Sunday, June 26, 2022
Powertv Logo
Homeಕ್ರೀಡೆಖೇಲ್​ ರತ್ನ ಪ್ರಶಸ್ತಿಗೆ ರೋಹಿತ್ ಶರ್ಮಾ ಸೇರಿದಂತೆ ನಾಲ್ವರ ಹೆಸರು ಶಿಫಾರಸ್ಸು

ಖೇಲ್​ ರತ್ನ ಪ್ರಶಸ್ತಿಗೆ ರೋಹಿತ್ ಶರ್ಮಾ ಸೇರಿದಂತೆ ನಾಲ್ವರ ಹೆಸರು ಶಿಫಾರಸ್ಸು

ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಸೇರಿದಂತೆ ನಾಲ್ವರು ಕ್ರೀಡಾಪಟುಗಳ ಹೆಸರನ್ನು ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್​ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ.

ಮಂಗಳವಾರ ಕ್ರೀಡಾ ಪ್ರಶಸ್ತಿ ಸಮಿತಿಯು ರೋಹಿತ್ ಶರ್ಮಾ, ಟೇಬಲ್ ಟೆನಿಸ್ ತಾರೆ ಮನಿಕಾ ಬಾತ್ರಾ , ಪ್ಯಾರಾ ಅಥ್ಲಿಟ್​ ಮರಿಯಪ್ಪನ್ ತಂಗವೇಲು,  ಮಹಿಳಾ ಕುಸ್ತಿಪಟು ವಿನೇಶ್​ ಪೋಗಾಟ್​ ಹೆಸರನ್ನು ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ.

ರೋಹಿತ್ ಶರ್ಮಾ ಪ್ರಶಸ್ತಿಗೆ ಭಾಜನರಾದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸುತ್ತಿರುವ ನಾಲ್ಕನೇ ಕ್ರಿಕೆಟಿಗರಾಗುತ್ತಾರೆ. ಈ ಮೊದಲು ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಈ ಗೌರವ ಪಡೆದಿದ್ದರು.

2 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments