Homeಸಿನಿ ಪವರ್ಸ್ಯಾಂಡಲ್ ವುಡ್ತವರೂರಿನ ಶಾಲೆಗೆ ನೆರವಾದ ಕಿಚ್ಚ ಸುದೀಪ್..!

ತವರೂರಿನ ಶಾಲೆಗೆ ನೆರವಾದ ಕಿಚ್ಚ ಸುದೀಪ್..!

ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ ನಟ ಕಿಚ್ಚ ಸುದೀಪ್ . ಕಾಡಿನಲ್ಲಿರೋ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಾದ್ ಷಾ ಕಿಚ್ಚ ಸುದೀಪ್ ಪಣ ತೊಟ್ಟಿದ್ದಾರೆ . ಶಿವಮೊಗ್ಗದ ಸಾಗರ ಬಳಿ ಇರೋ ಆವಿಗೆ ಹಳ್ಳಿಯ ಶಾಲೆ ದತ್ತು ಪಡೆಡಿದ್ದಾರೆ.
ಶಿವಮೊಗ್ಗದ ಸಾಗರ ಬಳಿ ಇರೋ ಆವಿಗೆ ಹಳ್ಳಿ ಸಾಗರದಿಂದ 49 ಕಿಲೋ ಮೀಟರ್ ದೂರದಲ್ಲಿದೆ.  ಈ ಶಾಲೆ ಇರೋದು ದಟ್ಟ ಕಾಡಿನ ಮಧ್ಯೆ. ಕಾಡಿನಲ್ಲಿ ವಾಸವಿರೋ ಗುಡ್ಡಗಾಡಿನ ಕುಣಬಿ ಜನಾಂಗದವರ ಮಕ್ಕಳಿಗಾಗಿ ಸರ್ಕಾರ ಶಾಲೆ ಕಟ್ಟಿಸಿದೆ . ಅದಕ್ಕೆ ಮುಖ್ಯೋಪಾಧ್ಯರನ್ನು ನೇಮಿಸಿದೆ. ಆದ್ರೆ, ಮಕ್ಕಳಿಗೆ ಪಾಠ ಮಾಡುವವರೆ ಇಲ್ಲ.
ಇಡೀ ಊರಿನಲ್ಲಿ ಹುಡುಕಿದ್ರೆ ನಿಮಗೆ ಸಿಗೋದು ಮೂವರು ವಿದ್ಯಾವಂತರು ಅಷ್ಟೇ. ಒಬ್ಬರು ಡಿಗ್ರಿ ಇನ್ನಿಬ್ಬರು ಪಿಯುಸಿ. ಈ ಮೂವರಲ್ಲಿ ಒಬ್ಬರು ಮಕ್ಕಳ ಪಾಲಿಗೆ ಟೀಚರ್.
ಇನ್ನು ಆಶ್ಚರ್ಯ ತರಿಸೋ ಸಂಗತಿ ಅಂದ್ರೆ ಇಲ್ಲಿ ಮಕ್ಕಳು ಪ್ರತಿ ನಿತ್ಯ 8 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡಿ ಶಾಲೆಗೆ ಕಲಿಯಲು ಹೋಗುತ್ತಾರೆ. ಈ ಎಲ್ಲಾ ವಿಚಾರ ತಿಳಿದ  ಸುದೀಪ್, ತಮ್ಮ ಚಾರಿಟೇಬಲ್ ಟ್ರಸ್ಟ್ ಸದಸ್ಯರಿಗೆ ಆ ಶಾಲೆಯನ್ನ ದತ್ತು ಪಡೆಯಲು ಸೂಚಿಸಿದ್ದಾರೆ.
 ಯಾವಾಗ ಸುದೀಪ್ ಆ ಶಾಲೆಗಳನ್ನ ದತ್ತು ಪಡೆಯುವಂತೆ ಸೂಚಿಸಿದ್ರೋ ಆಗ ಚಾರಿಟಬಲ್ ಟ್ರಸ್ಟ್ ಸದಸ್ಯರು ಆ ಸ್ಥಳಕ್ಕೆ ಭೇಟಿ ಕೊಟ್ರು.

