Home ರಾಜ್ಯ ಸಿಎಂ ಇದ್ದಾರಂತ ರೆಸಾರ್ಟ್​ ಸುತ್ತ-ಮುತ್ತ ಯಾರೂ ಇರೋ ಹಾಗಿಲ್ವಾ?

ಸಿಎಂ ಇದ್ದಾರಂತ ರೆಸಾರ್ಟ್​ ಸುತ್ತ-ಮುತ್ತ ಯಾರೂ ಇರೋ ಹಾಗಿಲ್ವಾ?

ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಉಡುಪಿ ಜಿಲ್ಲೆಯ ಕಾಪುವಿನ ಸಾಯಿರಾಧಾ ರೆಸಾರ್ಟ್​​​​ನಲ್ಲಿ ಇರೋ ವಿಷ್ಯ ಗೊತ್ತೇ ಇದೆ. ಆದ್ರೆ, ಅಲ್ಲಿನ ಜನರದ್ದು ಯಾಕಾದ್ರೂ ಸಿಎಂ ಇಲ್ಲಿ ಉಳಿದುಕೊಂಡಿದ್ದಾರೋ ಅನ್ನೋ ಯಾತನೆ..! ಕಾರಣ, ಪೊಲೀಸರ ದರ್ಪ.
ಹೌದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉಳಿದುಕೊಂಡಿರುವ ರೆಸಾರ್ಟ್​ನ ಸುತ್ತ-ಮುತ್ತಲಿನ ನಿವಾಸಿಗಳ ಮೇಲೆ ಪೊಲೀಸರು ದರ್ಪ ತೋರುತ್ತಿದ್ದಾರೆ ಅಂತ ಹೇಳಲಾಗುತ್ತಿದೆ. ರೆಸಾರ್ಟ್​ ಸುತ್ತಮುತ್ತಲಿನ ಮನೆಯವರ ಮೇಲೆ ಪೊಲೀಸರು ನಿರಂತರ ದಬ್ಬಾಳಿಕೆ ನಡೆಸುತ್ತಿದ್ದಾರೆ ಅಂತ ತಿಳಿದುಬಂದಿದೆ. ನಿಮ್ಮ ಮನೆಯ ದಾಖಲೆ ಕೊಡಿ, ಮುಂದೆ ನಿಮ್ಮ ಮೇಲೂ ಕ್ರಮ ಆಗುತ್ತೆ ಅಂತ ಪೊಲೀಸರು ಬೆದರಿಕೆ ಹಾಕುತ್ತಿದ್ದಾರಂತೆ. ಸಾರ್ವಜನಿಕ ರಸ್ತೆ ಬದಿಯಲ್ಲೂ ಸ್ಥಳೀಯರು ನಿಲ್ಲದಂತೆ ಪೊಲೀಸರು ಒತ್ತಡ ಹೇರುತ್ತಿದ್ದು, ಜನ ಬೇಸತ್ತಿದ್ದಾರೆ.
ಇದಕ್ಕೆಲ್ಲಾ ಕಾರಣ ಮಾಧ್ಯಮದವರಿಗೆ ಆಶ್ರಯ ನೀಡುತ್ತಿದ್ದಾರೆ ಎಂದು ಕಾಪು ಎಸ್​ಐ ನವೀನ್​ ಎಸ್​ ನಾಯ್ಕ್​ ಬೆದರಿಕೆ ಹಾಕಿದ್ದಾರೆ ಅನ್ನೋ ಆರೋಪ ಕೂಡ ಕೇಳಿಬಂದಿದೆ. ಮಹಿಳೆಯೊಬ್ಬರೇ ಮನೆಯಲ್ಲಿದ್ದಾಗ ಬಂದು ಪೊಲೀಸರು ಬಂದು ಆವಾಜ್ ಹಾಕುತ್ತಿದ್ದಾರೆ ಅಂತ ಹೇಳಲಾಗಿದೆ.
ಸಾಯಿರಾಧಾ ರೆಸಾರ್ಟ್ ಮುಂದೆ ಪೊಲೀಸ್ ದರ್ಪ ಮೆರೆಯುತ್ತಿದ್ದು, ಮಾಧ್ಯಮದ ಕ್ಯಾಮೆರಾಮನ್​ಗಳನ್ನು ತಳ್ಳಿದ್ದಾರೆ. ರೆಸಾರ್ಟ್​ ಹೊರ ಭಾಗದಲ್ಲಿ ಎಸ್​ಐ ಅಬ್ದುಲ್​ ಖಾದರ್​, ಸುತ್ತ-ಮತ್ತಲಿನ ಭಾಗದಲ್ಲಿ ಕಾಪು ಎಸ್​ಐ ನವೀನ್​ ನಾಯ್ಕ್​ ಅವರಿಂದಲೂ ದಬ್ಬಾಳಿಕೆ ನಡೆಸುತ್ತಿದ್ದಾರೆ.
ಅಷ್ಟೇ ಅಲ್ಲದೆ ರೆಸಾರ್ಟ್​ನ ಒಳಭಾಗದ ಚಲನವಲನ ಕ್ಯಾಮೆರಾ ಕಣ್ಣಿಗೆ ಬೀಳಬಾರದು ಅಂತ ರೆಸಾರ್ಟ್​ನ ಹೊರ ಆವರಣಕ್ಕೆ ಬಣ್ಣ-ಬಣ್ಣದ ಪರದೆಯನ್ನೂ ಅಳವಡಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments