ಬೆಂಗಳೂರು: ಶಾಲೆ ಆರಂಭಕ್ಕೂ ಮುನ್ನವೇ ಸರ್ಕಾರಕ್ಕೆ ಹೊಸ ತಲೆ ನೋವು ಶುರುವಾಗಿದೆ. ಖಾಸಗಿ ಶಾಲೆಗಳ ಬೇಡಿಕೆಗಳನ್ನು ಈಡೇರಿಸದ ಸರ್ಕಾರದ ವಿರುದ್ಧ ಖಾಸಗಿ ಶಾಲೆಗಳು ಇಂದು ಆನ್ ಲೈನ್ ಕ್ಲಾಸ್ ಬಂದ್ ಮಾಡಿ ಪ್ರತಿಭಟನೆ ಮಾಡಲು ಸಜ್ಜಾಗಿವೆ.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಕೆಲ ತಿಂಗಳುಗಳಿಂದ ರುಪ್ಸಾ ರಾಜ್ಯದೆಲೆಡೆ ಪ್ರತಿಭಟನೆ ಮಾಡಿದೆ. ಶಿಕ್ಷಣ ಇಲಾಖೆ ಮನವಿಗೆ ಸ್ಪಂದಿಸದೇ ಇದ್ದರೆ ಶೈಕ್ಷಣಿಕ ವರ್ಷವನ್ನು ಸ್ಥಗಿತ ಮಾಡಿ ಉಪವಾಸ ಸತ್ಯಾಗ್ರಹ ಮಾಡೋದಾಗಿ ಎಚ್ಚರಿಕೆ ನೀಡಿತ್ತು. 12,800 ಖಾಸಗಿ ಶಾಲೆಗಲ್ಲಿ ಶೈಕ್ಷಣಿಕ ವರ್ಷದ ಚಟುವಟಿಕೆಯನ್ನು ಸ್ತಬ್ಧಗೊಳಿಸಲು ತೀರ್ಮಾನಿಸಿದೆ. ಜನವರಿ 6 ರಿಂದ ಫ್ರೀಡಂ ಪಾರ್ಕ್ ನಲ್ಲಿ ಬೇಡಿಕೆ ಈಡೇರುವವರೆಗೂ ಅಹೋರಾತ್ರಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ಶಾಲೆಗಳ ಕೊಲ್ಡ್ ವಾರ್ ಮುಂದುವರೆದಿದೆ. ರುಪ್ಸಾದ ಹೋರಟಕ್ಕೆ ಕ್ಯಾಮ್ಸ್ ಬೆಂಬಲ್ಲ ನೀಡಿಲ್ಲ. ಕ್ಯಾಮ್ಸ್ ಅಡಿಯಲ್ಲಿ ಬರೋ ಶಾಲೆಗಳಲ್ಲಿ ಆನ್ ಲೈನ್ ಕ್ಲಾಸ್ ಬಂದ್ ಆಗೋದಿಲ್ಲ ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ ಹೇಳಿದ್ದಾರೆ. ಇದರಿಂದ ರುಪ್ಸಾ ಮತ್ತು ಕಾಮ್ಸ್ ನಡುವಿನ ಕೋಲ್ಡ್ ವಾರ ಮತ್ತಷ್ಟು ಬಿರುಸಾಗಿದೆ.