Homeರಾಜ್ಯಇತರೆರಾಯಚೂರು RTPS ಅವಘಡ ಕಾರ್ಮಿಕ ದಾರುಣ ಸಾವು

ರಾಯಚೂರು RTPS ಅವಘಡ ಕಾರ್ಮಿಕ ದಾರುಣ ಸಾವು

ರಾಯಚೂರು : ಜಿಲ್ಲೆಯ ಶಕ್ತಿನಗರದಲ್ಲಿರುವ Raichur Thermal Power Station (ಆರ್​​​ಟಿಪಿಎಸ್​)ನಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಗುತ್ತಿಗೆ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.
ಒರಿಸ್ಸಾ ಮೂಲದ ದೀಪಕ್ ನಾಯಕ್ ಮೃತ ದುರ್ದೈವಿ. ಆರ್​ಟಿಪಿಎಸ್​ ಘಟಕದ ಬಂಕರ್​ನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಘಟಕ 4 ಮತ್ತು 5 ರ ನಡುವಿನ ಬಂಕರ್​ನಿಂದ ಕಲ್ಲನ್ನು ಹೊರತೆಗೆಯುತ್ತಿದ್ದಾಗ ಬಂಕರ್​ನೊಳಗೆ ಅವರ ಕೈ ಸಿಲುಕಿಕೊಂಡು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತನ್ನ ರಾತ್ರಿ ಪಾಳಯದ ಕೆಲಸ ಮುಗಿದ ಮೇಲೂ ಅಧಿಕ ಅವಧಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಕಾರ್ಮಿಕನ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಈ ಸಂಬಂಧ ಶಕ್ತಿನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments