Friday, September 30, 2022
Powertv Logo
HomePower Specialಮೈಶುಗರ್ ಮೇಲೆ ರಾಕ್​ಲೈನ್ ವೆಂಕಟೇಶ್ ಕಣ್ಣು..!

ಮೈಶುಗರ್ ಮೇಲೆ ರಾಕ್​ಲೈನ್ ವೆಂಕಟೇಶ್ ಕಣ್ಣು..!

ಮಂಡ್ಯ: ಚಿತ್ರ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಮಂಡ್ಯ ಜಿಲ್ಲೆಯ ಜೀವನಾಡಿ ಮೈಶುಗರ್ ಕಾರ್ಖಾನೆ ಮೇಲೆ ಕಣ್ಣಿಟ್ಟಿದ್ದಾರಾ? ಸಂಸದೆ ಸುಮಲತಾ ಅಂಬರೀಶ್ ಅವರ ಖಾಸಗಿ ಪರ ವಕಾಲತ್ತಿನ ಹಿಂದೆ, ಸುಮಲತಾ ಅವರ ಆಪ್ತ ರಾಕ್​ಲೈನ್ ವೆಂಕಟೇಶ್ ಇದ್ದಾರಾ? ಸ್ವಾಭಿಮಾನದ ಹೆಸರಲ್ಲಿ ಗೆದ್ದ ಸುಮಲತಾ, ಮಂಡ್ಯ ಜನರಿಗೆ ಅನ್ಯಾಯ ಮಾಡ್ತಿದ್ದಾರಾ? ತಾವೇ ಗೆಲ್ಲಿಸಿದ ಸಂಸದೆ ವಿರುದ್ಧ ಮಂಡ್ಯ ಜನ, ರೈತ ಮುಖಂಡರು ತಿರುಗಿ ಬಿದ್ದಿರೋದು ಸತ್ಯನಾ? ಈ ಎಲ್ಲಾ ಪ್ರಶ್ನೆಗಳು ಮಂಡ್ಯ ಮಾತ್ರವಲ್ಲ ಇಡೀ ಕರುನಾಡಿನಾದ್ಯಂತ ಉತ್ತರ ಹುಡುಕುತ್ತಾ ಹರಿದಾಡ್ತಿವೆ.

ಹೌದು, ಈ ಎಲ್ಲಾ ಪ್ರಶ್ನೆಗಳಿಗೂ ಕಾರಣವಾಗಿರೋದು ಸಂಸದೆ ಸುಮಲತಾ ಅವರ ಮೈಶುಗರ್ ಕುರಿತ ಖಾಸಗಿ ಪರ ನಿರಂತರ ವಕಾಲತ್ತು. ಮಂಡ್ಯ ವಿಚಾರದ ಪ್ರತಿ ಹಂತದಲ್ಲೂ ಸುಮಲತಾ ಹಿಂದಿರುವ ರಾಕ್​ಲೈನ್ ವೆಂಕಟೇಶ್.

2019ರ ಲೋಕಸಭಾ ಸಾರ್ವತ್ರಿಕ ಚುನಾವಣೆ ವೇಳೆ ಮಂಡ್ಯ ಕ್ಷೇತ್ರ ಬಹಳಷ್ಟು ಸುದ್ದಿಯಾಗಿತ್ತು. ಕುಟುಂಬ ರಾಜಕಾರಣಕ್ಕೆ ವಿರುದ್ಧವಾಗಿ, ಸ್ವಾಭಿಮಾನದ ಹೆಸರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಶ್ ಅವರನ್ನ ಮಂಡ್ಯ ಕ್ಷೇತ್ರದ ಜನತೆ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದ್ರು.

ಚುನಾವಣೆ ಸಂದರ್ಭದಿಂದಲೂ ಸುಮಲತಾ ಬೆನ್ನಿಗೆ ನಿಂತಿರುವ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್, ಚುನಾವಣೆ ಬಳಿಕವೂ ಸಂಸದರ ಹಿಂದೆ ಮುಂದೆ, ಅಕ್ಕಪಕ್ಕ ಸುಳಿದಾಡ್ತಿದ್ದಾರೆ.

ಅದು ಅವರ ವೈಯಕ್ತಿಕ ಅಂತಾ ಕೂಡ ಆಪ್ತರು ಹೇಳಬಹುದು. ಹೌದು, ಅದು ಅವರ ವೈಯಕ್ತಿಕ ವಿಚಾರವೇ ಇರಬಹುದು. ಆದರೆ, ಸಂಸದರ ಕಾರ್ಯಕ್ರಮಗಳಲ್ಲೂ ಜವಾಬ್ದಾರಿ ಮರೆತು, ಮೂಗು ತೂರಿಸೋದು ಎಷ್ಟು ಸರಿ ಅನ್ನೋ ಮಾತುಗಳೂ ಕೇಳಿ ಬರ್ತಿವೆ.

ಇತ್ತೀಚೆಗೆ ಮೈಶುಗರ್ ಕಾರ್ಖಾನೆಗೆ ಸಚಿವರಾದ ಶಿವರಾಂ ಹೆಬ್ಬಾರ್, ಕೆ.ಸಿ.ನಾರಾಯಣಗೌಡ ಆಗಮಿಸಿದ್ರು. ಅದು ಸರ್ಕಾರಿ ಕಾರ್ಯಕ್ರಮ. ಆ ಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಭಾಗವಹಿಸೋದು ಜವಾಬ್ದಾರಿ. ಆದರೆ ಆ ಸಭೆಯಲ್ಲಿ ರಾಕ್​ಲೈನ್ ವೆಂಕಟೇಶ್ ಅವರಿಗೆ ಏನು ಕೆಲಸ ಅನ್ನೋ ಪ್ರಶ್ನೆ ಮಂಡ್ಯ ಜನರಲ್ಲಿ ಚರ್ಚೆಯಾಗ್ತಿದೆ.

ಇನ್ನು ರಾಕ್​ಲೈನ್ ವೆಂಕಟೇಶ್ ಸಂಬಂಧಿ ಆಂಧ್ರದಲ್ಲಿ ಸಕ್ಕರೆ ಕಾರ್ಖಾನೆ ನಡೆಯುತ್ತಿದ್ದಾರಂತೆ. ಹೀಗಾಗಿ, ಮಂಡ್ಯದ ಮೈಶುಗರ್ ಕಾರ್ಖಾನೆಯನ್ನು ರಾಕ್​ಲೈನ್ ತಮ್ಮ ವಶಕ್ಕೆ ಪಡೆಯಲು ಪ್ರಯತ್ನ ಮಾಡ್ತಿದ್ದಾರಂತೆ. ಹೀಗಾಗಿ, ಸ್ವತಃ ಮುಖ್ಯಮಂತ್ರಿಗಳೇ ಖಾಸಗಿ ನಿರ್ಧಾರದಿಂದ ಹಿಂದೆ ಸರಿದಿದ್ದರೂ, ಸಂಸದೆ ಸುಮಲತಾ ಅಂಬರೀಶ್ ಮಾತ್ರ ಖಾಸಗಿಯವರಿಗೆ ಅಥವಾ ಓ ಅಂಡ್ ಎಂಗೆ ನೀಡಬೇಕು ಅನ್ನೋ ಮಾತುಗಳನ್ನು ಆಡ್ತಿದ್ದಾರೆ ಅನ್ನೋದು ಮಂಡ್ಯದ ಜನರು ಹಾಗೂ ರೈತ ಮುಖಂಡರ ಆರೋಪ.

*ಮಂಡ್ಯ ವಿಚಾರದಲ್ಲಿ ರಾಕ್ ಲೈನ್ ಹಸ್ತಕ್ಷೇಪ!?

ಸಿನಿಮಾದಂತೆ ಸಂಸದೆಗೆ ಡೈರೆಕ್ಟ್ ಮಾಡ್ತಿದ್ದಾರಾ ರಾಕ್ ಲೈನ್ ವೆಂಕಟೇಶ್?:

ಮಂಡ್ಯದ ಅದರಲ್ಲೂ ಸಂಸದರ ಪ್ರತಿ ವಿಚಾರದಲ್ಲೂ ರಾಕ್​ಲೈನ್ ವೆಂಕಟೇಶ್ ಪಾತ್ರ ಇದೆ ಎನ್ನುವ ಮಾತುಗಳು ಕೇಳಿ ಬರ್ತಿವೆ.

ಪ್ರತಿಸಲ ಸಂಸದರು ಕ್ಷೇತ್ರಕ್ಕೆ ಬಂದಾಗಲೆಲ್ಲಾ ರಾಕ್​ಲೈನ್ ಜೊತೆಯಲ್ಲೇ ಇರ್ತಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಜನರ ಕೆಲಸ ಕಾರ್ಯಗಳು ಏನಾದ್ರೂ ಆಗಬೇಕು ಅಂದ್ರೆ, ಸಂಸದರ ಸುತ್ತ ಇರೋ ಆಪ್ತರ ಕೂಟದ ಜೊತೆಗೆ ರಾಕ್​ಲೈನ್ ಒಪ್ಪಿದರೆ ಸಂಸದರು ಬೇಗ ಸ್ಪಂದಿಸುತ್ತಾರಂತೆ.

