ಬೆಂಗಳೂರು : ಸ್ಯಾಂಡಲ್ವುಡ್ ‘ಕರಿಚಿರತೆ’ ಖ್ಯಾತಿಯ ನಟ ದುನಿಯಾ ವಿಜಯ್ 46ನೇ ಜನ್ಮದಿನದ ಖುಷಿಯಲ್ಲಿದ್ದಾರೆ. ಈ ಖುಷಿ ನಡುವೆ ಮೊದಲ ಬಾರಿಗೆ ಆ್ಯಕ್ಷನ್ಕಟ್ ಹೇಳಿ, ನಟಿಸುತ್ತಿರೋ ‘ಸಲಗ’ ಸಿನಿಮಾಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್ ನೀಡಿದ್ದಾರೆ.
ಹೌದು, ವಿಜಿ ಬರ್ತ್ಡೇ ಪ್ರಯುಕ್ತ ಅವರು ನಿರ್ದೇಶನದ ಚೊಚ್ಚಲ ಚಿತ್ರ ‘ಸಲಗ’ ಟೀಸರ್ ರಿಲೀಸ್ ಆಗಿದ್ದು, ಸಖತ್ ಸಿನಿಮಾ ನಿರೀಕ್ಷೆಯನ್ನು ಹುಟ್ಟುಹಾಕಿದೆ. ರಿಯಲ್ ಸ್ಟಾರ್ ಉಪೇಂದ್ರ ಟೀಸರ್ ರಿಲೀಸ್ ಮಾಡೋ ಮೂಲಕ ಸಾಥ್ ನೀಡಿದ್ದಾರೆ. ಇನ್ನು ಚಿತ್ರದಲ್ಲಿ ಡಾಲಿ ಧನಂಜಯ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.’ಕೆಮಿಸ್ಟ್ರಿ ಆಫ್ ಕರಿಯಪ್ಪ’ ಖ್ಯಾತಿಯ ಸಂಜನಾ ಆನಂದ್ ‘ಸಲಗ’ ವಿಜಯ್ಗೆ ನಾಯಕಿಯಾಗಿ ನಟಿಸಿದ್ದಾರೆ.
ಸ್ಯಾಂಡಲ್ವುಡ್ ‘ಸಲಗ’ಗೆ 46ನೇ ಹುಟ್ಟುಹಬ್ಬದ ಸಂಭ್ರಮ ; ಜನ್ಮದಿನದ ಜೋಶ್ನಲ್ಲಿ ವಿಜಿ ವಿವಾದ!