Saturday, October 1, 2022
Powertv Logo
Homeಈ ಕ್ಷಣಸಿದ್ದರಾಮಯ್ಯಗೆ RSS ಕಾರ್ಯಕರ್ತರಿಂದ ಚಡ್ಡಿ ಪಾರ್ಸಲ್

ಸಿದ್ದರಾಮಯ್ಯಗೆ RSS ಕಾರ್ಯಕರ್ತರಿಂದ ಚಡ್ಡಿ ಪಾರ್ಸಲ್

ಮಂಡ್ಯ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚಡ್ಡಿ ವಿವಾದ ತಾರಕ್ಕಕ್ಕೇರುತ್ತಿದೆ. ಈ ಬೆನ್ನಲ್ಲೇ ವಿಪಕ್ಷನಾಯಕ ಸಿದ್ದರಾಮಯ್ಯ ಅವರಿಗೆ ಮಂಡ್ಯದ ಆರ್​ಎಸ್​ಎಸ್​ ಕಾರ್ಯಕರ್ತರು ಚಡ್ಡಿ ಪಾರ್ಸಲ್ ಕಳುಹಿಸಿದ್ದಾರೆ.

ಜಿಲ್ಲೆಯ ಕೆ.ಆರ್. ಪೇಟೆಯ RSS ಕಾರ್ಯಕರ್ತರಿಂದ RSS ಚಡ್ಡಿ ಪಾರ್ಸಲ್ ಮಾಡಲಾಗಿದೆ. ಇತ್ತೀಚೆಗೆ ಸಿದ್ದರಾಮಯ್ಯ ಅವರು RSS​ ಚಡ್ಡಿ ಸುಟ್ಟು ಹಾಕುತ್ತೇವೆಂದು ಹೇಳಿದ್ದರು.

ಈ ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಹಿನ್ನೆಲೆ RSS ನ ಖಾಕಿ ಚಡ್ಡಿಯನ್ನ ಕಾರ್ಯಕರ್ತರು ಪಾರ್ಸಲ್ ಮಾಡಿದ್ದಾರೆ. ಬಾಕ್ಸ್​​ನಲ್ಲಿ ಆರ್​ಎಸ್​​ಎಸ್​ ಚಡ್ಡಿ ಹಾಕಿ ಸಿದ್ದು ಮನೆಯ ವಿಳಾಸಕ್ಕೆ ಪಾರ್ಸಲ್ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು ಜೀವನ ಪೂರ್ತಿ ಕಾಲ ಕಳೆದರು, ನಮ್ಮ ಚಡ್ಡಿ ಸುಟ್ಟಾಕಲು ಆಗೊಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

- Advertisment -

Most Popular

Recent Comments