ಸ್ಮಾರ್ಟ್ಫೋನ್ ಜಗತ್ತಲ್ಲಿ ತನ್ನದೇ ಮಾರುಕಟ್ಟೆ ಸೃಷ್ಟಿಸಿಕೊಂಡಿರೋ ಪ್ರತಿಷ್ಠಿತ ಸ್ಯಾಮ್ಸಂಗ್ ಸಂಸ್ಥೆ ಇದೇ ತಿಂಗಳಲ್ಲಿ (ಜುಲೈ) ಹೊಸ ಸ್ಮಾರ್ಟ್ ಫೋನನ್ನು ಬಿಡುಗಡೆ ಮಾಡಲಿದೆ.
ಕೊರಿಯಾ ಮೂಲದ ಸಂಸ್ಥೆಯಾಗಿರೋ ಸ್ಯಾಮ್ಸಂಗ್ ಗ್ಯಾಲಕ್ಸಿ ಸ್ಮಾರ್ಟ್ಫೋನ್ ಸರಣಿಯಲ್ಲಿ M31s ಪರಿಚಯಿಸ್ತಿದೆ. ಈ ತಿಂಗಳ ಕೊನೆಯಲ್ಲಿ ಈ ಹೊಸ ಫೋನ್ ಭಾರತದ ಮಾರುಕಟ್ಟೆಗೆ ಲಗ್ಗೆ ಇಡುವ ನಿರೀಕ್ಷೆಯಿದೆ.
ವಿಶೇಷತೆ ? : ಬರಲಿರುವ ಸ್ಯಾಮ್ಸಂಗ್ M31s 64 ಜಿಬಿ ಸ್ಟೋರೇಜ್, 64+8+5+5ಎಂಪಿ ಕ್ಯಾಮರಾ (ಒಟ್ಟು 4 ಕ್ಯಾಮರಾ), 6000mAh ಬ್ಯಾಟರಿ, 6ಜಿಬಿ RAM, 6.4 ಡಿಸ್ಪ್ಲೆಯನ್ನು ಹೊಂದಿದ್ದು, ಬೆಲೆ 20,000 ರೂ ಗಿಂತ ಒಳಗಿರಲಿದೆ ಅಂತ ಹೇಳಲಾಗಿದೆ.