Sunday, June 26, 2022
Powertv Logo
Homeಈ ಕ್ಷಣದಿಗಂತ್​ಗೆ ಬ್ಯಾಡ್​​ ಟೈಂ.. ಅಂದು ಕಣ್ಣು ಇಂದು ಬೆನ್ನು

ದಿಗಂತ್​ಗೆ ಬ್ಯಾಡ್​​ ಟೈಂ.. ಅಂದು ಕಣ್ಣು ಇಂದು ಬೆನ್ನು

ಕನ್ನಡ ಚಿತ್ರರಂಗವನ್ನು ವಿಧಿ ಇನ್ನಿಲ್ಲದೆ ಕಾಡಲು ಆರಂಭಿಸಿದೆ. ಸಾಲು ಸಾಲು ಸಾವು ನೋವುಗಳಿಂದ ಈಗಷ್ಟೇ ಚೇತರಿಸಿಕೊಳ್ತಿರೋ ಇಂಡಸ್ಟ್ರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ. ದೂದ್​ಪೇಡಾ ದಿಗಂತ್ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಒಮ್ಮೆ ಕಣ್ಣು ಎಡವಟ್ ಮಾಡಿಕೊಂಡಿದ್ದ ದಿಗ್ಗಿ, ಇದೀಗ ಬೆನ್ನು ಪೆಟ್ಟು ಮಾಡಿಕೊಂಡಿದ್ದಾರೆ. ಇಷ್ಟಕ್ಕೂ ಆಗಿದ್ದೇನು..?

ದಿಗಂತ್​ಗೆ ಬ್ಯಾಡ್​​ ಟೈಂ.. ಅಂದು ಕಣ್ಣು ಇಂದು ಬೆನ್ನು..!

ಹೇಗಿದ್ದಾರೆ ದಿಗ್ಗಿ..? ಸ್ಯಾಂಡಲ್​ವುಡ್ ಹೇಳೋದೇನು..?

ಶಸ್ತ್ರ ಚಿಕಿತ್ಸೆ ಸಕ್ಸಸ್.. ಮೂರು ದಿನದಲ್ಲಿ ದಿಗ್ಗಿ ಆಲ್​ರೈಟ್

ಬೆಡ್ ಮೇಲಿಂದಲೇ ಥಂಬ್ಸ್ ಅಪ್ ಮಾಡಿದ ದಿಗಂತ್

ಭಾರತೀಯ ಚಿತ್ರರಂಗದ ಸ್ಫುರದ್ರೂಪಿ ನಟರಲ್ಲಿ ನಮ್ಮ ಅಚ್ಚ ಕನ್ನಡದ ಹಾಲ್ಗೆನ್ನೆ ಹುಡ್ಗ ದಿಗಂತ್ ಕೂಡ ಒಬ್ರು. ನೋಡೋಕೆ ಬಾಲಿವುಡ್ ಸ್ಟಾರ್​ಗಳ ಸ್ಕಿನ್ ಟೋನ್, ಮೈಕಟ್ಟು, ನಟನಾ ತಾಕತ್ತು ಇದ್ದ ಓನ್ಲಿ ಕನ್ನಡ ಹೀರೋ ಅಂದ್ರೂ ತಪ್ಪಾಗಲ್ಲ. ಕಲಾವಿದರು ಅಂದ್ಮೇಲೆ ಅಸಾಧ್ಯವಾದದ್ದನ್ನು ಸಹ ಸಾಧ್ಯವಾಗಿಸಬೇಕಾಗುತ್ತೆ. ಕೆಲವೊಮ್ಮೆ ಆ ನಿಟ್ಟಿನಲ್ಲಿ ಅಚಾತುರ್ಯಗಳು ನಡೆದು ಹೋಗುತ್ತವೆ.

