ಆನೆ ನಡೆದಿದ್ದೇ ದಾರಿ ಅಂತ ಡೈಲಾಗ್ ಹೊಡೆದ್ರು ಸಿದ್ದರಾಮಯ್ಯ..!

0
249

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಆನೆ ನಡೆದಿದ್ದೇ ದಾರಿ’ ಅಂತ ಸಿನಿಮಾ ಡೈಲಾಗ್ ಹೊಡೆದಿದ್ದಾರೆ. ಹಾಗಂತ ಅವರು ರಾಜಕಾರಣದಲ್ಲಿ ಯಾರನ್ನೋ ಟಾರ್ಗೆಟ್ ಮಾಡಿ ಆಡಿದ ಡೈಲಾಗ್ ಇದಲ್ಲ. ದುನಿಯಾ ವಿಜಯ್ ನಿರ್ದೇಶಿಸಿ, ನಟಿಸುತ್ತಿರುವ ‘ಸಲಗ’ ಸಿನಿಮಾದ ಮುಹೂರ್ತದ ವೇಳೆ ಮಾತನಾಡುವಾಗ ಹೊಡೆದ ಡೈಲಾಗ್ ಇದು.
ಬಂಡೆ ಮಹಾಕಾಳಮ್ಮ ಸನ್ನಿಧಿಯಲ್ಲಿ ‘ಸಲಗ’ ಸಿನಿಮಾದ ಮುಹೂರ್ತ ನೆರವೇರಿತು. ಕ್ಲಾಪ್ ಮಾಡಿದ ಸಿದ್ದರಾಮಯ್ಯ, ಸಲಗ ಸ್ಟೋರಿ ಏನು ಅಂತ ನಂಗೂ ಹೇಳಿಲ್ಲ. ಬಹುಶಃ ಪರದೆ ಮೇಲೆ ನೋಡಲಿ ಅನ್ನೋ ಉದ್ದೇಶ ಅವರದ್ದು. ಒಂಟಿ ಸಲಗಾನೋ ಅಥವಾ ಗುಂಪು ಸಲಗಗಳಾ ಅಂತ ಗೊತ್ತಿಲ್ಲ ಅಂದು ವಿಜಯ್ ಮುಖ ನೋಡಿದ್ರು. ಆಗ ವಿಜಯ್ ಒಂಟಿ ಸಲಗ ಅಂತಬ ಹೇಳಿದ್ರು. ಮಾತು ಮುಂದುವರೆಸಿದ ಸಿದ್ದರಾಮಯ್ಯ ಅವರು, ” ಒಂಟಿ ಸಲಗ ಆದ್ರೆ ಡೇಂಜರ್. ಗುಂಪು ಸಲಗಗಳು ಬರುವಾಗ ನಾವು ಎದುರಾದ್ರೆ ಅವು ಅವುಗಳ ಪಾಡಿಗೆ ಸುಮ್ನೆ ಹೋಗ್ತಾವೆ. ಆದ್ರೆ, ಒಂಟಿ ಸಲಗಕ್ಕೆ ಭಯ, ಆತಂಕ ಜಾಸ್ತಿ. ಹೀಗಾಗಿ ಅವು ತಮ್ಮ ರಕ್ಷಣೆಗೆ ನಮ್ ಮೇಲೆ ಅಟ್ಯಾಕ್ ಮಾಡುತ್ತವೆ’ ಅಂದ್ರು. ಒಂಟಿ ಸಲಗ ಅಂತಿದ್ದೀರಾ? ಆ ಒಂಟಿ ಸಲಗ ಪರೋಪಕಾರಿ ಆಗಿರಲಿ ಅನ್ನೋದು ನನ್ನ ಉದ್ದೇಶ ಅಂತ ಹೇಳಿದ್ರು.
ನಾನು ವಿದ್ಯಾರ್ಥಿ ದೆಸೆಯಲ್ಲಿ ದಿನಕ್ಕೊಂದು ಸಿನಿಮಾ ನೋಡ್ತಾ ಇದ್ದೆ. ರಾಜಕೀಯಕ್ಕೆ ಬಂದ ಮೇಲೆ ಮೂರು ವರ್ಷಕ್ಕೋ, ಐದು ವರ್ಷಕ್ಕೋ ಒಂದು ಸಿನಿಮಾ ನೋಡ್ತೀನಿ. ಹಿಂದೆ ಒಳ್ಳೆಯ ಸಂದೇಶಗಳು, ನೀತಿ ಪಾಠ ಸಾರೋ ಸಿನಿಮಾಗಳು ಬರ್ತಾ ಇದ್ವು. ಈಗ ಮಸಾಲೆ ಸಿನಿಮಾಗಳು ಹೆಚ್ಚಾಗಿವೆ. ಒಳ್ಳೆಯ ಸಿನಿಮಾಗಳನ್ನು ಮಾಡಿದ್ರೆ ಖಂಡಿತಾ ಯಶಸ್ಸು ಸಿಗುತ್ತೆ ಅಂತ ಕಿವಿಮಾತು ಹೇಳಿದ್ರು.
ಪ್ರೊಡ್ಯೂಸರ್ ಶ್ರೀಕಾಂತ್ ಅವರ ಮೈಲಾರಿ ಮತ್ತು ಟಗರು ಸಿನಿಮಾಕ್ಕೆ ನಾನೇ ಕ್ಲಾಪ್ ಮಾಡಿದ್ದೆ, ಈಗ ‘ಸಲಗ’ಕ್ಕೆ ಕ್ಲಾಪ್ ಮಾಡೋಕೆ ಬಂದಿದ್ದೇನೆ. ಅವರಿಗೆ ಒಳ್ಳೆಯದಾಗ್ಲಿ, ವಿಜಯ್ ಒಬ್ಬ ಒಳ್ಳೆಯ ನಟ. ಈಗ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಇದರಲ್ಲೂ ಯಶಸ್ಸು ಸಿಗಲಿ ಅಂತ ಶುಭಹಾರೈಸಿದ್ರು.

LEAVE A REPLY

Please enter your comment!
Please enter your name here