Sunday, May 29, 2022
Powertv Logo
Homeರಾಜ್ಯಧರ್ಮಕ್ಕಾಗಿ ನನ್ನ ಬಲಿದಾನವಾದ್ರು ಪರವಾಗಿಲ್ಲ: ಮುನೇಗೌಡ

ಧರ್ಮಕ್ಕಾಗಿ ನನ್ನ ಬಲಿದಾನವಾದ್ರು ಪರವಾಗಿಲ್ಲ: ಮುನೇಗೌಡ

ಬೆಂಗಳೂರು : ಧರ್ಮಕ್ಕಾಗಿ ನನ್ನ ಬಲಿದಾನವಾದರೂ ಪರವಾಗಿಲ್ಲ. ಸಂತೋಷವಾಗಿ ಇರುತ್ತೀನಿ ಎಂದು ಹಿಂದುವೀ ಮೀಟ್ ಮಾರ್ಟ್ ಮಾಲೀಕ ಮುನೇಗೌಡ ಹೇಳಿದರು.

ಅಗತ್ಯ ಅನುಮತಿ ಇಲ್ಲದೆ ಮಾಂಸ ಮಾರಾಟ ಮಾಡಿದ್ದಕ್ಕಾಗಿ ಬಿಬಿಎಂಪಿ ನೋಟಿಸ್​ ಜಾರಿ ಮಾಡಿದ ಹಿನ್ನಲೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನ ಅಂಗಡಿ ಸುತ್ತಲೂ ಅನವಶ್ಯಕವಾಗಿ ಮುಸ್ಲಿಂ ಯುವಕರು ಓಡಾಡುತ್ತಿದ್ದಾರೆ. ಅವರು ನಮ್ಮ ನಮ್ಮ ಅಂಗಡಿ ಯುವಕರಿಗೆ ನಿಮ್ಮ ಮಾಲೀಕನನ್ನು ಹೊಡೆದು ಹಾಕುತ್ತೇವೆ ಎಂದು ಹೇಳಿದ್ದಾರೆ.  ಧರ್ಮಕ್ಕಾಗಿ ನನ್ನ ಬಲಿದಾನವಾದ್ರು ಪರವಾಗಿಲ್ಲ. ಸಂತೋಷವಾಗಿ ಇರ್ತೀನಿ. ನಾವು ಸಂಘದ ಕಾರ್ಯಕರ್ತರು ಹಿಡಿದ ಕೆಲಸವನ್ನು ಬಿಡೋದಿಲ್ಲ ಎಂದು ಕಿಡಿಕಾರಿದರು.

“ಬಿಬಿಎಂಪಿ ನಿಯಮವನ್ನು ಪಾಲಿಸುವಂತೆ ಬಿಬಿಎಂಪಿ ನೊಟೀಸ್ ನೀಡಿದೆ ಅದನ್ನು ನಾವು ಪಾಲಿಸುತ್ತೇವೆ. ಸಹಜವಾಗಿ ಏಪ್ರಿಲ್ ನಲ್ಲಿ ಟ್ರೇಡ್ ಲೈಸನ್ಸ್ ರಿನಿವಲ್ ಮಾಡಬೇಕಿದೆ ಹಣವನ್ನು ಕಟ್ಟಿ ನವೀಕರಿಸಿಕೊಳ್ಳುತ್ತೇವೆ” ಎಂದು ತಿಳಿಸಿದರು.

ಅದುವಲ್ಲದೇ ಜ್ಞಾನ ಭಾರತಿ ಸ್ಟೇಷನ್ ನಲ್ಲಿ ಮನವಿ ಮಾಡಿದ್ದೀವಿ. ಪೋಲಿಸರು ಪಾಸಿಟಿವ್ ಆಗಿ ಸ್ಪಂದಿಸಿದ್ದಾರೆ. ಪ್ರತಿ ಎರಡು ಗಂಟೆಗಳಿಗೊಮ್ಮೆ ಬೀಟ್ ಹಾಕ್ತಿದ್ದಾರೆ. ಅಲ್ಲದೇ ಯಾರೋ ನಮ್ಮ ಹುಡುಗನ ಬಳಿ ಬಂದು ಹಿಂದವೀ ಮೀಟ್ ಮಾರ್ಟ್ ಅಲ್ವ ಅಂತ ಕೇಳಿದ್ದಾರೆ. ನಮ್ಮ ಹತ್ತಿರ ಗನ್ ಇದೆ ಮುನೇಗೌಡನಿಗೆ ಹೊಡೆದು ಹಾಕ್ತಿವಿ ಅಂದಿದ್ದಾರೆ. ನಾನು ಈಗಾಗಲೇ ಗನ್ ಲೈಸೆನ್ಸ್ ಗೆ ಅಪ್ಲೈ ಮಾಡಿದ್ದೀನಿ ಹಾಗು ನನ್ನ ರಕ್ಷಣೆಗೆ ನಾನು ಸಿದ್ದನಾಗಿದ್ದೇನೆ ಎಂದು ಹೇಳಿದರು.

- Advertisment -

Most Popular

Recent Comments