ರೋಷನ್​ ಬೇಗ್​​ SIT ವಶಕ್ಕೆ

0
203

ಬೆಂಗಳೂರು : IMA ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿನಗರದ ಶಾಸಕ ರೋಷನ್​ ಬೇಗ್​ರನ್ನು SIT ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ.

ನಿನ್ನೆ IMA ವಂಚಕ ಮನ್ಸೂರ್ ಅಲಿ ಖಾನ್​ 24 ಗಂಟೆಯೊಳಗೆ ಬೆಂಗಳೂರಿಗೆ ಬರೋದಾಗಿ  ವಿಡಿಯೋ ಮೂಲಕ ತಿಳಿಸಿದ್ದ. ಮನ್ಸೂರ್ ವಿಡಿಯೋ ಬಿಡುಗಡೆ ಮಾಡಿದ ಬೆನ್ನಲ್ಲೇ ರೋಷನ್​ ಬೇಗ್​ರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ಧಾರೆ. ಎರಡು ಬಾರಿ IMA ವಂಚನೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು SIT ಅಧಿಕಾರಿಗಳು ರೋಷನ್​ಬೇಗ್​ಗೆ ನೋಟೀಸ್ ನೀಡಿದ್ದರು. ಆದರೆ,  ರೋಷನ್ ಬೇಗ್​ ಹಾಜರಾಗಿರಲಿಲ್ಲ.  ನಿನ್ನೆ ರಾತ್ರಿ  ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂಬೈಗೆ ಫ್ಲೈಟ್​ ಹತ್ತಲು ಹೋದಾಗ SIT ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ. ರೋಷನ್​ ಬೇಗ್​ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಪಿ.ಎ ಸಂತೋಷ್​ ಕೂಡ ಇದ್ದರು ಎಂದು ಹೇಳಲಾಗುತ್ತಿದೆ.  ಬಿಜೆಪಿಯವರು ರೋಷನ್​ ಬೇಗ್​ರನ್ನು ಮುಂಬೈಗೆ ಕರೆದೊಯ್ಯಲು ಪ್ರಯತ್ನಿಸಿದ್ದರು ಎಂದು ಸಿಎಂ ಹೆಚ್‌ ಡಿಕೆ ಬಿಜೆಪಿಯವರ ವಿರುದ್ದ ಕಿಡಿಕಾರುತ್ತಿದ್ದಾರೆ. ಮತ್ತೊಂದೆಡೆ ಸಿಎಂ ಕುಮಾರಸ್ವಾಮಿ ತಮ್ಮಸರ್ಕಾರ ಉಳಿಸಿಕೊಳ್ಳಲು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ.

LEAVE A REPLY

Please enter your comment!
Please enter your name here