ಇನ್ನು ರಾಕ್ ಲೈನ್ ವೆಂಕಟೇಶ್ ಮತ್ತು ಸುಮಲತಾ ಅಂಬರೀಶ್ ಮೂಲತಃ ಸಿನಿಮಾ ರಂಗದವರು. ಸಿನಿಮಾಗಳಂತೆ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ರಾಕ್​ಲೈನ್ ವೆಂಕಟೇಶ್ ಡೈರೆಕ್ಟ್ ಮಾಡ್ತಿದ್ದರಾ ಅಂತಾ ಜನ ಪ್ರಶ್ನೆ ಮಾಡ್ತಿದ್ದಾರೆ 

ಇನ್ನು ಸಂಸದೆ ಸುಮಲತಾ ನಡೆಗೆ ಮಂಡ್ಯ ರೈತ  ಮುಖಂಡರು ಆಕ್ರೋಶ ಹೊರ ಹಾಕ್ತಿದ್ದಾರೆ. ಇತ್ತೀಚೆಗೆ ಮಂಡ್ಯದ ಗಾಂಧಿ ಭವನದಲ್ಲಿ ನಡೆದ ಮಂಡ್ಯ ರೈತ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಒಕ್ಕೊರಲ ಖಂಡನೆ ವ್ಯಕ್ತವಾಗಿದೆ.

ಮಂಡ್ಯ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಹಿರಿಯ ಕಾವೇರಿ ಹೋರಾಟಗಾರ ಡಾ.ಜಿ.ಮಾದೇಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೈತ ನಾಯಕಿ ಸುನಂದ ಜಯರಾಂ ಹರಿಹಾಯ್ದಿದ್ದಾರೆ.

ಸಂಸದರ ಪ್ರತಿ ಮಾತು, ನಡೆ ಖಾಸಗೀಕರಣದ ಪರ ಇದೆ. ರೈತರ ವಿಚಾರ ಮಾತಾಡ್ತಾರೆ ಅಷ್ಟೇ. ಮಾಡೋದೆಲ್ಲ ಖಾಸಗಿ ವಿಷಯವೇ. ಅವರ ಹಿಂದೆ ಖಾಸಗೀಕರಣದ ವ್ಯವಸ್ಥೆ, ಹುನ್ನಾರ ಅಡಗಿದೆ. ಯಾವತ್ತೂ ನಾವು ವ್ಯಕ್ತಿ ಹೆಸರು ಹೇಳಲ್ಲ. ನೇರವಾಗಿ ಇದ್ದರೆ, ಬಿಡಲ್ಲ.

ಅವರ ಹೆಸರು ಹೇಳೋಕೆ ನಾವು ಇಚ್ಛೆ ಪಡಲ್ಲ. ಸಂಸದರು ಸಂಸದರಾಗಿ ಕೆಲಸ ಮಾಡಬೇಕು. ಆ ಹೆಸರಿನ ವ್ಯಕ್ತಿಗಳು ಹಿನ್ನೆಲೆಯಲ್ಲಿ ಏನು ಸಹಕಾರ ಬೇಕು ಇಟ್ಟುಕೊಳ್ಳಲಿ. ಎಲ್ಲವನ್ನೂ ಗಮನಿಸುತ್ತಿದ್ದೇವೆ. ಸಂಸದರು ಇರುವ ಸ್ಥಳದಲ್ಲಿ ಅವರೆಲ್ಲ ಬರೋದು, ಅವರದ್ದೇ ಜವಾಬ್ದಾರಿ ಎಂದು ನಡೆದುಕೊಳ್ಳೋದನ್ನು ಗಮನಿಸುತ್ತಿದ್ದೇವೆ.

ಅದೆಲ್ಲವನ್ನು ಖಂಡಿಸುತ್ತೇವೆ. ಅದು ಅವರ ಪರ್ಸನಲ್ ವಿಷಯ. ನಾವು ಅವರ ವಿಷಯದ ಬಗ್ಗೆ ಚರ್ಚೆ ಮಾಡೋಕೆ ಇಷ್ಟಪಡಲ್ಲ. ನೇರವಾಗಿ ನಾವು ಸಂಸದರಿಗೆ ಹೇಳ್ತೇವೆ. ಸಂಸದರ ನಡೆ, ನುಡಿಯಲ್ಲಿ ಖಾಸಗೀಕರಣದ ಹುನ್ನಾರ ಎದ್ದು ಕಾಣುತ್ತಿದೆ.

ಓ ಅಂಡ್ ಎಂ ಆಗ್ಲೇಬೇಕು ಅಂತಾರೆ.

ಸಂಸದರ ಮನಸ್ಸಲ್ಲಿ ಇನ್ನೇನಿದೆ ಅಂತಾ ಭಾವಿಸೋಣ? ಸಂಸದರಿಂದ ನಾವು ನಿರೀಕ್ಷೆ ಮಾಡೋದೇ ಬೇರೆ. ಜಿಲ್ಲೆಯ ಅಭಿವೃದ್ಧಿ, ಜಿಲ್ಲೆಗೆ ಅವರ ಯೋಜನೆಗಳು, ಕೇಂದ್ರದ ಮುಂದೆ ಮಂಡಿಸಿದ, ಮಂಡಿಸಲು ಮುಂದಾಗಿರುವ ಯೋಜನೆ ಪ್ರಕಟಿಸಲಿ ಅಂತಾ ಕಟುವಾಗಿಯೇ ಎಚ್ಚರಿಕೆ ನೀಡಿದ್ದಾರೆ.

4 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments