ನಿಮ್ಗೆ ಗೊತ್ತೇ ಇದೆ, ಯೂಟ್ಯೂಬ್ ಮೂಲಕ ಹಣ ಗಳಿಸಬಹುದು ಅಂತ. ಜನರಿಗೆ ಇಷ್ಟ ಆಗೋ ವಿಡಿಯೋಗಳನ್ನು ನಿಮ್ಮ ಚಾನಲ್ನಲ್ಲಿ ಪೋಸ್ಟ್ ಮಾಡಿದ್ರೆ, ಅವುಗಳಿಂದ ನಿಮ್ಗೆ ದುಡ್ಡು ಬರುತ್ತೆ. ಇಲ್ಲೊಬ್ಬ 8 ವರ್ಷದ ಪೋರ ಯೂಟ್ಯೂಬ್ನಿಂದ ಕೋಟ್ಯಧಿಪತಿಯಾಗಿ ಸುದ್ದಿಯಲ್ಲಿದ್ದಾನೆ! ಈ ಪೋರ ಯೂಟ್ಯೂಬ್ನಿಂದ ಸಂಪಾದಿಸಿದ್ದು, ಬರೀ ಒಂದೆರಡು ಸಾವಿರವಲ್ಲ, ಎರಡ್ಮೂರು ಲಕ್ಷವಲ್ಲ, ಮೂರ್ನಾಲ್ಕು ಕೋಟಿಯಲ್ಲ, ಬರೋಬ್ಬರಿ 185 ಕೋಟಿ ರೂ!
ಅಚ್ಚರಿಯಾದ್ರೂ ನೀವು ಇದನ್ನು ನಂಬಲೇ ಬೇಕು. ಅಮೆರಿಕಾದ 8 ವರ್ಷದ ಬಾಲಕ ರೈನ್ ಗುವಾನ್ ಯೂಟ್ಯೂಬ್ನಲ್ಲಿ ಕಳೆದ ಒಂದೇ ಒಂದು ವರ್ಷದಲ್ಲಿ 26 ಮಿಲಿಯನ್ ಡಾಲರ್. ಅರ್ಥಾತ್ 185 ಕೋಟಿ ರೂ ಗಳಿಸಿ ರೆಕಾರ್ಡ್ ಮಾಡಿದ್ದಾನೆ. ಫೋರ್ಬ್ಸ್ 2019ನೇ ಸಾಲಿನಲ್ಲಿ ಅತೀ ಹೆಚ್ಚು ಸಂಪಾದಿಸಿರುವವರ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ರೈನ್ ಗುವಾನ್ ನಂಬರ್ 1 ಸ್ಥಾನದಲ್ಲಿದ್ದಾನೆ.
ರೈನ್ ಗುವಾನ್ನ ಯೂಟ್ಯೂಬ್ ಚಾನಲ್ ಹೆಸ್ರು ರೈನ್ಸ್ ವರ್ಲ್ಡ್ ಅಂತ. ಆತನ ಪೋಷಕರು 2015ರಲ್ಲಿ ಚಾನಲ್ ಶುರುಮಾಡಿದ್ರು. ಸದ್ಯ 2.29 ಕೋಟಿ ಸಬ್ಸ್ಕ್ರೈಬರ್ಗಳನ್ನು ಚಾನಲ್ ಹೊಂದಿದೆ. ಈ ಚಾನಲ್ನಲ್ಲಿ ರೈನ್ ಆಟಿಕೆಗಳ ಬಗ್ಗೆ, ಸಂಗೀತ, ಸೈನ್ಸ್ ಎಕ್ಸ್ಪಿರಿಮೆಂಟ್ಸ್, ಸ್ಕಿಟ್ಸ್ ಮೊದಲಾದ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾನೆ. ಪ್ರತಿಯೊಂದು ವಿಡಿಯೋ ಲಕ್ಷ ಲಕ್ಷ ವೀವ್ಸ್ ಪಡೆದಿದ್ದು, ರೈನ್ ಕೋಟ್ಯಧಿಪತಿಯಾಗಿದ್ದಾನೆ.
ಅಂತೆಯೇ ದಕ್ಷಿಣ ಕೊರಿಯಾದ 6 ವರ್ಷದ ಬಾಲಕಿ ಬೋರಮ್ ಕೂಡ ಯೂಟ್ಯೂಬ್ನಿಂದ ಕೋಟಿ ಕೋಟಿ ಸಂಪಾದಿಸುತ್ತಿದ್ದಾಳೆ. ಆಕೆ ಬೋರಾಮ್ ಟ್ಯೂಬ್ ವ್ಲಾಗ್ ಮತ್ತು ಬೋರಮ್ ಟ್ಯೂಬ್ ಟಾಯ್ ರಿವ್ಯೂ ಎಂಬ ಎರಡು ಯೂಟ್ಯೂಬ್ ಚಾನಲ್ಗಳನ್ನು ಹೊಂದಿದ್ದು ಕೋಟಿ ಒಡತಿ ಆಗಿದ್ದಾಳೆ. ಈ ಪೋರಿ ಜೂನ್ತಿಂಗಳಲ್ಲಿ 55 ಕೋಟಿ ರೂ ಮೌಲ್ಯದ ಆಸ್ತಿಯನ್ನು ಖರೀದಿಸಿದ್ದಾಳೆ ಎಂದು ವರದಿಯಾಗಿದೆ.