2015ರಲ್ಲಿ ವೆಡ್ಡಿಂಗ್ ಪುಲಾವ್ ಅನ್ನೋ ಹಿಂದಿ ಚಿತ್ರದ ಶೂಟಿಂಗ್ ವೇಳೆ ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದ ದಿಗಂತ್, ಇಂದಿಗೂ ಅವ್ರ ದೇಹದಲ್ಲಿ ಅದೇ ದೊಡ್ಡ ವೀಕ್ನೆಸ್ ಆಗಿತ್ತು. ಎಲ್ಲೇ ಓಡಾಡಿದ್ರೂ ಸಹ ಛಷ್ಮಾ ಹಾಕಿಕೊಂಡೇ ಓಡಾಡೋ ಮೂಲಕ ಅದನ್ನ ಕವರ್ ಮಾಡಿಕೊಳ್ತಿದ್ರು. ಅರೇ ಇಂತಹ ಹ್ಯಾಂಡ್ಸಮ್ ಹೀರೋಗೆ ಕಣ್ಣು ಎಡವಟ್ ಆಗೋಯ್ತಾ ಅಂತ ಅದೆಷ್ಟೋ ಮಂದಿ ದೇವರಿಗೆ ಹಿಡಿ ಶಾಪ ಹಾಕಿದ್ರು.

ಇದೀಗ ಪತ್ನಿ ಐಂದ್ರಿತಾ ರೇ ಜೊತೆ ಗೋವಾಗೆ ತೆರಳಿದ್ದ ದಿಗಂತ್​, ತಮ್ಮ ನೆಚ್ಚಿನ ಸೋಮರ್ ಸಾಲ್ಟ್ ಬ್ಯಾಕ್ ಸ್ಲಿಪ್ ಮಾಡೋವಾಗ ಸಮುದ್ರ ತಟದಲ್ಲಿ ಬ್ಯಾಲೆನ್ಸ್ ತಪ್ಪಿ, ಬೆನ್ನುಮೂಳೆ ಪೆಟ್ಟು ಮಾಡಿಕೊಂಡಿದ್ದಾರೆ. ಸೋಮವಾರ ಘಟನೆ ನಡೆದ ತಕ್ಷಣ ಗೋವಾದಲ್ಲೇ ಇದ್ದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಆದ್ರೆ ಹೆಚ್ಚುವತರಿ ಚಿಕಿತ್ಸೆ ಹಾಗೂ ಸರ್ಜರಿಗಾಗಿ ಅವ್ರನ್ನ ಮಂಗಳವಾರ ಸಂಜೆ ಏರ್ ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಯ್ತು.

ಇನ್ನು ದಿಗಂತ್​ಗೆ ಹೀಗಾಯ್ತು ಅನ್ನೋ ಸುದ್ದಿ ಇಂಡಸ್ಟ್ರಿಗೆಲ್ಲಾ ಹಬ್ಬುತ್ತಿದ್ದಂತೆ ಚಿತ್ರರಂಗದ ಆಪ್ತ ಗೆಳೆಯರೆಲ್ಲಾ ಆಸ್ಪತ್ರೆಗೆ ಧಾವಿಸಿ, ಆರೋಗ್ಯ ವಿಚಾರಿಸಿದ್ರು. ದಿಗಂತ್ ಪೋಷಕರು, ಆತ್ಮೀಯ ಗೆಳೆಯ ಕಿರಣ್ ಶ್ರೀನಿವಾಸ್ ಸೇರಿದಂತೆ ಬಹುತೇಕ ಮಂದಿ ಅಲ್ಲೇ ಬೀಡುಬಿಟ್ಟರು.