ಸಾಗರದಿಂದ ಸುಮಾರು 38 ಕಿಲೋ ತಮ್ಮ ಕಾರಿನಲ್ಲಿ ನಂತ್ರ 8 ಕಿಲೋ ಅಲ್ಲಿಯ ಸ್ಥಳೀಯ ವಾಹನದಲ್ಲಿ ನಂತ್ರ 3 ಕಿಲೋ ಕಾಲ್ನಡಿಗೆಯಲ್ಲಿ ಆವಿಗೆ ಸ್ಥಳಕ್ಕೆ ತಲುಪಿದ್ರು . ಅಲ್ಲಿನ ಮುದ್ದು ಮಕ್ಕಳನ್ನ ನೋಡುತ್ತಿದ್ದರೆ ತಮಗಾಗಿದ್ದ ಆಯಾಸವನ್ನ ಮರೆತು ಕಿಚ್ಚನ ಆಸೆಯಂತೆ ಆ ಶಾಲೆಯ ದತ್ತು ಕಾರ್ಯವನ್ನ ಪೂರ್ಣಗೊಳಿಸಿದರು ಚಾರಿಚೇಬಲ್ ಟ್ರಸ್ಟ್‌ ನ ಸದಸ್ಯರು.

ಶಾಲೆ ಅಭಿವೃದ್ಧಿಯ ಜವಾಬ್ದಾರಿಯನ್ನು ಕಿಚ್ಚ ವಹಿಸಿಕೊಂಡಿದ್ದು, ಸರ್ಕಾರಿ ಶಾಲೆಯ ಕಟ್ಟಡ ನಿರ್ಮಾಣ ಕೆಲಸ. ಪೇಂಟಿಂಗ್​, ಶೌಚಾಲಯ ನಿರ್ಮಾಣ ಸೇರಿ ಶಾಲೆಗೆ ಬೇಕಾದ ಮೂಲ ಸೌಕರ್ಯವನ್ನು ಕಿಚ್ಚ ತಮ್ಮ ಟ್ರಸ್ಟ್​ ಮೂಲಕ ಒದಗಿಸಲಿದ್ದಾರೆ. ಶಾಲೆಯ ಅಭಿವೃದ್ದಿ ಜೊತೆಗೆ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರ ವ್ಯವಸ್ಥೆ ಮಾಡುವ ಆಲೋಚನೆಯಲ್ಲಿದ್ದಾರೆ ಕಿಚ್ಚ ಸುದೀಪ್ .

ಒಟ್ಟಿನಲ್ಲಿ ಹುಟ್ಟಿದ ಊರಿಗೆ ಏನಾದ್ರು ಮಾಡಬೇಕು ಅನ್ನೋ ಆಸೆಯಿಂದ ತಮ್ಮ ಚಾರಿಟೇಬಲ್ ಟ್ರಸ್ಟ್ ಸದಸ್ಯರಿಗೆ ಹೇಳಿದಾಗ ಕಿಚ್ಚನ ಮೇಲಿನ ಅಭಿಮಾನದಿಂದ ಎಷ್ಟೇ ಕಷ್ಟವಾದ್ರೂ ಸರಿ ಅವರು ಹೇಳಿದ ಕೆಲಸವನ್ನ ಮಾಡಿ ಮುಗಿಸಿಸುತ್ತಾರೆ. ಈ ಉತ್ತಮ ಕಾರ್ಯ ಮಾಡಿದ ಕಿಚ್ಚ ಸುದೀಪ್ ಅವ್ರಿಗೆ ಹಾಗೂ ಅವರ ಚಾರಿಟೇಬಲ್ ಟ್ರಸ್ಟ್ ಸದಸ್ಯರಿಗೆ ನಮ್ಮ ಕಡೆಯಿಂದ ಹ್ಯಾಟ್ಸಪ್.

-ಮನೋಜ್ ವಿಜಯೀ೦ದ್ರ

LEAVE A REPLY

Please enter your comment!
Please enter your name here

- Advertisment -

Most Popular

Recent Comments