ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ದದ ಮಧ್ಯೆಯೂ ರಷ್ಯಾದಿಂದ ಆಮದುಗಳನ್ನು ಕಡಿತಗೊಳಿಸುವ ಒತ್ತಡ ಇದ್ದರೂ, ಭಾರತವು ತನ್ನ ವಿದೇಶಾಂಗ ನೀತಿಯನ್ನು ತಾನೇ ನಿರ್ಧರಿಸುತ್ತದೆ ಎಂದು ದೃಢವಾಗಿ ಹೇಳಿದ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಬಗ್ಗೆ ರಷ್ಯಾ ಪ್ರಶಂಸೆ ವ್ಯಕ್ತಪಡಿಸಿದೆ.
ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು “ಭಾರತ ದೇಶದ ನಿಜವಾದ ದೇಶಭಕ್ತ” ಎಂದು ಕರೆದಿದ್ದಾರೆ. ಭಾರತದ ಅಭಿವೃದ್ದಿ ಹಾಗೂ ಭದ್ರತೆಗಾಗಿ ಏನು ಬೇಕೋ ಅದರ ಆಧಾರದ ಮೇಲೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಜೈಶಂಕರ್ ಹೇಳಿದ್ದಾರೆ. ಈ ರೀತಿ ಬಹಳಷ್ಟು ದೇಶಗಳು ಹೇಳಲು ಸಾಧ್ಯವಿಲ್ಲ. ಹೀಗಾಗಿ ಜೈಶಂಕರ್ ನಿಜವಾದ ದೇಶಭಕ್ತ ಎಂದು ರಷ್ಯಾ ಪ್ರಶಂಸೆ ವ್ಯಕ್ತಪಡಿಸಿದೆ.