ತುಮಕೂರು ಜಿಲ್ಲಾಧಿಕಾರಿ ಅಮಾನತಿಗೆ ಸಚಿನ್ ಮೀಗಾ ಆಗ್ರಹ

0
509

ತುಮಕೂರು ಜಿಲ್ಲಾಧಿಕಾರಿ ಅಮಾನತಿಗೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಆಗ್ರಹಿಸಿದ್ದಾರೆ. ಜಿಲ್ಲೆಯ ಗುಬ್ಬಿ ತಾಲ್ಲೂಕಿನ ತಿಪ್ಪೂರು ಗ್ರಾಮದಲ್ಲಿ ರೈತ ಮಹಿಳೆಗೆ ಸೇರಿದ ಸುಮಾರು 250 ಅಡಿಕೆ ಮರಗಳನ್ನು ಗ್ರಾಮ ಲೆಕ್ಕಿಗ, ತಹಶೀಲ್ದಾರ್ ಸೇರಿ ಕಡಿಸಿದ್ದಾರೆ. ಜಿಲ್ಲಾಧಿಕಾರಿ ಈ ಬಗ್ಗೆ ಸುಮ್ಮನಿದ್ದಾರೆ. ಅದು ಅಕ್ಷಮ್ಯ ಅಪರಾಧ. ಈ ಬಗ್ಗೆ ಕಾನೂನು ಕ್ರಮಕೈಗೊಳ್ಳಬೇಕು ಅಂತ ಒತ್ತಾಯಿಸಿದ್ದಾರೆ.
ಅಕ್ರಮವಾಗಿ ಸಾಗುವಳಿಮಾಡಿದ ಕೃಷಿ ಭೂಮಿ ಯನ್ನು ಫಾರಂ 50/53 ಹಾಗೂ ಹೊಸದಾಗಿ ಫಾರಂ 57 ರಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಗಿಡಗಳನ್ನು ಕಡಿದಿರುವುದು ಅಪರಾಧ. ರೈತರು ಬೆಳೆದಿರುವ ಗಿಡಗಳನ್ನು ಕಡಿಯಲು ಬರತದ ಯಾವುದೇ ಕಾನೂನುಗಳಲ್ಲಿ ಅವಕಾಶವಿಲ್ಲ. ಕೂಡಲೆ ಜಿಲ್ಲಾಧಿಕಾರಿಗಳನ್ನು ಅಮಾನತ್ತು ಮಾಡಬೇಕು ಹಾಗೂ ಗ್ರಾಮ ಲೆಕ್ಕಿಗ, ತಹಶೀಲ್ದಾರ್ ರವರನ್ನು ಬಂಧಿಸಬೇಕು ಎಂದಿದ್ದಾರೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ನಿದ್ದೆಯಿಂದ ಎಚ್ಚೆತ್ತು ರೈತರಿಗೆ ನ್ಯಾಯ ಒದಗಿಸಲಿ ಎಂದು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here