Homeಕ್ರೀಡೆP.Cricketಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾದ ಸಚಿನ್ ತೆಂಡೂಲ್ಕರ್

ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾದ ಸಚಿನ್ ತೆಂಡೂಲ್ಕರ್

ಬೆಂಗಳೂರು : ಇತ್ತೀಚೆಗಷ್ಟೇ ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಗೆದ್ದು ಬಂದಿದ್ದ ಸಚಿನ್ ನೇತೃತ್ವದ ಇಂಡಿಯನ್ ಲೆಜೆಂಡ್ಸ್ ತಂಡದ 4 ಜನರು ಕೊರೋನಾಗೆ ತುತ್ತಾಗಿದ್ದಾರೆ. ಸಚಿನ್ ಅವರಿಗೆ ಮಾಚ್​ 27ರಂದು ಕೊರೋನಾ ದೃಢಪಟ್ಟಿತ್ತು. ಟ್ವಿಟರ್ ಮೂಲಕ ಬಹಿರಂಗ ಪಡಿಸಿದ್ದ ಸಚಿನ್ ಅವರು ಜಾಗರೂಕವಾಗಿರುವಂತೆ ಟ್ವೀಟ್ ಮಾಡಿದ್ದರು. 

ಕೆಲ ದಿನಗಳಿಂದ ಕ್ವಾರಂಟೈನ್​ನಲ್ಲಿದ್ದ ಸಚಿನ್​ ಅವರು ವೈದ್ಯರ ಸೂಚನೆ ಮೇರೆಗೆ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲ ದಿನಗಳಲ್ಲಿ ನಾನು ಗುಣಮುಖನಾಗಿ ಮನೆಗೆ ವಾಪಸ್‌ ಆಗುವೆ, ಶೀಘ್ರ ಗುಣಮುಖರಾಗಲು ಪ್ರಾರ್ಥಿಸಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದದ ತಿಳಿಸುವುದರ ಜೊತೆಗೆ ಕೊರೋನಾ ಬಗ್ಗೆ ಜಾಗೃತಿವಹಿಸಲು ಮನವಿ ಮಾಡಿದ್ದಾರೆ.

 

LEAVE A REPLY

Please enter your comment!
Please enter your name here

- Advertisment -

Most Popular

Recent Comments