Saturday, May 28, 2022
Powertv Logo
Homeಸಿನಿಮಾವಿಶ್ವ ದಾಖಲೆ ಬರೆಯೋಕೆ ರೆಡಿಯಾದ್ರು ಸಾಧು ಕೋಕಿಲ..!

ವಿಶ್ವ ದಾಖಲೆ ಬರೆಯೋಕೆ ರೆಡಿಯಾದ್ರು ಸಾಧು ಕೋಕಿಲ..!

ಹೀರೋ, ಹೀರೋಯಿನ್ ಯಾರೇ ಆಗಿರ್ಲಿ. ಸ್ಟಾರ್ ನಟರ ಸಿನಿಮಾ ಆಗಿರಲಿ, ಹೊಸಬರ ಚಿತ್ರವಾಗಿರಲಿ ಅಲ್ಲಿ ಸಾಧು ಕೋಕಿಲ ಇದ್ದಾರೆ ಅಂತಾದ್ರೆ ಸಾಕು ಮನರಂಜನೆ ಪಕ್ಕಾ 100%. 1992ರಲ್ಲಿ ಉಪೇಂದ್ರ ನಿರ್ದೇಶನದ ‘ಶ್​’ ಚಿತ್ರದ ಮೂಲಕ ಸಿನಿ ಜರ್ನಿ ಶುರುಮಾಡಿದ ಸಾಧು ಕೋಕಿಲ ಇಂದು ಕಾಮಿಡಿ ಮಹಾರಾಜ್… ಸಾಧು ಮಹಾರಾಜ್!
ನಟನೆ ಜೊತೆಗೆ ಸಂಗೀತ ನಿರ್ದೇಶಕರಾಗಿಯೂ ಛಾಪು ಮೂಡಿಸಿರುವವರು ಸಾಧು ಇದೀಗ ವಿಶ್ವದಾಖಲೆಯನ್ನು ಬರೆಯಲು ಹೊರಟಿದ್ದಾರೆ.. ಅದು ಒಂದೇ ಒಂದು ಸಿನಿಮಾ ಮೂಲಕ!
ಮನರಂಜನ್ ರವಿಚಂದ್ರನ್ ಅಭಿನಯದ ಮುಗಿಲ್​​ ಪೇಟೆ ಚಿತ್ರದಲ್ಲಿ ಸಾಧುಕೋಕಿಲ ಒಂದಲ್ಲ ಎರಡಲ್ಲ ಮೂರಲ್ಲ ಬರೋಬ್ಬರಿ 17 ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಲಿಮ್ಕಾ ರೆಕಾರ್ಡ್​ಗೆ ಸೇರ್ಪಡೆಯಾಗುತ್ತಿದ್ದಾರೆ .
ಈ ಹಿಂದೆ ಕಮಲ್ ಹಾಸನ್ ‘ದಶಾವತಾರಂ’ ಚಿತ್ರದಲ್ಲಿ 10 ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆ ದಾಖಲೆಯನ್ನು ನಟ ಹರೀಶ್ ರಾಜ್​ ತಾವೇ ನಿರ್ದೇಶಿಸಿ, ನಟಿಸಿದ ಶ್ರೀ ಸತ್ಯನಾರಾಯಣ ಚಿತ್ರದ ಮೂಲಕ ಬ್ರೇಕ್ ಮಾಡಿದ್ದರು. ಆ ಸಿನಿಮಾದಲ್ಲಿ ಹರೀಶ್ 16 ಪಾತ್ರಗಳಲ್ಲಿ ಅಭಿನಯಿಸಿದ್ದರು. ಈಗ ಸಾಧು ಮಹಾರಾಜ್ ಆ ದಾಖಲೆಯನ್ನು ಬ್ರೇಕ್ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments