಟ್ಟಿ ಟೈಟಲ್​ನೊಂದಿಗೆ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದಾರೆ ವಿಜಯ್ ಕುಮಾರ್.

ಭೀಮ.. ಎಷ್ಟೇ ನೋವಾದ್ರೂ ಹೊರಗಿನ ಪ್ರಪಂಚಕ್ಕೆ ನಗು ನಗುತ್ತಲೇ ಕಾಣೋ ಮೃದು ಸ್ವಭಾವಿ. ಹಾಗಂತ ತನ್ನನ್ನ ಕೆಣಕಿದವ್ರನ್ನ ಬಿಡೋ ಜಾಯಮಾನ ಇವ್ರದ್ದಲ್ಲ. ಇದೆಲ್ಲಾ ಮಹಾಭಾರತದ ಭೀಮನ ಚಹರೆಗಳೇ ಆದ್ರೂ ಸಹ, ಸದ್ಯ ದುನಿಯಾ ವಿಜಯ್ ಌಕ್ಷನ್ ಕಟ್ ಹೇಳ್ತಿರೋ ಅವ್ರ 28ನೇ ಸಿನಿಮಾದ ಭೀಮನ ಪಾತ್ರವೂ ಅದನ್ನೇ ಹೋಲಲಿದೆ.

ಓಂ, ಟಗರು, ಸಲಗದಂತಹ ಕಲ್ಟ್ ಮೂವಿಯನ್ನೇ ಈ ಬಾರಿಯೂ ಮಾಡೋಕೆ ಮುಂದಾಗಿದ್ದಾರೆ ವಿಜಿ. ಪಕ್ಕದ ಟಾಲಿವುಡ್​ನಲ್ಲಿ ಬಾಲಯ್ಯ, ರವಿತೇಜಾ ಅಂತಹ ಸ್ಟಾರ್ಸ್​ ಜೊತೆ ನಟಿಸೋ ಅವಕಾಶ ಸಿಕ್ರೂ, ತನ್ನ ತನಕ್ಕಾಗಿ ಮತ್ತೆ ಇಲ್ಲೇ ಌಕ್ಷನ್ ಕಟ್ ಹೇಳ್ತಿರೋ ವಿಜಯ್ ಮೈಂಡ್​ಸೆಟ್​ಗೆ ಸಲಾಂ ಹೇಳಲೇಬೇಕು.

ಬಂಡಿ ಮಾಕಾಳಮ್ಮನ ಮಡಿಲಿಂದಲೇ ಇಂದು ಭೀಮ ಚಿತ್ರದ ಮುಹೂರ್ತ ಜೊತೆ ಸಿನಿಮಾ ಶೂಟಿಂಗ್​ಗೆ ಚಾಲನೆ ನೀಡಿದ್ರು ವಿಜಯ್. ಒನ್ಸ್ ಅಗೈನ್ ಅದೇ ಹೊಸಬರ ತಮಡದೊಂದಿಗೆ ವಿಜಯದತ್ತ ಸಾಗಿದ್ದಾರೆ ಬ್ಲ್ಯಾಕ್ ಕೋಬ್ರಾ. ಸ್ಟಾರ್ ಸಂಭಾಷಣೆಕಾರ ಮಾಸ್ತಿ, ಸಿನಿಮಾಟೋಗ್ರಫರ್ ಶಿವಸೇನ, ಸಂಗೀತ ಸಂಯೋಜಕ ಚರಣ್ ರಾಜ್ ಈ ಬಾರಿಯೂ ಜೊತೆಗಿದ್ದು, ಬ್ಲ್ಯಾಕ್ ಡ್ರ್ಯಾಗನ್ ಮಂಜು ಅನ್ನೋ ದೈತ್ಯ ಪ್ರತಿಭೆಯನ್ನ ಪರಿಚಯಿಸ್ತಿದ್ದಾರೆ ವಿಜಯ್.

ವಿಜಯ್​ರ ಈ ಸಾಹಸಕ್ಕೆ ಈ ಬಾರಿ ಬೈರಾಗಿ ನಿರ್ಮಾಪಕ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಬಂಡವಾಳ ಹಾಕಿ ಕೈ ಜೋಡಿಸಿದ್ದಾರೆ. ಇನ್ನೂ ಪತ್ನಿ ಕೀರ್ತಿ, ಗೆಳೆಯ ಡಾಲಿ ಧನಂಜಯ, ಹಿತೈಷಿ ಕೆಪಿ ಶ್ರೀಕಾಂತ್- ನಾಗಿ, ಶ್ರೀನಗರ ಕಿಟ್ಟಿ ಸೇರಿದಂತೆ ಸಾಕಷ್ಟು ಮಂದಿ ವಿಜಯ್​ ಜೊತೆಗಿದ್ದು, ಮುಹೂರ್ತ ಕಾರ್ಯಕ್ರಮಕ್ಕೆ ಮೆರುಗು ತಂದರು.

ಅಂದಹಾಗೆ ಭೀಮ ಅನ್ನೋ ಈ ಸಿನಿಮಾ ಅಂಡರ್​​ವರ್ಲ್ಡ್​ ಕಥೆಯನ್ನೇ ಹೊಂದಿರಲಿದ್ದು, ಬೇರೆಯ ವಿಷಯಗಳನ್ನು ಕೆದಕಲಿದೆ. ಈ ಬಾರಿ ವಿಜಯ್ ಏನನ್ನು ಹೇಳಲು ಹೊರಟಿದ್ದಾರೆ ಅನ್ನೋದೇ ಸರ್​ಪ್ರೈಸ್. ಇನ್ನು ಬ್ಲ್ಯಾಕ್ ಡ್ರ್ಯಾಗನ್ ಪಾತ್ರದಾರಿ ಮಂಜು ನಿಜಕ್ಕೂ ಅಜಾನುಬಾಹು. ನೋಡೋಕೆ ಬಾಹುಬಲಿಯಂತಹ ಮೈಕಟ್ಟು ಇರೋ ಈತ ನ್ಯಾಷನಲ್ ಲೆವೆಲ್ ಬಾಡಿ ಬಿಲ್ಡರ್. ಇವ್ರು ನಮ್ಮ ಫಿಲ್ಮಿ ಪವರ್ ಟೀಂ ಜೊತೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

ಒಟ್ಟಾರೆ ಕೋಟಿ ಕೋಟಿ ಸಂಭಾವನೆ ಪಡೆಯೋ ಮಟ್ಟಕ್ಕೆ ಬೆಳೆದಿರೋ ವಿಜಯ್, ಹಣಕ್ಕಿಂತ ಕಲೆಗೆ ಹೆಚ್ಚು ಗೌರವ ನೀಡ್ತಿರೋ ಪರಿ ನಿಜಕ್ಕೂ ಗ್ರೇಟ್. ಸಲಗ ಚಿತ್ರದಂತೆ ಭೀಮನಿಗೂ ಮಾಕಾಳಮ್ಮನ ಜೊತೆ ಕನ್ನಡಿಗರ ಪ್ರೀತಿ ಪ್ರೋತ್ಸಾಹ ಸಿಗಲಿ ಅನ್ನೋದು ನಮ್ಮ ಅಭಿಪ್ರಾಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

- Advertisment -

Most Popular

Recent Comments