Sunday, June 26, 2022
Powertv Logo
Homeರಾಜ್ಯಐಪಿಎಸ್​ ಅಧಿಕಾರಿಗೆ 'ಯು ಬ್ಲಡಿ ಲೇಡಿ' ಅಂದ್ರಂತೆ ಸಚಿವ ಸಾ.ರಾ ಮಹೇಶ್!

ಐಪಿಎಸ್​ ಅಧಿಕಾರಿಗೆ ‘ಯು ಬ್ಲಡಿ ಲೇಡಿ’ ಅಂದ್ರಂತೆ ಸಚಿವ ಸಾ.ರಾ ಮಹೇಶ್!

ತುಮಕೂರು : ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ಐಪಿಎಸ್​ ಅಧಿಕಾರಿ ದಿವ್ಯಾಗೋಪಿನಾಥ್ ಅವರಿಗೆ ”ಯು ಬ್ಲಡಿ ಲೇಡಿ” ಅಂತ ಹೇಳಿದ್ದಾರಂತೆ! ಸಚಿವರ ಮಾತಿನಿಂದ ನೊಂದ ಮಹಿಳಾ ಅಧಿಕಾರಿ, ಕಣ್ಣೀರು ಹಾಕಿದ್ದಾರೆ.
ಡಾ. ಶಿವಕುಮಾರ ಸ್ವಾಮೀಜಿ ಅವರ ಅಗಲಿಕೆಯಿಂದಾಗಿ ಸಿದ್ಧಗಂಗಾ ಮಠದ ಬಳಿ ಈ ಹಿಂದೆ ಎಸ್​ ಪಿ ಆಗಿ ತುಮಕೂರಿನಲ್ಲಿ ಕಾರ್ಯನಿರ್ವಹಿಸಿದ್ದ ದಿವ್ಯಾ ಗೋಪಿನಾಥ್ ಅವರನ್ನು ಬಂದೋಬಸ್ತ್ ​ ಜವಬ್ದಾರಿಗೆಂದು ಕರೆಸಿಕೊಳ್ಳಲಾಗಿತ್ತು. ಈ ವೇಳೆ ಶ್ರೀಗಳ ಕ್ರಿಯಾ ಸಮಾಧಿ ಬಳಿ ತೆರಳಲು ಅವರು ಸಾ.ರಾ ಮಹೇಶ್ ಅವರಿಗೆ ನಿರಾಕರಿಸಿದ್ದಾರೆ. ಈ ವೇಳೆ ಸಚಿವರು ಅವಾಜ್ ಹಾಕಿದ್ದಾರೆ. ಯು ಬ್ಲಡಿ ಲೇಡಿ ಎಂಬ ಪದವನ್ನೂ ಬಳಸಿದ್ದಾರೆ ಎನ್ನಲಾಗಿದೆ. ಇದರಿಂದ ನೊಂದ ದಿವ್ಯಾ ಗೋಪಿನಾಥ್ ಅವರು ಸ್ಥಳದಲ್ಲೇ ಕಣ್ಣೀರಿಟ್ಟಿದ್ದಾರಂತೆ!
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾ.ರಾ ಮಹೇಶ್, ‘ಕ್ರಿಯಾ ಸಮಾಧಿ ಬಳಿ ತೆರಳಲು ದಿವ್ಯಾಗೋಪಿನಾಥ್​ ಅವಕಾಶ ಕೊಡಲಿಲ್ಲ. ನಾನು ಮಂತ್ರಿ ಎಂದು ಹೇಳಿದರೂ ಅವರು ಬಿಡಲಿಲ್ಲ. ಕೆಲವು ಅಧಿಕಾರಿಗಳಿಗೆ ಸಚಿವರು ಯಾರು ಅನ್ನೋದೇ ಗೊತ್ತಿರಲ್ಲ. ಆಗ ನಾವೇ ಪರಿಚಯ ಮಾಡಿಕೊಳ್ತೀವಿ. ಧಾರ್ಮಿಕ ಕೆಲಸವಾಗಿದ್ದರಿಂದ ನಾನು ಅಲ್ಲಿ ಹೆಚ್ಚಿಗೆ ಏನೂ ಮಾತನಾಡಿಲ್ಲ. ದಾರಿ ಬಿಡಿ ಅಂತ ಏರು ಧ್ವನಿಯಲ್ಲಿ ಹೇಳಿದ್ದೇನೆ ಅಷ್ಟೇ. ಯೂಸ್​ ಲೆಸ್ ರೀತಿ ಮಾತಾಡ್ಬೇಡಿ ಅಂದೆ ಅಷ್ಟೇ. ಯಾವ್ದೇ ಕೆಟ್ಟ ಪದ ಬಳಸಿಲ್ಲ” ಅಂತ ಹೇಳಿದ್ದಾರೆ. ಇನ್ನು ಸಚಿವರ ನಡೆಯನ್ನು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ಸಮರ್ಥಿಸಿಕೊಂಡಿದ್ದಾರೆ.

2 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments