ಕಾಂಗ್ರೆಸ್​ನಿಂದ ರೋಷನ್​ ಬೇಗ್​ ಅಮಾನತು..!

0
743

ಬೆಂಗಳೂರು : ಶಾಸಕ ರೋಷನ್​ ಬೇಗ್ ಅವರನ್ನು ಕಾಂಗ್ರೆಸ್​ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಆರೋಪಗಳ ಹಿನ್ನೆಲೆಯಲ್ಲಿ ಕೆಪಿಸಿಸಿ ಈ ಕ್ರಮ ಕೈಗೊಂಡಿದೆ.
ಸ್ವಪಕ್ಷದ ನಾಯಕರ ವಿರುದ್ಧವೇ ರೋಷನ್ ಬೇಗ್ ಪದೇ ಪದೇ ಮಾತನಾಡುತ್ತಿದ್ದರು. ಹೀಗಾಗಿ ಅವರನ್ನು ಕೆಪಿಸಿಸಿ ಅಮಾನತುಗೊಳಿಸಿದೆ. ಕೆಪಿಸಿಸಿ ಪ್ರಸ್ತಾವನೆಗೆ ಎಐಸಿಸಿ ಅನುಮೋದನೆ ನೀಡಿದೆ. ತಕ್ಷಣದಿಂದಲೇ ಈ ಆದೇಶ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ.

ರೋಷನ್​​ ಬೇಗ್​​ ಸಿದ್ದರಾಮಯ್ಯ, ವೇಣುಗೋಪಾಲ್​ ವಿರುದ್ಧವೂ ಹರಿಹಾಯ್ದಿದ್ದರು. ಅಷ್ಟೇ ಅಲ್ಲದೆ IMA ವಂಚಕ ಮನ್ಸೂರ್​ ಜೊತೆಯಲ್ಲೂ ಗುರ್ತಿಸಿಕೊಂಡಿದ್ದರು. ವಂಚಕ ಮನ್ಸೂರ್ ಆಡಿಯೋದಲ್ಲಿ ಬೇಗ್ ಅವರು ತನ್ನಿಂದ 400 ಕೋಟಿ ಪಡೆದಿದ್ದಾರೆ ಅಂತ ಆರೋಪಿಸಿದ್ದ.

LEAVE A REPLY

Please enter your comment!
Please enter your name here