ದಿಗಂತ್ ಬೆನ್ನು ಮೂಳೆ ಶಸ್ತ್ರ ಚಿಕಿತ್ಸೆಗೆ ವೈದ್ಯರ ತಂಡ ಮೊದಲೇ ಸಿದ್ದವಾಗಿತ್ತು. ಅದ್ರಂತೆ ಬೆಂಗಳೂರಿಗೆ ದಿಗ್ಗಿಯನ್ನ ಶಿಫ್ಟ್ ಮಾಡ್ತಿದ್ದಂತೆ ಆಪರೇಷನ್ ಮಾಡಲಾಗಿದೆ. ಸದ್ಯ ದಿಗಂತ್ ರೆಸ್ಟ್ ಮಾಡ್ತಿದ್ದು, ತನಗೇನೂ ಆಗಿಲ್ಲ, ಆರಾಮಾಗಿದ್ದೇನೆ ಅನ್ನೋದನ್ನ ಬೆಡ್ ಮೇಲಿಂದಲೇ ಥಂಬ್ಸ್ ಅಪ್ ಸಿಂಬಲ್ ಮುಖೇನ ಶುಭಸುದ್ದಿ ನೀಡಿದ್ದಾರೆ. ವೈದ್ಯರ ಪ್ರಕಾರ ಇನ್ನು ಮೂರು ದಿನದಲ್ಲಿ ಆರೋಗ್ಯ ಸುಧಾರಿಸಲಿದ್ದು, ಡಿಸ್ಚಾರ್ಜ್​ ಕೂಡ ಮಾಡಲಿದ್ದಾರಂತೆ. ಸೋ ದಿಗ್ಗಿ ಆಲ್​ರೈಟ್, ನಥಿಂಗ್ ಟು ವರಿ.

ನಟ ದಿಗಂತ್​ಗೆ ಹೊಸತೇನಲ್ಲ ಸೋಮರ್ ಸಾಲ್ಟ್..!

ಇನ್ಸ್​ಟಾ ತುಂಬಾ ಬರೀ ಬ್ಯಾಕ್ ಸ್ಲಿಪ್ ವಿಡಿಯೋಸ್

ದಿಗಂತ್ ಬ್ಯಾಗ್ರೌಂಡ್ ಗೊತ್ತಾ..? ಪಕ್ಕಾ ಸಾಗರದ ಹುಡ್ಗ

ಗಾಳಿಪಟದಿಂದ ದೂದ್​ಪೇಡಾ ಸ್ಟಾರ್​ಡಮ್ ಆರಂಭ..!

ಈ ಡೇಂಜರ್ ಸ್ಟಂಟ್​ನ ದಿಗಂತ್ ಯಾಕೆ ಮಾಡೋಕೆ ಹೋದ್ರು ಅಂತ ಯಾರೂ ಗೊಣಗಿಕೊಳ್ಳೋ ಹಾಗಿಲ್ಲ. ಯಾಕಂದ್ರೆ ಪಕ್ಕಾ ಟ್ರೈನರ್ ಜೊತೆ ಇವ್ರು ಟ್ರೈನಿಂಗ್ ಪಡೀತಿದ್ರು. ಆಗಾಗ ಪ್ರಾಕ್ಟೀಸ್ ಮಾಡೋ ವಿಡಿಯೋಗಳನ್ನ ಇನ್ಸ್​ಟಾದಲ್ಲೂ ಹಾಕ್ತಿದ್ರು. ಒಮ್ಮೆ ದೂದ್​ಪೇಡಾ ದಿಗಂತ್ ಸೋಶಿಯಲ್ ಮೀಡಿಯಾ ಸೈಟ್ ಓಪನ್ ಮಾಡಿದ್ರೆ ಹತ್ತಾರು ಸೋಮರ್ ಸಾಲ್ಟ್ ವಿಡಿಯೋಸ್ ಕಾಣಸಿಗಲಿವೆ.

ಆದ್ರೆ ಇದನ್ನ ಮಾಡುವಾಗ ಬಹಳ ಕೇರ್​ಫುಲ್ ಆಗಿ ಮಾಡ್ಬೇಕು ಅನ್ನೋದು ಮಾತ್ರ ಕಟುಸತ್ಯ. ಕೊಂಚ ಮಿಸ್ ಆದ್ರೂ ಕುತ್ತಿಗೆ ಮುರಿಯಲಿದೆ. ಬೆನ್ನು ಮೂಳೆ ಪೆಟ್ಟಾಗಲಿದೆ. ಇದು ಮಾರಣಾಂತಿಕವೂ ಹೌದು. ಹಾಗಾಗಿ ತುಂಬಾ ಜಾಗರೂಕತೆಯಿಂದ ಮಾಡಿದ್ರೆ ಒಳ್ಳೆಯದು. ತುಮಕೂರಿನ ಯುವಕನೊಬ್ಬ ಬ್ಯಾಖ್ ಸ್ಲಿಪ್ ಮಾಡಲು ಹೋಗಿ ಜೀವ ಕಳೆದುಕೊಂಡ ನಿದರ್ಶನ ಕಣ್ಮುಂದೆಯೇ ಇದೆ.

2006ರಲ್ಲಿ ಮಿಸ್ ಕ್ಯಾಲಿಫೋರ್ನಿಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡೋಕೂ ಮುನ್ನ ದಿಗಂತ್ ಮಾಡೆಲ್ ಆಗಿದ್ರು. ಜೈನ್ ಕಾಲೇಜ್​ನಲ್ಲಿ ಪದವಿ ಪಡೆದ ಈತನ ವಿಧ್ಯಾಭ್ಯಾಸ ತೀರ್ಥಹಳ್ಳಿಯಲ್ಲಾಯ್ತು. ಸಾಗರ ಮೂಲದ ಈ ಪೋರ ಕೃಷ್ಣಮೂರ್ತಿ ಅನ್ನೋ ಪ್ರೊಫೆಸರ್ ಮಗ. ನೋಡೋಕೆ ಮಿಲ್ಕಿ ಬಾಯ್​ನಂತಿದ್ದ ಈತ ಬಹುಬೇಗ ಸ್ಟಾರ್ ಆಗಿ ಮಿಂಚಿದ್ರು.

ಮನಸಾರೆ, ಪಾರಿಜಾತ, ಪಂಚರಂಗಿ, ಲೈಫು ಇಷ್ಟೇನೇ, ಗಾಳಿಪಟ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳಿಂದ ಎಲ್ಲರ ಅಚ್ಚುಮೆಚ್ಚಿನ ನಟ ಆದ್ರು. ಅಲ್ಲದೆ, ಜೊತೆಯಲ್ಲೇ ಕೆಲಸ ಮಾಡಿದ ಐಂದ್ರಿತಾ ರೇಗೂ ಇಷ್ಟವಾದ್ರು. ಇವ್ರ ಸ್ನೇಹ, ಪ್ರೀತಿಯಾಗಿ, ಕೊನೆಗೆ ಅದು ಸಪ್ತಪದಿವರೆಗೂ ಕರೆತಂದಿತ್ತು. 2018ರಲ್ಲಿ ಈ ತಾರಾ ಜೋಡಿ ಹೊಸಬಾಳಿಗೆ ಕಾಲಿಡೋ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಕಳೆದ ವರ್ಷ ಅಪ್ಪು ಜೊತೆಗಿನ ಯುವರತ್ನ, ಹುಟ್ಟು ಹಬ್ಬದ ಶುಭಾಶಯಗಳು ಅನ್ನೋ ಸಿನಿಮಾಗಳನ್ನ ಮಾಡಿದ್ರು. ಸದ್ಯ ಈ ವರ್ಷ ಗಾಳಿಪಟ 2, ಮಾರಿ ಗೋಲ್ಡ್, ಎಡಗೈ ಅಪಘಾತಕ್ಕೆ ಕಾರಣ, ತಿಮ್ಮಯ್ಯ ಅಂಡ್ ತಿಮ್ಮಯ್ಯ ಅನ್ನೋ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಸದಾ ಸಿನಿಮಾ ಬಗ್ಗೆಯೇ ಯೋಚಿಸೋ ದಿಗಂತ್, ಚಿತ್ರರಂಗದಲ್ಲಿ ಒಳ್ಳೆಯ ಗೆಳೆಯರನ್ನೂ ಸಂಪಾದಿಸಿದ್ದಾರೆ. ಇವ್ರು ಆದಷ್ಟು ಬೇಗ ಚೇತರಿಸಿಕೊಳ್ಳಲಿ, ಮತ್ತೆ ಬಣ್ಣ ಹಚ್ಚಿ ಪ್ರೇಕ್ಷಕರನ್ನ ರಂಜಿಸಲಿ ಅನ್ನೋದೇ ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

- Advertisment -

Most Popular

Recent Comments