ಸಚಿನ್​, ಕೊಹ್ಲಿ ನಂತರದ ಸ್ಥಾನದಲ್ಲಿ ರೋಹಿತ್..!

0
171

ಡಬಲ್ ಸೆಂಚುರಿ ಸ್ಟಾರ್ ರೋಹಿತ್ ಶರ್ಮಾ ಸ್ಕ್ರೀಸ್​ನಲ್ಲಿ ಇರೋತನಕ ಎದುರಾಳಿ ಬೌಲರ್​ ಗಳಿಗೆ ಚಳಿ-ಜ್ವರ ಕಮ್ಮಿ ಆಗಲ್ಲ. ರೋಹಿತ್ ನಿಂತ್ರೆ ಸಾಕು ರನ್ ಮಳೆ ಗ್ಯಾರೆಂಟಿ. ನಿನ್ನೆ ಆಗಿದ್ದೂ ಅದೇ.. ಸೌತ್ ಆಫ್ರಿಕಾ ವಿರುದ್ಧದ ಮ್ಯಾಚ್​​ನಲ್ಲಿ ರೋಹಿತ್ ಶರ್ಮಾ ಸೆಂಚುರಿ (ಅಜೇಯ 122) ಸಿಡಿಸಿ ಮಿಂಚಿದ್ರು. ಅವರ ಶತಕದ ನೆರವಿನಿಂದ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿದೆ. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ಸಚಿನ್, ಕೊಹ್ಲಿ ನಂತರ ಸ್ಥಾನಕ್ಕೆ ಬಂದಿದ್ದಾರೆ.
ಹೌದು, ಏಕದಿನ ಕ್ರಿಕೆಟ್​ ನಲ್ಲಿ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ರೆಕಾರ್ಡ್​​ ಮುರಿದಿದ್ದಾರೆ. ಸೌರವ್ ಅವರನ್ನು ಹಿಂದಿಕ್ಕಿ ಅತೀ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್​​ಮನ್​ಗಳ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಬಂದಿದ್ದಾರೆ.
ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್ 463 ಮ್ಯಾಚ್​​​ ಗಳಿಂದ 49 ಶತಕ ಸಿಡಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಟೀಮ್ ಇಂಡಿಯಾ ನಾಯಕ, ರನ್​ಮಷಿನ್ ಕೊಹ್ಲಿ 228 ಮ್ಯಾಚ್​ ಗಳಿಂದ 41 ಶತಕ ಸಿಡಿಸಿದ್ದಾರೆ. ಸಚಿನ್ ರೆಕಾರ್ಡ್ ಮುರಿಯಲು ಇನ್ನು ಒಡಿಐ ಸೆಂಚುರಿ ಕೊಹ್ಲಿಗೆ ಬೇಕಿದೆ. ಮೂರನೇ ಸ್ಥಾನಕ್ಕೆ ಜಿಗಿದಿರುವ ಹಿಟ್ ಮ್ಯಾನ್​ ರೋಹಿತ್ ಶರ್ಮಾ 207 ಮ್ಯಾಚ್​ ಗಳಿಂದ 23 ಸೆಂಚುರಿ ಬಾರಿಸಿದ್ದಾರೆ. ಅದರಲ್ಲಿ 3 ಡಬಲ್​ ಸೆಂಚುರಿ ಕೂಡ ಇದೆ.
ಇನ್ನು ಭಾರತದ ಪರ ಅತೀ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಸೌರವ್ ಗಂಗೂಲಿ (22) 4ನೇ ಸ್ಥಾನದಲ್ಲಿ, ಶಿಖರ್ ಧವನ್ (16) 5ನೇ ಸ್ಥಾನದಲ್ಲಿಯೂ ಇದ್ದಾರೆ.

LEAVE A REPLY

Please enter your comment!
Please enter your name here