ಧೋನಿಯನ್ನೇ ಹಿಂದಿಕ್ಕಿದ ರೋಹಿತ್ ಶರ್ಮಾ..!

0
444

ಹಿಟ್​ ಮ್ಯಾನ್​ ರೋಹಿತ್ ಶರ್ಮಾ ಕೂಲ್​ ಕ್ಯಾಪ್ಟನ್​ ಮಹೇಂದ್ರ ಸಿಂಗ್ ಧೋನಿ ಅವರನ್ನೇ ಹಿಂದಿಕ್ಕಿ ಬಿಟ್ಟಿದ್ದಾರೆ. ಎಮರೇಟ್ಸ್ ಓಲ್ಡ್ ಟ್ರಾಫರ್ಡ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಾಕಿಸ್ತಾನದ ವಿರುದ್ಧದ ಮ್ಯಾಚ್​ನಲ್ಲಿ ರೋಹಿತ್ ಶರ್ಮಾ ನೂತನ ದಾಖಲೆಯನ್ನು ಬರೆದಿದ್ದಾರೆ. ಟೀಮ್ ಇಂಡಿಯಾದ ಪರ ಇಂಟರ್​ನ್ಯಾಷನಲ್ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್​ಮನ್​ ಅನ್ನುವ ಕೀರ್ತಿಗೆ ಹಿಟ್ ಮ್ಯಾನ್ ಪಾತ್ರರಾಗಿದ್ದಾರೆ.
113 ಬಾಲ್​ಗಳಲ್ಲಿ 3 ಸಿಕ್ಸರ್​, 14 ಬೌಂಡರಿ ಸಮೇತ ರೋಹಿತ್ 140ರನ್ ಸಿಡಿಸಿದ್ದಾರೆ. ಇಂದಿನ ಮೂರು ಸಿಕ್ಸರ್ ಸೇರಿ ರೋಹಿತ್ ಶರ್ಮಾ ಟೆಸ್ಟ್, ಒಡಿಐ ಹಾಗೂ ಟಿ20ಐ ಮೂರೂ ಮಾದರಿಯ ಕ್ರಿಕೆಟ್​ನಿಂದ ಒಟ್ಟಾರೆಯಾಗಿ 358 ಸಿಕ್ಸರ್​ಗಳನ್ನು ಸಿಡಿಸಿದಂತಾಗಿದೆ. ಈ ಮೂಲಕ ಇದುವರೆಗೆ 355 ಸಿಕ್ಸರ್​​​​ಗಳನ್ನು ಸಿಡಿಸಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ರೋಹಿತ್ ಹಿಂದಿಕ್ಕಿದಂತಾಗಿದೆ.
ಭಾರತದ ಪರ ಅತೀ ಹೆಚ್ಚು ಸಿಕ್ಸರ್​ ಸಿಡಿಸಿದವರ ಪೈಕಿ ರೋಹಿತ್ ಶರ್ಮಾ (358) ಮೊದಲ ಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಧೋನಿ (355), ಮೂರನೇ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ (264), 4ನೇ ಸ್ಥಾನದಲ್ಲಿ ಯುವರಾಜ್​ ಸಿಂಗ್ (251) 5ನೇ ಸ್ಥಾನದಲ್ಲಿ ಸೌರವ್ ಗಂಗೂಲಿ (247) ಇದ್ದಾರೆ.
ಇಡೀ ವಿಶ್ವ ಕ್ರಿಕೆಟ್ ಅನ್ನು ಪರಿಗಣಿಸಿದ್ರೆ ವೆಸ್ಟ್​ ಇಂಡೀಸ್​ನ ಕ್ರೀಸ್​ಗೇಲ್ (521) ಮೊಲದ ಸ್ಥಾನದಲ್ಲಿ, ಪಾಕಿಸ್ತಾನದ ಶಾಹಿದ್ ಅಫ್ರಿದಿ (476) ಎರಡನೇ ಸ್ಥಾನದಲ್ಲಿ ಹಾಗೂ ನ್ಯೂಜಿಲೆಂಡ್​ನ ಮೆಕ್ಲಾಮ್ (398) ಮೂರನೇ ಸ್ಥಾನದಲ್ಲಿದ್ದಾರೆ. ನಮ್ಮ ರೋಹಿತ್ ಶರ್ಮಾ (358) 4ನೇ ಹಾಗೂ ಧೋನಿ (355) 5ನೇ ಸ್ಥಾನದಲ್ಲಿದ್ದಾರೆ.

LEAVE A REPLY

Please enter your comment!
Please enter your name here