‘ಕುರುಕ್ಷೇತ್ರ’ದ ಮೊದಲ ಹಾಡಿನ ‘ದರ್ಶನ’..!

0
711

‘ಕುರುಕ್ಷೇತ್ರ’.. ಸ್ಯಾಂಡಲ್​ವುಡ್​ನ ಬಹು ನಿರೀಕ್ಷಿತ ಸಿನಿಮಾ. ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲೂ ರಿಲೀಸ್ ಆಗಲು ರೆಡಿಯಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾ ಕೂಡ ಇದಾಗಿದ್ದು, ‘ಸುಯೋಧನ’ನ ಅವತಾರದಲ್ಲಿ ಡಿ.ಬಾಸ್​ ಅವರನ್ನು ಕಣ್ತುಂಬಿ ಕೊಳ್ಳಲು ಅಭಿಮಾನಿಗಳು ವ್ಹೇಟ್ ಮಾಡ್ತಿದ್ದಾರೆ.
ಪೋಸ್ಟರ್ ಮತ್ತು ಟೀಸರ್​​ನಿಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಕುರುಕ್ಷೇತ್ರದ ಮೊದಲ ಹಾಡು ರಿಲೀಸ್ ಆಗಿದೆ. ಯೂಟ್ಯೂಬ್​ನಲ್ಲಿ ಈ ಲಿರಿಕಲ್ ಹಾಡು ಧೂಳೆಬ್ಬಿಸಿ ಬಿಟ್ಟಿದೆ.
ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈ ನಡುವೆ ಚಿತ್ರತಂಡ ‘ಸಾಹೋರೆ ಸಾಹೋ’ ಹಾಡಿನ ಲಿರಿಕಲ್ ವಿಡಿಯೋವನ್ನು ರಿಲೀಸ್ ಮಾಡಿದೆ. ಇದು ದರ್ಶನ್ ಅವರ ಎಂಟ್ರಿ ಸಾಂಗ್ ಆಗಿದ್ದು, ‘ಸುಯೋಧನ’ನ ವರ್ಣನೆ ಈ ಹಾಡಿನಲ್ಲಿದೆ. ಇನ್ನು ನಾಳೆ (ಜುಲೈ 7) ಆಡಿಯೋ ಬಿಡುಗಡೆ ಆಗಲಿದ್ದು, ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.

LEAVE A REPLY

Please enter your comment!
Please enter your name here