ಬುಕ್ ಮೈ ಶೋ ವೆಬ್ಸೈಟ್ ಕನ್ನಡ ಚಲನಚಿತ್ರಗಳಿಗೆ ಅಪಮಾನ ಮಾಡುತ್ತಿದೆ ಎಂದು ಆರೋಪಿಸಿ ಸಿನಿಮಾ ನಿರ್ದೇಶಕ ರವಿತೇಜ ಆತ್ಮಹತ್ಯೆಯ ಬೆದರಿಕೆಯೊಡ್ಡಿದ್ದಾರೆ.
‘ಸಾಗುತ ದೂರ ದೂರ‘ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬುಕ್ ಮೈ ಶೋನವರು ಕನ್ನಡ ಸಿನಿಮಾಕ್ಕೆ ಪ್ರಾಮುಖ್ಯತೆ ನೀಡುತ್ತಿಲ್ಲ. ಅವರು ಕನ್ನಡ ಸಿನಿಮಾಗಳಿಗೆ ಮನ ಬಂದಂತೆ ರೇಟಿಂಗ್ಸ್ಗಳನ್ನು ಕೊಡ್ತಾರೆ. ಜನರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ತಿದೆ. ಆದ್ರೆ ಬುಕ್ ಮೈ ಶೋ ರೇಟಿಂಗ್ಸ್ನಿಂದ ಸಿನಿಮಾ ಶೋಗೆ ಸಮಸ್ಯೆ ಆಗ್ತಿದೆ. ಅವರು ನಮ್ಮ ದುಡ್ಡಿಗಾಗಿ ಬೇಡಿಕೆ ಇಡ್ತಿದ್ದಾರೆ. ದುಡ್ಡು ಕೊಟ್ರೆ ಮಾತ್ರ ರೇಟಿಂಗ್ಸ್ ಕೊಡೋದು ಅಂತ ಹೇಳುತ್ತಿದ್ದಾರೆ. ಇವರು ಈ ರೀತಿ ದಂಧೆ ಮಾಡುತ್ತಿದ್ದರೆ ನಾನು ಬುಕ್ ಮೈ ಶೋ ಆಫೀಸ್ ಮುಂದೆ ಆತ್ಮಹತ್ಯೆ ಮಾಡಿಕೊಳ್ತೀನಿ, ಇದರಿಂದಾದ್ರು ಕ್ರಾಂತಿ ಆಗಿ ಈ ಮಾಫಿಯಾ ಕೊನೆಯಾಗಬೇಕು’ ಎಂದು ಅವಲತ್ತುಕೊಂಡಿದ್ದಾರೆ.
ಕನ್ನಡ ಸಿನಿಮಾಕ್ಕಾಗಿ ನಮ್ಮ ಕನ್ನಡದವರೇ ಒಂದು ಆ್ಯಪ್ ಸೃಷ್ಟಿಸಬೇಕು. ಬುಕ್ ಮೈ ಶೋನಿಂದ ಕನ್ನಡ ಸಿನಿಮಾದ ಕಗ್ಗೊಲೆಯಾಗ್ತಿದೆ. ಕನ್ನಡ ಪರ ಸಂಘಟನೆಗಳು ಇವಾಗ್ಯಾಕೆ ಸಪೋರ್ಟ್ ಮಾಡ್ತಿಲ್ಲ ಎಂದು ರವಿತೇಜ ಪ್ರಶ್ನೆ ಮಾಡಿದ್ದಾರೆ.