Home ಸಿನಿ ಪವರ್ ಒಂದೇ ದಿನ ಥಿಯೇಟರ್​ಗೆ ಎಂಟ್ರಿ ಕೊಡ್ತಿದ್ದಾರೆ 'ಲವ-ಕುಶ'..!

ಒಂದೇ ದಿನ ಥಿಯೇಟರ್​ಗೆ ಎಂಟ್ರಿ ಕೊಡ್ತಿದ್ದಾರೆ ‘ಲವ-ಕುಶ’..!

ಅದು 1995 , ‘ಓಂ’ ಅನ್ನೋ ಸಿನಿಮಾ ರಿಲೀಸ್ ಆಗಿದ್ದು. ಆ ಸಿನಿಮಾ ಕನ್ನಡ ಚಿತ್ರರಂಗದಲ್ಲೊಂದು ಹೊಸ ಅಧ್ಯಾಯವನ್ನೇ ಬರೆದು ಬಿಟ್ಟಿತ್ತು. ಅಲ್ಲಿಯವರಿಗಿದ್ದ ಒಂದು ಚೌಕಟ್ಟನ್ನು ಮೀರಿ ಹೊಸ ಆಯಾಮವನ್ನು ಸ್ಯಾಂಡಲ್​​ವುಡ್​ಗೆ ನೀಡಿದ್ದು ಇದೇ ‘ಓಂ’ ಚಿತ್ರ. ಆ ಸಿನಿಮಾವನ್ನು ನಿರ್ದೇಶಿಸಿದ್ದು ಬೇರಾರು ಅಲ್ಲ ಹೊಸತನದ ಹರಿಕಾರ ರಿಯಲ್ ಸ್ಟಾರ್ ಉಪೇಂದ್ರ. ಆ ಸಿನಿಮಾದಲ್ಲಿ ನಾಯಕನಾಗಿ ಸದ್ದು ಮಾಡಿದ್ದು ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್.
ಅದೇರೀತಿ ಶಿವಣ್ಣ ಮತ್ತು ಉಪೇಂದ್ರ ಒಟ್ಟಿಗೇ ತೆರೆ ಮೇಲೆ ಮಿಂಚಿದ್ದೂ ಇದೆ. 2000ರಲ್ಲಿ ತೆರೆಕಂಡ ರಾಜೇಂದ್ರ ಬಾಬು ನಿರ್ದೇಶನದ ‘ಪ್ರೀತ್ಸೆ’ ಮತ್ತು 2007ರಲ್ಲಿ ರಿಲೀಸ್ ಆದ ಸಾಯಿ ಪ್ರಕಾಶ್ ನಿರ್ದೇಶನದ ‘ಲವ-ಕುಶ’ ಮೂವಿಯಲ್ಲಿ ಶಿವಣ್ಣ ಮತ್ತು ಉಪ್ಪಿ ಜೊತೆಯಲ್ಲಿ ಅಭಿನಯಿಸಿದ್ದರು.
ಹೀಗೆ ಉಪ್ಪಿ, ಶಿವಣ್ಣ ಕಾಂಬಿನೇಷನ್ನಲ್ಲಿ ಬಂದ ಓಂ, ಪ್ರೀತ್ಸೆ, ಲವ-ಕುಶ ಈ ಮೂರೂ ಸಿನಿಮಾಗಳೂ ಸ್ಯಾಂಡಲ್ವುಡ್​​​​​ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ ಚಿತ್ರಗಳು. ಆದರೆ, ಈ ರೀತಿ ಜೊತೆ ಜೊತೆಯಲ್ಲಿ ಗೆದ್ದ, ಇತಿಹಾಸ ನಿರ್ಮಿಸಿದ ಈ ಜೋಡಿ ಇಂದು ಪೈಪೋಟಿಗೆ ಇಳಿದಿದೆ.
ಹೌದು, ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಅವರ ಸಿನಿಮಾ ಒಂದೇ ದಿನ ರಿಲೀಸ್ ಆಗುತ್ತಿದ್ದು. ಈ ಮೂಲಕ ಕಾಕತಾಳಿಯ ಅನ್ನುವಂತೆ ಇಬ್ಬರೂ ಪೈಪೋಟಿಗೆ ಇಳಿದು ಬಿಟ್ಟಿದ್ದಾರೆ. ಕರುನಾಡ ಚಕ್ರವರ್ತಿಯ ‘ರುಸ್ತುಂ’ ಹಾಗೂ ರಿಯಲ್ ಸ್ಟಾರ್ ನ ‘ಐ-ಲವ್ ಯು’ ಒಂದೇ ದಿನ ರಿಲೀಸ್ ಆಗುತ್ತಿದೆ.
ಇನ್ನು ಈ ಎರಡು ಚಿತ್ರಗಳ ಬಗ್ಗೆ ಹೇಳೋದಾದ್ರೆ ಶಿವಣ್ಣ ಅಭಿನಯದ ‘ರುಸ್ತುಂ’ಗೆ ಆ್ಯಕ್ಷನ್ ಕಟ್ ಹೇಳ್ತಿರೋದು ರವಿವರ್ಮಾ… ರವಿವರ್ಮಾ ಅವರು ಡೈರೆಕ್ಷನ್ ಮಾಡ್ತಿರೋ ಮೊದಲ ಚಿತ್ರವಿದು. ಶ್ರದ್ಧಾ ಶ್ರೀನಾಥ್, ರಚಿತಾ ರಾಮ್ ಮತ್ತು ಮಯೂರಿ ನಾಯಕಿಯರು. ವಿವೇಕ್ ಓಬಿರಾಯ್ ಚಿತ್ರದಲ್ಲಿದ್ದಾರೆ. ಅನೂಪ್ ಸೇಲನ್ ಸಂಗೀತದ ಬಲ ತುಂಬಿದ್ದಾರೆ.
ಇನ್ನು ಉಪ್ಪಿ ಅಭಿನಯದ ಐ ಲವ್ ಯು ಆರ್. ಚಂದ್ರು ನಿರ್ದೇಶನದ ಸಿನಿಮಾ. ಉಪ್ಪಿ ಇಲ್ಲಿ ಐ ಲವ್ ಯು ಅನ್ನೋದು ರಚಿತಾರಾಮ್ ಅವರಿಗೆ.. ಅಂದ್ರೆ ರಚಿತಾ ಈ ಚಿತ್ರದಲ್ಲೂ ನಾಯಕಿ. ಹೀಗಾಗಿ ಜೂನ್ 14 ರಚಿತಾ ರಾಮ್ಗೆ ಡಬಲ್ ಧಮಾಕಾ.
ಒಟ್ಟಿನಲ್ಲಿ ‘ಲವ-ಕುಶ’ ಉಪ್ಪಿ ಹಾಗೂ ಶಿವಣ್ಣ ಒಟ್ಟಿಗೇ ಥಿಯೇಟರ್​ಗೆ ಎಂಟ್ರಿ ಕೊಡ್ತಾ ಇದ್ದು, ರುಸ್ತುಂ ಗೆ ಐ ಲವ್ ಯು ಅನ್ನೋಕೆ ರೆಡಿಯಾಗಿದ್ದಾರೆ ಕರುನಾಡ ಪ್ರೇಕ್ಷಕರು.
-ಚರಿತ ಪಟೇಲ್

LEAVE A REPLY

Please enter your comment!
Please enter your name here

- Advertisment -

Most Popular

‘ನನ್ನಿಂದ ಮನೆಯವರೆಗೂ ಸೋಂಕು ತಗುಲಿದೆ ಎಂದು ತಹಶೀಲ್ದಾರ್ ಸೂಸೈಡ್’

ಚಿಕ್ಕಮಗಳೂರು: ನನ್ನಿಂದಲೇ ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಕೊರೋನ ಬಂತು. ನನಗೆ ವಯಸ್ಸಾಗಿದ್ದು, ಬದುಕುವ ಭರವಸೆ ಕಡಿಮೆ ಇದೆ. ಆದರೆ, ನನ್ನ ಮಕ್ಕಳು, ಮೊಮ್ಮಕ್ಕಳಿಗೆ ನನ್ನ ಕಣ್ಣೆದುರೇ ಏನಾದರೂ ಆದರೆ ಅದನ್ನ ನನ್ನಿಂದ ಸಹಿಸಿಕೊಳ್ಳಲು...

ಮನೆ, ಮನೆಗೆ ಹಾಲು ವಿತರಣೆಗೆ ಪೊಲೀಸರ ಅಡ್ಡಿ..!  

ಶಿವಮೊಗ್ಗ: ನಗರ ಪ್ರದೇಶದ ಮನೆಮನೆಗಳಿಗೆ ಹಾಲು ಮಾರಾಟ ಮಾಡುವ ರೈತರಿಗೂ ಬಿಡದೇ ಪೊಲೀಸರು, ದರ್ಪ ಮೆರೆದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.  ಹಾಲು, ತರಕಾರಿ ಮನೆಮನೆಗೆ ತೆರಳಿ ಮಾರಾಟ ಮಾಡಬಹುದು ಎಂದು ಜಿಲ್ಲಾಡಳಿತ ಸೂಚನೆ...

‘ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ’

ಕಲಬುರಗಿ: ಹಗಲಿರುಳು ಎನ್ನದೇ ಕೊರೊನಾ ರೋಗಿಗಳನ್ನ ಬದುಕಿಸೊದಕ್ಕೆ ದುಡಿಯುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗಳ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿರುವಂತಹ ಘಟನೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಗುಂಡೇಪಲ್ಲಿ ಗ್ರಾಮದಲ್ಲಿ ನಡೆದಿದೆ.‌ ಕಳೆದ ನಾಲ್ಕು...

‘ನಾಳೆಯಿಂದ ಯಾರು ಕೂಡ ವಾಹನಗಳಲ್ಲಿ ಓಡಾಡುವಂತಿಲ್ಲ’

ಶಿವಮೊಗ್ಗ : ರಾಜ್ಯ ಸರ್ಕಾರದ ಲಾಕ್ ಡೌನ್ ಮಾರ್ಗಸೂಚಿ ಹೊರಡಿಸಿದ ಬೆನ್ನಲ್ಲೇ, ಶಿವಮೊಗ್ಗದಲ್ಲಿಯೂ ಕಟ್ಟುನಿಟ್ಟಿನ ಲಾಕ್ ಡೌನ್ ಗೆ ನಿರ್ಧಾರ ಮಾಡಲಾಗಿದೆ.  ಇಂದು ಶಿವಮೊಗ್ಗದಲ್ಲಿ ಜಿಲ್ಲೆಯ ವಿವಿಧ ಇಲಾಖಾಧಿಕಾರಿಗಳ ಮತ್ತು ವರ್ತಕರೊಂದಿಗೆ ಜಿಲ್ಲಾಡಳಿತದ ಸಭೆಯಲ್ಲಿ...

Recent Comments